ಅಂಡರ್‌ ಪಾಸ್‌ ಬ್ಯಾರಿಕೇಡ್‌ಗೆ ಅಪರಿಚಿತ ವಾಹನ ಡಿಕ್ಕಿ | ಶಿವಮೊಗ್ಗ-ಭದ್ರಾವತಿ ರೈಲು ಸಂಚಾರಕ್ಕೆ ಅಡ್ಡಿ | ತಡವಾಗಿ ಬೆಂಗಳೂರಿಗೆ ಜನಶತಾಬ್ದಿ

Unidentified vehicle hits underpass barricade | Shimoga-Bhadravathi train services disrupted | Janshatabdi to Bengaluru late

ಅಂಡರ್‌ ಪಾಸ್‌ ಬ್ಯಾರಿಕೇಡ್‌ಗೆ ಅಪರಿಚಿತ ವಾಹನ ಡಿಕ್ಕಿ | ಶಿವಮೊಗ್ಗ-ಭದ್ರಾವತಿ ರೈಲು ಸಂಚಾರಕ್ಕೆ ಅಡ್ಡಿ | ತಡವಾಗಿ ಬೆಂಗಳೂರಿಗೆ ಜನಶತಾಬ್ದಿ
underpass barricade , Shimoga-Bhadravathi train ,Janshatabdi ,Bengaluru

Shivamogga Apr 18, 2024 ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಿಂದ ದೊಡ್ಡಸುದ್ದಿಯೊಂದು ಹೊರಬಿದ್ದಿದೆ. ನಿನ್ನೆ ರಾತ್ರಿ ಅಪರಿಚಿತ ವಾಹನವೊಂದು ರೈಲ್ವೆ ಅಂಡರ್‌ ಪಾಸ್‌ ಬಳಿ ಹೆವಿ ವೆಹಿಕಲ್‌ಗಳು ಡಿಕ್ಕಿಯಾಗದಂತೆ ತಡೆಯುವ ಸಲುವಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಿವಮೊಗ್ಗ-ಭದ್ರಾವತಿ ನಡುವೆ ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಿದೆ.  

ನಡೆದಿದ್ದು ಏನು? 

ಭದ್ರಾವತಿ ತಾಲ್ಲೂಕು ರೈಲ್ವೆ ಅಂಡರ್‌ ಪಾಸ್‌ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿನ ಅಂಡರ್‌ ಪಾಸ್‌ನಲ್ಲಿ  4 ಮೀಟರ್‌ ಎತ್ತರದ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಹೆವಿ ವೆಹಿಕಲ್‌ಗಳು ರೈಲ್ವೆ ಅಂಡರ್‌ ಪಾಸ್‌ ಬ್ರಿಡ್ಜ್‌ಗೆ ಡಿಕ್ಕಿಯಾಗುವುದನ್ನ ತಡೆಯಲು ಈ ಬ್ಯಾರಿಕೇಡ್‌ ಅಳವಡಿಸಲಾಗಿದೆ. ನಿನ್ನೆ ರಾತ್ರಿ ಈ ಬ್ಯಾರಿಕೇಡ್‌ಗೆ ಭಾರೀ ಗಾತ್ರದ ವಾಹನವೊಂದು ಡಿಕ್ಕಿಯಾಗಿದೆ.  ಪರಿಣಾಮ ಬ್ಯಾರಿಕೇಡ್‌ ತುಂಡಾಗಿದೆ. ಅಲ್ಲದೆ ರೈಲ್ವೆ ಹಳಿಗಳು ಏರುಪೇರಾಗಿದೆ. ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಾಸವಾಗಿದೆ. 

ಮೈಸೂರು – ಬೆಂಗಳೂರು – ಶಿವಮೊಗ್ಗ ರೈಲು 4.30ಕ್ಕೆ ಭದ್ರಾವತಿ ನಿಲ್ದಾಣಕ್ಕೆ ಬಂದಿದ್ದು ಭದ್ರಾವತಿಯಲ್ಲಿಯೇ ನಿಲ್ಲುವಂತಾಗಿತ್ತು. ಆ ಬಳಿಕ  ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ರೈಲು ಏಳು ಗಂಟೆಯಾದರೂ ಶಿವಮೊಗ್ಗದಿಂದ ಹೊರಡಲು ಸಾಧ್ಯವಾಗದೆ ಅಲ್ಲಿಯೆ ನಿಂತಿತ್ತು. ಆ ಬಳಿಕ ಜನಶತಾಬ್ದಿ ಟ್ರೈನ್‌ ಏಳು ಗಂಟೆ ಐದು ನಿಮಿಷಕ್ಕೆ ಶಿವಮೊಗ್ಗದಿಂದ ಹೊರಟಿದೆ ಎಂಬ ಮಾಹಿತಿ ಇದೆ 

  underpass barricade , Shimoga-Bhadravathi train ,Janshatabdi ,Bengaluru