ಚೋರಡಿಯಲ್ಲಿ ಅಪಘಾತ/ ಮೆಗ್ಗಾನ್​ ಆಸ್ಪತ್ರೆಗೆ ಬಿವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ದೌಡು/ ಸಾವು ನೋವಿನ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಕೊಟ್ಟ ನಿಖರ ಮಾಹಿತಿ ಇಲ್ಲಿದೆ

Here's the exact information given by SP Mithun Kumar about the accident at Choradi/ BY Raghavendra, B Y Vijayendra Visit at Meggan Hospital

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Here's the exact information given by SP Mithun Kumar about the accident at Choradi/ BY Raghavendra, B Y Vijayendra Visit at Meggan Hospital

KARNATAKA NEWS/ ONLINE / Malenadu today/ May 11, 2023 GOOGLE NEWSಶಿವಮೊಗ್ಗ, ಇಲ್ಲಿನ ಚೋರಡಿ ಬಳಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಗೊಂಡವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಇಬ್ಬರು ಸಾವನ್ನಪ್ಪಿದ್ದು ಮೂವತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಆಸ್ಪತ್ರೆಗೆ ದೌಡಾಯಿಸಿದ ಬಿವೈ ವಿಜಯೇಂದ್ರ ಹಾಗೂ ಬಿವೈ ರಾಘವೇಂದ್ರ 

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವಿಶೇಷ ವೈದ್ಯರ ತಂಡ, ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದೆ. ಘಟನೆಯ ಬಗ್ಗೆ ವಿಷಯ ತಿಳಿಯುತ್ತಲೇ ಸಂಸದ ಬಿವೈ ರಾಘವೇಂದ್ರ ಹಾಗೂ ಬಿವೈ ವಿಜಯೇಂದ್ರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ  ದೌಡಾಯಿಸಿದ್ದಾರೆ. ಗಾಯಾಳುಗಳ ಬಳಿಯಲ್ಲಿ ಘಟನೆಯ ಮಾಹಿತಿ ಪಡೆದ ಇಬ್ಬರು ಸಹೋದರರು, ಚಿಕಿತ್ಸೆಯ ವ್ಯವಸ್ಥೆಯನ್ನು ಗಮನಿಸುತ್ತಿದ್ದಾರೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? 

ಇನ್ನೂ ಘಟನೆ ಬಗ್ಗೆ ವಾಟ್ಸ್ಯಾಪ್​ ಮೂಲಕ ಮಾಹಿತಿ ನೀಡಿರುವ ಎಸ್​ಪಿ ಮಿಥುನ್​ಕುಮಾರ್​ ಇದುವರೆಗೂ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹೊಸದುರ್ಗದ ತಿಪ್ಪೇಸ್ವಾಮಿ ಹಾಗು ಇನ್ನೊಬ್ಬರು ಅಪರಿಚಿತ ಪುರುಷ ಎಂದು ತಿಳಿಸಿದ್ದಾರೆ. 

ಇನ್ನೂ 30 ಮಂದಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ನಾಲ್ವರನ್ನ ಆಯನೂರಿನ ಸಿಹೆಚ್​ಸಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದ್ದು, ಅವರನ್ನು ಸಹ ಮೆಗ್ಗಾನ್​ಗೆ ಶಿಪ್ಟ್​ ಮಾಡಲಾಗುತ್ತಿದೆ. ಇನ್ನೂ ಮೂವರ ಸ್ಥಿತಿಯು ಗಂಭೀರವಾಗಿದ್ದು,  6 ಜನರಿಗೆ ಮೈನರ್​ ಇಂಜುರಿಯಾಗಿದೆ ಎಂದು ತಿಳಿಸಿದ್ದಾರೆ. 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor