ಡಿ.16 ರಂದು ಶಿವಮೊಗ್ಗದ ಈ ಪ್ರಮಖ ಪ್ರದೇಶಗಳಲ್ಲಿ ಪವರ್ ಕಟ್/ ಸಾಗರದಲ್ಲಿ ರದ್ದಾಯ್ತು ಕುವೆಂಪು ವಿವಿ ಸಂಯೋಜನಾ ಕೇಂದ್ರ

SHIVAMOGGA  |  Dec 14, 2023  | ಶಿವಮೊಗ್ಗ ತಾಲೂಕು ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಗ್ರಾಮಗಳಲ್ಲಿ ಡಿ.16 ರ ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಶಿವಮೊಗ್ಗದಲ್ಲಿ ಪವರ್ ಕಟ್ 

ಗಾಜನೂರು ಕ್ಯಾಂಪ್ ಮತ್ತು ಡ್ಯಾಂ, ಸಕ್ರೇಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೇಕಲ್, ತಟ್ಟಿಕೆರೆ, ಯರಗನಾಳ್, ಕುಸ್ಕೂರು, ಸಿದ್ಧರಹಳ್ಳಿ, ಮಂಡೇನಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಶ್ರೀಕಂಠಪುರ, ವೀರಾಪುರ, ಹೊಸಕೊಪ್ಪ, ಆನೆಬಿಡಾರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸದೆ

 

READ : ಅನುಪಿನ ಕಟ್ಟೆ ಹತ್ತಿರ ಪುರದಾಳ್​ ಹೋಗುವ ಮಾರ್ಗದಲ್ಲಿ ಅಬಕಾರಿ ಅಧಿಕಾರಿಗಳ ದಾಳಿ! ಸಿಕ್ಕಿದ್ದೇನು ಗೊತ್ತಾ?

ಉಳ್ಳೂರು ಸಾಗರ ಗಂಗೋತ್ರಿ ಮ.ವಿ.–ಕುವೆಂಪು ವಿ.ವಿ. ಸಂಯೋಜನೆ ರದ್ದು

ಶಂಕರಘಟ್ಟ ಜ್ಞಾನ ಸಹ್ಯಾದ್ರಿ ಕಾಲೇಜು ಅಭಿವೃದ್ಧಿ ಪರಿಷತ್ ಕಾರ್ಯಾಲಯವು ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸಾಗರ ತಾಲೂಕು ಉಳ್ಳೂರುನಲ್ಲಿರುವ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ 2023-24ನೇ ಸಾಲಿನ ಸಂಯೋಜನೆಯನ್ನು ಹಿಂಪಡೆಯಲಾಗಿದ್ದು, 2023-24ನೇ ಸಾಲಿನಿಂದ ಬಿ.ಇಡಿ ಗೆ ಹೊಸ ದಾಖಲಾತಿಗಳನ್ನು ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.


 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು