ಚೋರಡಿಯಲ್ಲಿ ಭೀಕರ ಅಪಘಾತ/ ಇಷ್ಟಕ್ಕೂ ಹೇಗಾಯ್ತು ಆಕ್ಸಿಡೆಂಟ್ ? ಪ್ರತ್ಯಕ್ಷದರ್ಶಿ ಹೇಳಿದ್ದೇನು?

Terrible accident in Choradi/ After all, how did the accident happen? What did the eyewitness say?

ಚೋರಡಿಯಲ್ಲಿ ಭೀಕರ ಅಪಘಾತ/ ಇಷ್ಟಕ್ಕೂ ಹೇಗಾಯ್ತು ಆಕ್ಸಿಡೆಂಟ್ ? ಪ್ರತ್ಯಕ್ಷದರ್ಶಿ ಹೇಳಿದ್ದೇನು?

KARNATAKA NEWS/ ONLINE / Malenadu today/ May 11, 2023 GOOGLE NEWS  

ಚೋರಡಿಯ ಬಳಿ ನಡೆದ ಅಪಘಾತದ ಘಟನೆಯನ್ನು ಪ್ರತ್ಯಕ್ಷ ದರ್ಶಿ ಹಾಗು ಗಾಯಾಳು ಒಬ್ಬರು ವಿವರಿಸಿದ್ದಾರೆ ಅವರು ಹೇಳುವ ಪ್ರಕಾರ, ಶಿಕಾರಿಪುರದಿಂದ ಬರುತ್ತಿದ್ದ ಬಸ್ ಸಂಜೆ ಏಳು ಗಂಟೆಯೊಳಗೆ ಶಿವಮೊಗ್ಗ ತಲುಪಬೇಕಿತ್ತಂತೆ. ಆ ಕಾರಣಕ್ಕೆ ಹಿತ್ಲಾ ದಾಟುತ್ತಲೇ ಚಾಲಕ ಓವರ್ ಸ್ಪಿಡ್​​ ನಲ್ಲಿ ಬಸ್ ಚಲಾಯಿಸಿದ್ದಾನೆ. ಕುಮದ್ವತಿ ಸೇತುವೆಯ ಬಳಿ ಓವರ್​ ಟೇಕ್​ ಮಾಡುತ್ತಿದ್ದಾಗ ಎದುರಿನಿಂದ ಇನ್ನೊಂದು ಬಸ್​ ಬಂದಿದೆ. ಗಾಡಿ ಕಂಟ್ರೋಲ್​ಗೆ ಸಿಗಲಿಲ್ಲ. ಎದುರಿನ ಬಸ್​ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಕ್ಸಿಡೆಂಟ್ ಆಗಿದೆ ಎನ್ನುತ್ತಾರೆ. 

ಅತಿವೇಗ ಅಪಾಯಕಾರಿ ಎಂದು ಗೊತ್ತಿದ್ದರೂ ಖಾಸಗಿ ಬಸ್​ ಗಳು ತಮ್ಮ ರೂಟ್ ಟೈಮಿಂಗ್ಸ್​ನ್ನ ಹೇಗಾದರೂ ರೀಚ್ ಮಾಡಬೇಕು ಎಂಬ ಕಾರಣಕ್ಕೆ ಓವರ್​ ಸ್ಪೀಡ್​ನಲ್ಲಿ ಚಲಾಯಿಸುವುದು ಹೊಸದೇನಲ್ಲ . ಇದರ ಪರಿಣಾಮ ಎನಾಗುತ್ತದೆ ಎಂಬುದಕ್ಕೆ ಇವತ್ತಿನ ಘಟನೆ ಸಾಕ್ಷಿಯಾಗಿದೆ.

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? 

ಇನ್ನೂ ಘಟನೆ ಬಗ್ಗೆ ವಾಟ್ಸ್ಯಾಪ್​ ಮೂಲಕ ಮಾಹಿತಿ ನೀಡಿರುವ ಎಸ್​ಪಿ ಮಿಥುನ್​ಕುಮಾರ್​ ಇದುವರೆಗೂ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹೊಸದುರ್ಗದ ತಿಪ್ಪೇಸ್ವಾಮಿ ಹಾಗು ಇನ್ನೊಬ್ಬರು ಅಪರಿಚಿತ ಪುರುಷ ಎಂದು ತಿಳಿಸಿದ್ದಾರೆ. 

ಇನ್ನೂ 30 ಮಂದಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ನಾಲ್ವರನ್ನ ಆಯನೂರಿನ ಸಿಹೆಚ್​ಸಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದ್ದು, ಅವರನ್ನು ಸಹ ಮೆಗ್ಗಾನ್​ಗೆ ಶಿಪ್ಟ್​ ಮಾಡಲಾಗುತ್ತಿದೆ. ಇನ್ನೂ ಮೂವರ ಸ್ಥಿತಿಯು ಗಂಭೀರವಾಗಿದ್ದು,  6 ಜನರಿಗೆ ಮೈನರ್​ ಇಂಜುರಿಯಾಗಿದೆ ಎಂದು ತಿಳಿಸಿದ್ದಾರೆ. 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media