ಅನುಪಿನ ಕಟ್ಟೆ ಹತ್ತಿರ ಪುರದಾಳ್​ ಹೋಗುವ ಮಾರ್ಗದಲ್ಲಿ ಅಬಕಾರಿ ಅಧಿಕಾರಿಗಳ ದಾಳಿ! ಸಿಕ್ಕಿದ್ದೇನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Dec 14, 2023  | ಶಿವಮೊಗ್ಗದ ಅಬಕಾರಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸಿಕ್ಕ ಮಾಹಿತಿ ಅನ್ವಯ ಗಾಂಜಾ ಸಾಗಿಸ್ತಿದ್ದ ಆರೋಪದ ಮೇಲೆ ಮೂವರನ್ನ ಬಂಧಿಸಿದ ಗಾಂಜಾವನ್ನು ಜಪ್ತಿ ಮಾಡಿದೆ. ಶಿವಮೊಗ್ಗದ ಅನುಪಿನಕಟ್ಟೆ ಗ್ರಾಮದಲ್ಲಿ ದಾಳಿ ನಡೆಸಿದ ಇಲಾಖೆ ಅಧಿಕಾರಿಗಳು ಪುರದಾಳ್ ರಸ್ತೆಗೆ ಹೋಗುವ ಬೈಪಾಸ್ ರಸ್ತೆಯಲ್ಲಿ ರೇಡ್ ಮಾಡಿದ ಬಗ್ಗೆ ಪ್ರಕಟಣೆ ನೀಡಿದೆ. 

ಅಬಕಾರಿ ಜಂಟಿ ಆಯುಕ್ತರು , ಮಂಗಳೂರು ವಿಭಾಗ ಮತ್ತು ಸುಮಿತ  ಕೆ ಕೆ ಅಬಕಾರಿ ಉಪ ಆಯುಕ್ತರು,  ಶಿವಮೊಗ್ಗ ಜಿಲ್ಲೆ ಇವರುಗಳ ನಿರ್ದೇಶನದಲ್ಲಿ ನೌಶಾದ್ ಅಹಮದ್ ಖಾನ್,  ಉಪ ಅಧಿಕ್ಷಕರು ಉಪ ವಿಭಾಗ ಶಿವಮೊಗ್ಗ ಇವರ ಮಾರ್ಗದರ್ಶನ ದಲ್ಲಿ ದಿನಾಂಕ: 12-12-23 ರಂದು ನಗರದಲ್ಲಿ ಈ ದಾಳಿ ನಡೆಸಲಾಗಿದೆ. 

ಶಿವಮೊಗ್ಗ ತಾಲ್ಲೂಕಿನ ಅನುಪಿನ ಕಟ್ಟೆ ಗ್ರಾಮದ ಪುರುದಾಳ್ ಕಡೆಗೆ ಹೋಗುವ ಬೈ ಪಾಸ್ ರಸ್ತೆಯಲ್ಲಿ ಮೂವರು ಆರೋಪಿಗಳು ರಂಜಿತ್ , ಕಾರ್ತಿಕ್ &  ಚೇತನ್  ಎರಡು  ಪ್ಯಾಶನ್ ಪ್ರೊ ಬೈಕ್​ನಲ್ಲಿ 330 ಗ್ರಾಂ ಒಣಗಾಂಜಾ ಸಾಗಿಸ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಅನ್ವಯ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  

READ  : ಶಿವಮೊಗ್ಗಕ್ಕೆ ಅನುಕೂಲ | ಬೀರೂರು ಜಂಕ್ಷನ್​ನಲ್ಲಿ ನಿಲ್ಲುತ್ತಾ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ?

ಒಣ ಗಾಂಜಾ ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತು ಪಡಿಸಿಕೊಂಡು ಆರೋಪಿಗಳನ್ನು  ದಸ್ತಗಿರಿ ಮಾಡಿ ಆರೋಪಿಗಳ ವಿರುದ್ದ ಎನ್ ಡಿ ಪಿ ಎಸ್ ಕಾಯ್ದೆ 1985 ರ ಕಲಂ 27(ಬಿ) & 8(ಸಿ), ರಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. 

ಈ ಪ್ರಕರಣದಲ್ಲಿನ ಮಾಹಿತಿ ಮೇರೆಗೆ ಅನಿಲ್ ಎಂಬಾತನ ವಿರುದ್ಧ ಗಾಂಜಾ ಸೇವನೆ ಮಾಡಿರುವುದು ದೃಢವಾದ ಕಾರಣ ಅರೋಪಿತನ ವಿರುದ್ಧ ಇದೇ  ಕಾಯ್ದೆ ಕಲಂ 27(ಬಿ) ರಂತೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ. 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor