CHIKKAMAGALURU | Dec 14, 2023 | ಚಿಕ್ಕಮಗಳೂರು ನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ನಡೆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂದೆ ಸಾಗುತ್ತಿದ್ದ ಕಾರೊಂದನ್ನ ಓವರ್ ಟೇಕ್ (over take ) ಮಾಡಲು ಮುಂದಾದ ಕಾರೊಂದು ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯು ಗಾಳಿಯಲ್ಲಿ ತೇಲಿ ಮುಂದಕ್ಕೆ ಹೋಗಿ ಬಿದ್ದಿದೆ. ಘಟನೆಯಲ್ಲಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರು ಚಾಲಕ ಕಾರು ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ.
READ : ಡಿ.16 ರಂದು ಶಿವಮೊಗ್ಗದ ಈ ಪ್ರಮಖ ಪ್ರದೇಶಗಳಲ್ಲಿ ಪವರ್ ಕಟ್/ ಸಾಗರದಲ್ಲಿ ರದ್ದಾಯ್ತು ಕುವೆಂಪು ವಿವಿ ಸಂಯೋಜನಾ ಕೇಂದ್ರ
‘ಚಿಕ್ಕಮಗಳೂರು ಅಪಘಾತ
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ 2 ದಿನಗಳ ಹಿಂದೆ ನಡೆದ ಈ ಅಪಘಾತದಲ್ಲಿ ಸ್ಕೂಟಿ ಸವಾರ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಇನ್ನೂ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆತಂಕ ಮೂಡಿಸುತ್ತಿದೆ. ತಮ್ಮದಲ್ಲದ ತಪ್ಪಿಗೆ ಅಮಾಯಕರು ಅಪಘಾತಕ್ಕೀಡಾಡುತ್ತಿರುವುದಕ್ಕೆ ದೃಶ್ಯ ಸಾಕ್ಷಿ ಹೇಳುತ್ತಿದೆ. ಇನ್ನೂ ಘಟನೆ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.
