ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ 50 ಪಿಎಂ -ಇಬಸ್​!

50 PM-ebuses for Shivamogga, Davanagere, Tumakuru districts

ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ 50 ಪಿಎಂ -ಇಬಸ್​!

SHIVAMOGGA  |  Dec 14, 2023  | ಪಿಎಂ-ಇಬಸ್ ಸೇವಾ ಯೋಜನೆಯಡಿ ರಾಜ್ಯದ 11 ನಗರಗಳು ಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸಲು ಅರ್ಹತೆ ಪಡೆದಿವೆ ಎಂದು ರಾಜ್ಯ ಸರ್ಕಾರ  ವಿಧಾನ ಪರಿಷತ್​ನಲ್ಲಿ ಪ್ರಶ್ನೊಯೊಂದಕ್ಕೆ ಉತ್ತರಿಸಿದೆ.  

ಮೈಸೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ ಮತ್ತು ವಿಜಯಪುರ ನಗರಗಳಲ್ಲಿ ಇಬಸ್ ಸೇವೆಗೆ ಅವಕಾಶ ಇದೆ ಎಂದು ತಿಳಿಸಲಾಗಿದೆ. 

READ : ಶಿವಮೊಗ್ಗ ಪೊಲೀಸರಿಂದ 12 ದಿನದಲ್ಲಿ 64 ಕೇಸ್/ ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಇಬ್ಬರು ಯುವಕರು!

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಅಸ್ತಿತ್ವದಲ್ಲಿರುವ ಮೂರು ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ಒಟ್ಟಾಗಿ ಈ ಯೋಜನೆಯಡಿ 795 ಇ-ಬಸ್ ಗಳಿಗೆ ಬೇಡಿಕೆ ಸಲ್ಲಿಸಿವೆ ಎಂದು ಸದನಕ್ಕೆ ತಿಳಿಸಿದ್ದಾರೆ 

ಮೈಸೂರು ಮತ್ತು ಮಂಗಳೂರಿಗೆ ತಲಾ 100 ಬಸ್ ಗಳು, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರಿಗೆ ತಲಾ 50 ಬಸ್ ಗಳಂತೆ 350 ಬಸ್ ಗಳಿಗೆ ಕೆಎಸ್​ಆರ್​ಟಿಸಿ ಮೂಲಕ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.