ಶಿವಮೊಗ್ಗ ಗಮನಿಸಿ: ನಾಗರಿಕರ ಮನೆ ಬಾಗಿಲಿಗೆ ಸಿಗುತ್ತೆ ಈ ಸೌಲಭ್ಯ! ಕೆಲಸ ಹುಡುಕುತ್ತಿರುವವರಿಗೆ ಉಚಿತ ವರ್ಕ್​ಶಾಪ್​! ಡಿಪ್ಲೋಮೋ ಕ್ಲಾಸ್​ಗೆ ಅರ್ಜಿ ಆಹ್ವಾನ

Shimoga: This facility is available at the doorsteps of citizens! Free workshop for job seekers! Applications invited for diploma classesಶಿವಮೊಗ್ಗ ಗಮನಿಸಿ: ನಾಗರಿಕರ ಮನೆ ಬಾಗಿಲಿಗೆ ಸಿಗುತ್ತೆ ಈ ಸೌಲಭ್ಯ! ಕೆಲಸ ಹುಡುಕುತ್ತಿರುವವರಿಗೆ ಉಚಿತ ವರ್ಕ್​ಶಾಪ್​! ಡಿಪ್ಲೋಮೋ ಕ್ಲಾಸ್​ಗೆ ಅರ್ಜಿ ಆಹ್ವಾನ

ಶಿವಮೊಗ್ಗ ಗಮನಿಸಿ: ನಾಗರಿಕರ ಮನೆ ಬಾಗಿಲಿಗೆ ಸಿಗುತ್ತೆ ಈ ಸೌಲಭ್ಯ! ಕೆಲಸ ಹುಡುಕುತ್ತಿರುವವರಿಗೆ ಉಚಿತ ವರ್ಕ್​ಶಾಪ್​!  ಡಿಪ್ಲೋಮೋ ಕ್ಲಾಸ್​ಗೆ ಅರ್ಜಿ ಆಹ್ವಾನ

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS

ಬ್ಯಾಂಕಿಂಗ್ ಹುದ್ದೆಗಳ ಕುರಿತು ನಗರದಲ್ಲಿ ಉಚಿತ ವರ್ಕ್ಶಾಪ್

ರಾಜ್ಯದ ಹಲವು ಬ್ಯಾಂಕ್‌ಗಳಲ್ಲಿ ಹುದ್ದೆಗಳು ಕಾಲಿ ಇದ್ದು ಈ ನಿಮಿತ್ತ ಬ್ಯಾಂಕಿಂಗ್ ಮತ್ತು ಎಂಬಿಎ ಆದವರಿಗೆ ಆ. 6ರ ನಾಳೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ಗಂಟೆವರೆಗೆ ಶಿವಮೊಗ್ಗ ನಗರದ ಪಾರ್ಕ್ ಬಡಾವಣೆ ಬಾಲರಾಜ ಅರಸ್ ರಸ್ತೆಯಲ್ಲಿರುವ ನೆಲ್ಲಿಪ್ರಕಾಶ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಉಚಿತ ವರ್ಕ್ಶಾಪ್ ಏರ್ಪಡಿಸಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದು. ಮಾಹಿತಿಗೆ ಮೊ. ೯೩೪೨೪೪೨೩೦೨ರಲ್ಲಿ ಸಂಪರ್ಕಿಸಲು ಕೋರಿದೆ.

ಅಂಚೆಯಣ್ಣನ ಮೂಲಕ ಮನೆ ಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರ

ಇನ್ನು ಮುಂದೆ ಜನನ/ಮರಣ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ಅಂಚೆಯಣ್ಣನ ಮೂಲಕ ತಲುಪಿಸುವ ವಿಶಿಷ್ಟ ಸೇವೆಯನ್ನು ಶಿವಮೊಗ್ಗ ಅಂಚೆ ವಿಭಾಗದಲ್ಲಿ ಪರಿಚಯಿಸಲಾಗಿದೆ.  ಭಾರತೀಯ ಅಂಚೆ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ವಿಶಿಷ್ಟ ಸೇವೆಗೆ ಚಾಲನೆ ನೀಡಲಾಗಿದೆ .ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿನಲ್ಲಿ ಪಡೆಯಲು ಮಹಾನಗರ ಪಾಲಿಕೆ ಜನನ/ಮರಣ ಕೌಂಟರ್‍ನಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು, ನಿಮ್ಮ ವಿಳಾಸವನ್ನು ನಮೂದಿಸಿ ಕೋರಿಕೆಯನ್ನು ಸಲ್ಲಿಸಬಹುದಾಗಿದೆ.  ಪ್ರಮಾಣ ಪತ್ರವನ್ನು ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುವುದು.  ವಿಳಾಸದಾರರು ಬಟವಡೆಯ ಸಮಯದಲ್ಲಿ ರೂ. 80/-ಗಳನ್ನು ಪಾವತಿಸಿ ಜನನ/ಮರಣ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ ಎಂದು ಶಿವಮೊಗ್ಗ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ. ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಟಿಟಿಸಿಯಲ್ಲಿ ಖಾಲಿಯಿರುವ ಡಿಪ್ಲೊಮಾ ತರಬೇತಿಗಾಗಿ ಅರ್ಜಿ ಆಹ್ವಾನ

ಶಿವಮೊಗ್ಗ, ಆಗಸ್ಟ್ 05 (ಕರ್ನಾಟಕ ವಾರ್ತೆ):  ಮಾಚೇನಹಳ್ಳಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2023-24ನೇ ಸಾಲಿನ ಖಾಲಿಯಿರುವ “ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್” ಕೋರ್ಸ್‍ಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಆಗಸ್ಟ್-14ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಟಿಟಿಸಿಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಘಟಕದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು, ಜಿಟಿಟಿಸಿ, ಶಿವಮೊಗ್ಗ , ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಸಿಎ-38, ನಿಧಿಗೆ ಕೈಗಾರಿಕಾ ಪ್ರದೇಶ, ಮಾಚೇನಹಳ್ಳಿ ಇವರನ್ನು ಖುದ್ದಾಗಿ ಅಥವಾ ದೂ.ಸಂ.: 9448307027/ 9880141054/ 9902232839/ 9449286543 ಗಳನ್ನು ಸಂಪರ್ಕಿಸುವುದು. 

ನಾಳೆ ಶಿವಮೊಗ್ಗದ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

ಶಿವಮೊಗ್ಗ ನಗರ ಉಪ ವಿಭಾಗ-2ರ ಘಟಕ-5ರ ವ್ಯಾಪ್ತಿಯ ಡಿಪೋ ರಸ್ತೆಯಲ್ಲಿ 11 ಕೆ.ವಿ ವಿದ್ಯುತ್‌ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರಿಸುವ ಕಾಮಗಾರಿ ಇರುವ ಕಾರಣ ಎಮ್.ಎಫ್-20 ಆನಂದ ರಾವ್ ಬಡಾವಣೆ 11 ಕೆ.ವಿ ಮಾರ್ಗದ ಈ ಕೆಳಕಂಡ ಪ್ರದೇಶಗಳಲ್ಲಿ ಆ.7 ರ ಬೆಳಗ್ಗೆ 10 ರಿಂದ ಸಂಜೆ 6  ಗಂಟೆಯವರೆಗೆ ವ್ಯತ್ಯಯವಾಗಲಿದೆ.ಟಿಪ್ಪುನಗರ ಎಡಭಾಗ 1 ರಿಂದ 7ನೇ ಕ್ರಾಸ್, ಮಂಜುನಾಥ ಬಡಾವಣೆ, ಆನಂದ ರಾವ್ ಬಡಾವಣೆ, ಪದ್ಮಾ ಟಾಕೀಸ್, ಕೆ.ಎಸ್.ಆರ್.ಟಿ.ಸಿ ಡಿಪೋ, ಕಿನಿ ಲೇಔಟ್ ಹಿಂಭಾಗ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದ್ದು, ಸಾರ್ವ ಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು