Public Notice | ವಿದ್ಯಾರ್ಥಿ ಹೆಸರು ಶಾಲೆ ದಾಖಲಾತಿ ಹಾಗೂ ಆಧಾರ್​ ನಲ್ಲಿ ತಪ್ಪಾಗಿದ್ದರೇ ಏನು ಮಾಡಬೇಕು! ಇಲ್ಲಿದೆ ಶಿಕ್ಷಣ ಇಲಾಖೆಯ ಮಾಹಿತಿ

Public Notice | What to do if the student's name is wrong in school enrolment and Aadhaar? Here's the education department's information

Public Notice |  ವಿದ್ಯಾರ್ಥಿ ಹೆಸರು ಶಾಲೆ ದಾಖಲಾತಿ ಹಾಗೂ ಆಧಾರ್​ ನಲ್ಲಿ ತಪ್ಪಾಗಿದ್ದರೇ ಏನು ಮಾಡಬೇಕು! ಇಲ್ಲಿದೆ ಶಿಕ್ಷಣ ಇಲಾಖೆಯ ಮಾಹಿತಿ

KARNATAKA |  Dec 9, 2023 | ವಿದ್ಯಾರ್ಥಿಯ ಹೆಸರು ಆದಾರ್ ಕಾರ್ಡ್​ ನಲ್ಲಿ ಬೇರೆ ಇದ್ದು ಶಾಲೆಯಲ್ಲಿ ಬೇರೆ ಇದ್ದು ಅಥವಾ ಅಕ್ಷರ ವ್ಯತ್ಯಾಸ ಇದ್ದರೇ ಏನು ಮಾಡಬೇಕು ಎನ್ನುವುದಕ್ಕೆ ಶಾಲಾ ಶಿಕ್ಷಣ ಇಲಾಖೆ / https://schooleducation.karnataka.gov.in/ ಆಯುಕ್ತರ ಕಚೇರಿ ಮಾಹಿತಿಯೊಂದನ್ನ ನೀಡಿದೆ. ಈ ಸಂಬಂಧ UIDAI ನೊಂದಿಗೆ ಪತ್ರ ವ್ಯವಹಾರ ನಡೆಸಿರುವ ಇಲಾಖೆಯು ವಿದ್ಯಾರ್ಥಿಗಳ ಹೆಸರಿನಲ್ಲಿನಾದ ವ್ಯತ್ಯಾಸ ಸರಿ ಮಾಡಲು ಅವಕಾಶ ಕಲ್ಪಿಸಿದೆ. 

READ : ವಸತಿ ಶಾಲೆಗಳಿಗೆ 2024-25ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ವಿದ್ಯಾರ್ಥಿಯ ಹೆಸರು SATS ತಂತ್ರಾಶದಲ್ಲಿ ಇರುವಂತೆ ಆಧಾರ್ ಕಾರ್ಡ್​ ನಲ್ಲಿಯು ಇರಬೇಕಾಗುತ್ತದೆ. ಇಲ್ಲವಾದಲ್ಲಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಬೇಕಾಗುತ್ತದೆ. ಇದಕ್ಕಾಗಿ SATS ತಂತ್ರಾಶದಲ್ಲಿನದ ಫೋಟೋ ಗುರುತಿನ ಚೀಟಿ ಅಥವಾ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. 

ಇದಕ್ಕಾಗಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ವಿದ್ಯಾರ್ಥಿಯ ಹೆಸರು SATS ತಂತ್ರಾಂಶದಲ್ಲಿ (ಶಾಲಾ ದಾಖಲಾತಿ) ಹಾಗೂ ಆಧಾರ್‌ನಲ್ಲಿ ವ್ಯತ್ಯಾಸವಿದ್ದಲ್ಲಿ ಮೇಲೆ ತಿಳಿಸಿರುವಂತೆ ಶಾಲೆಯ ಮುಖ್ಯೋಪಾಧ್ಯಾಯರು SATS ತಂತ್ರಾಂಶದಲ್ಲಿರುವ ವಿದ್ಯಾರ್ಥಿಯ ಹೆಸರಿನ ಪ್ರಕಾರ ಫೋಟೋ ಗುರುತಿನ ಚೀಟಿ/ಪ್ರಮಾಣಪತ್ರವನ್ನು ಪೋಷಕರಿಗೆ ನೀಡಿ ಆಧಾ‌ರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿ ನಂತರ SATS ತಂತ್ರಾಂಶದಲ್ಲಿ ಆಧಾರ್​ ಮೌಲ್ಯೀಕರಣ ಮಾಡಬಹುದು ಎಂದು ತಿಳಿಸಿದೆ.