ಭದ್ರಾವತಿ ಸ್ಟೇಷನ್, ತಾಳಗುಪ್ಪ ಮಾರ್ಗ, ರೇಣಿಗುಂಟ ರೈಲಿಗೆ ಸಂಬಂಧಿಸಿದಂತೆ ಸಂಸದರ ಮಹತ್ವದ ಹೆಜ್ಜೆ!

Important steps taken by MPs regarding Bhadravathi station, Talaguppa Marg, Renigunta train

ಭದ್ರಾವತಿ ಸ್ಟೇಷನ್, ತಾಳಗುಪ್ಪ ಮಾರ್ಗ,  ರೇಣಿಗುಂಟ ರೈಲಿಗೆ ಸಂಬಂಧಿಸಿದಂತೆ ಸಂಸದರ ಮಹತ್ವದ ಹೆಜ್ಜೆ!

SHIVAMOGGA  |  Dec 14, 2023  | ಸಂಸದ ಬಿ.ವೈ. ರಾಘವೇಂದ್ರ ಬುಧವಾರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊ ಳ್ಳುತ್ತಿರುವ ವಿವಿಧ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಶಿವಮೊಗ್ಗ-ರೇಣಿಗುಂಟ-ಚೆನ್ನೈ ರೈಲು

ಶಿವಮೊಗ್ಗ-ರೇಣಿಗುಂಟ-ಚೆನ್ನೈ ನಡು ವಿನ ಬೈವೀಕ್ಲಿ ವಿಶೇಷ ರೈಲು ಕಳೆದೆರಡು ವರ್ಷಗಳಿಂದ ಅತ್ಯಂತ ಫಲಪ್ರದವಾಗಿ ಸಂಚರಿಸುತ್ತಿದೆ. ಆದಾಗ್ಯೂ ಅಕ್ಟೋಬ‌ರ್1ರಿಂದ ಇದನ್ನು ನಿಲುಗಡೆಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಅದರಲ್ಲೂ, ತಿರುಪತಿ ಮತ್ತು ಚೆನ್ನೈಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ, ಸ್ಥಗಿತಗೊಂಡ ಈ ರೈಲನ್ನು ಶೀಘ್ರ ಪುನಾರಂಭಿಸಬೇಕು ಎಂದಿದ್ದಾರೆ.

2020-21ರಲ್ಲಿ 62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಶಿವಮೊಗ್ಗ ಸಮೀಪ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವನ್ನು ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

READ : ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ 50 ಪಿಎಂ -ಇಬಸ್​!

ಶಿವಮೊಗ್ಗ-ಶಿಕಾರಿಪುರ- ರಾಣೇಬೆನ್ನೂರು ನೂತನ ರೈಲ್ವೆಮಾರ್ಗ ಪೂರ್ಣಗೊಂಡ ಬಳಿಕ, ಈ ಕೋಚಿಂಗ್ ಡಿಪೋ ಅತ್ಯಂತ ಮಹತ್ವಪೂರ್ಣ ಕೇಂದ್ರವಾಗಲಿದೆ. ವಿವಿಧ ಭಾಗಗಳಿಂದ ಅನೇಕ ರೈಲುಗಳು ನಿರ್ವಹಣೆಗಾಗಿ ಇಲ್ಲಿಗೆ ಬರಬೇಕಾಗುತ್ತದೆ. ಕೇಂದ್ರ ಸರ್ಕಾರ ಇತ್ತೀಚೆಗೆ ದೇಶದಲ್ಲಿ ಅನೇಕ ಭಾಗಗಳಿಗೆ ವಂದೇ ಭಾರತ್ ಎಕ್ ಪ್ರೆಸ್ ರೈಲುಗಳ ಓಡಾಟವನ್ನು ಪ್ರಾರಂಭಿಸಿದೆ.  

ಪ್ರಸ್ತುತ ನಿರ್ಮಿಸುತ್ತಿರುವ ಕೋಟೆ ಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು ವಂದೇ ಭಾರತ್‌ನಂತಹ ರೈಲುಗಳ ನಿರ್ವ ಹಣೆ ಸಹ ಮಾಡಲು ಅನುಕೂಲ ಆಗುವಂತೆ ಮೇಲ್ದರ್ಜೆಗೇರಿಸುವಂತೆ ಸಂಬಂಧಿಸಿದವರಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ತಾಳಗುಪ್ಪ ತಡಸ-ಹೊನ್ನಾವರ- ಶಿರಸಿ- ಹುಬ್ಬಳ್ಳಿ

ತಾಳಗುಪ್ಪ ತಡಸ-ಹೊನ್ನಾವರ- ಶಿರಸಿ- ಹುಬ್ಬಳ್ಳಿ ನೂತನ ರೈಲ್ವೆಮಾರ್ಗ ಅಳವಡಿಕೆ ಯೋಜನೆಯನ್ನು ಈ ಹಿಂದೆ ರೈಲ್ವೆ ಬಜೆಟ್ ನಲ್ಲಿ ಮಂಜೂರು ಮಾಡಿದಂತೆ, ಈಗಾಗಲೇ ರೈಲ್ವೆ ಬೋರ್ಡಿಗೆ ಈ ಮಾರ್ಗದ ಅನುಕೂಲತೆಗಳ ಬಗ್ಗೆ ವರದಿ ಸಲ್ಲಿಸಿದ್ದು, ಆದಷ್ಟು ಬೇಗನೇ ಈ ಮಾರ್ಗವನ್ನು ಮಂಜೂರು ಮಾಡಬೇಕು. ಇದರಿಂದ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಉತ್ತರ ಭಾಗ ಗಳಿಗೆ ಓಡಾಡಲು ತುಂಬಾ ಅನುಕೂಲ ಆಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ದೇಶದ ಆಯ್ದ ಕೆಲವು ರೈಲ್ವೆ ನಿಲ್ದಾಣ ಗಳನ್ನು ಉನ್ನತೀಕರಿಸಲು ಅಮೃತ್ ಸ್ಟೇಷನ್ ಯೋಜನೆ ಜಾರಿಗೊಳಿಸಿದೆ. ಸದರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಟೌನ್, ಸಾಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. 

ಇದರ ಜೊತೆಗೆ ಜಿಲ್ಲೆಯ ಭದ್ರಾವತಿ ಪಟ್ಟಣವು ಕೈಗಾರಿಕಾ ಕೇಂದ್ರವಾಗಿರುವುದರಿಂದ, ಭದ್ರಾವತಿ ರೈಲ್ವೆ ನಿಲ್ದಾಣವನ್ನು ಸಹ ಉನ್ನತೀಕರಿಸುವುದು ಅವಶ್ಯಕ. ಹೀಗಾಗಿ, ಅಮೃತ್‌ ಯೋಜನೆಯಡಿ ಜಿಲ್ಲೆಯ ಭದ್ರಾವತಿ ರೈಲ್ವೆ ನಿಲ್ದಾಣವನ್ನು ಸಹ ಉನ್ನತೀಕರಿಸಲು ಆಯ್ಕೆ ಪಟ್ಟಿಯಲ್ಲಿ ಸೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದಿದ್ದಾರೆ.