ಶಿವಮೊಗ್ಗ ಪೊಲೀಸರಿಂದ 12 ದಿನದಲ್ಲಿ 64 ಕೇಸ್/ ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಇಬ್ಬರು ಯುವಕರು!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Dec 14, 2023  |  ರೈಲ್ವೆ ಟಿಕೆಟ್​ನಲ್ಲಿ ಗೋಲ್​ಮಾಲ್ ಮಾಡ್ತಿದ್ದ ಇಬ್ಬರನ್ನ ರೈಲ್ವೆ ಪೊಲೀಸ್ ಪೋರ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಈ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ @RPF_INDIA ನಲ್ಲಿ ಪೋಸ್ಟ್ ಹಾಕಿದ್ದಾರೆ. 

ಶಿವಮೊಗ್ಗ ರೈಲ್ವೆ ಪೊಲೀಸ್ 

ಇಬ್ಬರು ಆಸಾಮಿಗಳನ್ನ ಬಂಧಿಸಿರುವ ಪೊಲೀಸರು  02 ಲೈವ್ ಇ-ಟಿಕೆಟ್ ಗಳನ್ನು ವಶಪಡಿಸಿಕೊಳ್ಳಲಾದ್ದಾರೆ. ಅಲ್ಲದೆ ಒಟ್ಟು 59,480/- ರೂಪಾಯಿ ಮೌಲ್ಯದ, ಎಲೆಕ್ಟ್ರಾನಿಕ್ ಸಾಧನನವನ್ನ ಜಪ್ತು ಮಾಡಿದ್ದಾರೆ. ಈ ಸಂಬಂಧ  ಶಿವಮೊಗ್ಗ ಪೋಸ್ಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

READ : ಹುಷಾರಾಗಿ ಗಾಡಿ ಓಡಿಸಿದ್ರೂ ಹೀಗಾಗುತ್ತೆ ! ಬೈಕ್ ಸವಾರರೇ ವಿಡಿಯೋ ನೋಡಿ ಜಾಗ್ರತೆ ವಹಿಸಿ

ಶಿವಮೊಗ್ಗ ಪೊಲೀಸ್ ಇಲಾಖೆ

ಇನ್ನೊಂದೆಡೆ ಶಿವಮೊಗ್ಗ ಪೊಲೀಸರು ಅಕ್ರಮ ದಂಧೆ ಬಗ್ಗೆ ತೆಗೆದುಕೊಂಡು ಕ್ರಮದ ಬಗ್ಗೆ ಪ್ರಕಟಣೆ ನೀಡಿದ್ದಾರೆ. ಕಳೆದ 12 ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಓಸಿ ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ನೀಡಿದ್ದಾರೆ. 

ಪೊಲೀಸ್ ಪ್ರಕಟಣೆ

ನಗರದಲ್ಲಿ ಓಸಿ ಆಡುತ್ತಿದ್ದ ಒಟ್ಟು 19 ಜನರ ವಿರುದ್ಧ 78(3) ಕೆಪಿ ಕಾಯ್ದೆ ಅಡಿಯಲ್ಲಿ 19 ಪ್ರಕರಣಗಳು ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 14 ಜನರ ವಿರುದ್ಧ 87 ಕೆಪಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ಸೇರಿ ಒಟ್ಟು 33 ಜನ ಆರೋಪಿತರ ವಿರುದ್ಧ 21 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಮೇಲ್ಕಂಡ ಪ್ರಕರಣಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಓಸಿ ಆಡುತ್ತಿದ್ದ ಒಟ್ಟು 38 ಜನರ ವಿರುದ್ಧ 78(3) ಕೆಪಿ ಕಾಯ್ದೆ ಅಡಿಯಲ್ಲಿ 38 ಪ್ರಕರಣಗಳು ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 31 ಜನರ ವಿರುದ್ಧ 87 ಕೆಪಿ ಕಾಯ್ದೆ ಅಡಿಯಲ್ಲಿ 05 ಪ್ರಕರಣಗಳು ಸೇರಿ ಒಟ್ಟು 69 ಜನ ಆರೋಪಿತರ ವಿರುದ್ಧ 43 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor