ಪೊಲೀಸರಿಗೆ ಬಂತು ಬಾಲ್ಯವಿವಾಹದ ಕರೆ | ಮನೆ ಅಡ್ವಾನ್ಸ್​ಗೆ ನಡೀತು ಹೀಗೊಂದು ಕಿರಿಕ್!

Bhadravathi police are investigating a complaint related to child marriage

ಪೊಲೀಸರಿಗೆ ಬಂತು ಬಾಲ್ಯವಿವಾಹದ ಕರೆ | ಮನೆ ಅಡ್ವಾನ್ಸ್​ಗೆ ನಡೀತು ಹೀಗೊಂದು ಕಿರಿಕ್!

KARNATAKA |  Dec 9, 2023 |  ಬಾಲ್ಯವಿವಾಹಗಳಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವ ವರದಿ ಹೊರಬೀಳುತ್ತಿರುವ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯವಿವಾಹದ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು ವಿಚಾರಣೆ ನಡೆಯುತ್ತಿದೆ. 

ಈ ಸಂಬಂಧ 112 ಶಿವಮೊಗ್ಗ ಭದ್ರಾವತಿ ಪೊಲೀಸರಿಗೆ ಕರೆಯೊಂದು ಬಂದಿದೆ. ಅದನ್ನ ಆಧರಿಸಿ ಸ್ಥಳಕ್ಕೆ ತೆರಳಿದ ಇಆರ್​ವಿ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ 

READ : Public Notice | ವಿದ್ಯಾರ್ಥಿ ಹೆಸರು ಶಾಲೆ ದಾಖಲಾತಿ ಹಾಗೂ ಆಧಾರ್​ ನಲ್ಲಿ ತಪ್ಪಾಗಿದ್ದರೇ ಏನು ಮಾಡಬೇಕು! ಇಲ್ಲಿದೆ ಶಿಕ್ಷಣ ಇಲಾಖೆಯ ಮಾಹಿತಿ

ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರಲ್ಲಿನ ಬಾಲ್ಯವಿವಾಹದ ಪ್ರಕರಣದ ಬಗ್ಗೆ ಭದ್ರಾವತಿ ಪೊಲೀಸರಿಗೆ ಕಳೆದ ಏಳನೇ ತಾರೀಖು ಕರೆ ಬಂದಿತ್ತು. ಅದರ ಪ್ರಕಾರ ಸ್ಥಳಕ್ಕೆ ತೆರಳಿದ ಸಿಬ್ಬಂದಿ  ಯುವತಿಯ ಜನ್ಮ ದಿನಾಂಕವನ್ನು ಪೋಷಕರ ಬಳಿ ವಿಚಾರಿಸಿ ಯುವತಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. 

READ : ವಸತಿ ಶಾಲೆಗಳಿಗೆ 2024-25ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಮನೆ ಅಡ್ವಾನ್ಸ್ ವಿಚಾರಕ್ಕೆ ಕಿರಿಕ್​

ಇನ್ನೊಂದಡೆ ಸಾಗರ ಪೇಟೆಯಲ್ಲಿ ಮನೆ ಬಾಡಿಗೆಯ ಅಡ್ವಾನ್ಸ್​ ವಿಚಾರದಲ್ಲಿ ಜಗಳ ಆಗಿ ಪೊಲೀಸರು ಮಧ್ಯಪ್ರವೇಶ ಮಾಡಿದ ಘಟನೆಯೊಂದು ನಡೆದಿದೆ. ನಿನ್ನೆ ಇಲ್ಲಿನ ನಿವಾಸಿಯೊಬ್ಬರು ತಮ್ಮ ಮನೆ ಮಾಲೀಕ ಜೊತೆಗೆ ಅಡ್ವಾನ್ಸ್​ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರಿಗೂ ಸ್ಟೇಷನ್​ಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದಾರೆ.