ಶಿವಮೊಗ್ಗಕ್ಕೆ ಅನುಕೂಲ | ಬೀರೂರು ಜಂಕ್ಷನ್​ನಲ್ಲಿ ನಿಲ್ಲುತ್ತಾ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ?

MPs urge Union Railway Minister to stop Vande Bharat Express train at Birur Junction

ಶಿವಮೊಗ್ಗಕ್ಕೆ ಅನುಕೂಲ |  ಬೀರೂರು  ಜಂಕ್ಷನ್​ನಲ್ಲಿ ನಿಲ್ಲುತ್ತಾ  ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ?

SHIVAMOGGA  |  Dec 14, 2023  |   20661-20662 ಸಂಖ್ಯೆಯ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ಓಡಾಟವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಮಾರ್ಗಮಧ್ಯೆ ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಈ ರೈಲು ನಿಲುಗಡೆ ನೀಡಲಾಗು ತ್ತಿದೆ. ಬೀರೂರು ಜಂಕ್ಷನ್‌ನಲ್ಲಿಯೂ ಈ ರೈಲಿಗೆ ನಿಲುಗಡೆ ನೀಡಿದಲ್ಲಿ ಬೀರೂರಿನಲ್ಲಿ ಶಿವಮೊಗ್ಗ ಕಡೆಗೆ ರೈಲುಗಳು ಡೈವರ್ಟ್ ಆಗುವ ಕಾರಣ, ಶಿವಮೊಗ್ಗ ಭಾಗದಿಂದ ಪ್ರಯಾ ಣಿಸುವ ಸಹಸ್ರಾರು ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲ ಎಂದು ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದ್ದಾರೆ.

READ : ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ! ಶಿವಮೊಗ್ಗ, ಮೈಸೂರು, ತಾಳಗುಪ್ಪ ಸೇರಿ 20 ಟ್ರೈನ್​ಗಳ ಸಂಚಾರ ಈ ದಿನಾಂಕಗಳಂದು ಇರಲ್ಲ! ಪೂರ್ತಿ ವಿವರ ಇಲ್ಲಿದೆ

ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್ ರೈಲು

ಕೇಂದ್ರ ರೈಲ್ವೆ ಸಚಿವರನ್ನ ಭೇಟಿ ಮಾಡಿರುವ ಅವರು ಇದೇ ರೀತಿ ಪ್ರತಿ ರಾತ್ರಿ ತೆರಳುವ 16228 ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್ ರೈಲು ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಾಪಾರಸ್ಥರು ಮತ್ತು ಜನಸಾಮಾನ್ಯರಷ್ಟೇ ಅಲ್ಲದೇ, ಮಲೆನಾಡು ಜಿಲ್ಲೆಯ ಅಕ್ಕಪಕ್ಕದ ಕರಾವಳಿ ಜಿಲ್ಲೆಯ ಪ್ರಯಾಣಿಕರೂ ಬೆಂಗಳೂರಿಗೆ ತೆರಳಲು ಈ ರೈಲಿನಲ್ಲಿ ಸಂಚರಿಸುತ್ತಿದ್ದಾರೆ. 

ಆದರೆ 6 ತಿಂಗಳುಗಳಿಂದ ಈ ರೈಲು ಶಿವಮೊಗ್ಗ ಟೌನ್ ನಿಲ್ದಾಣವನ್ನು ರಾತ್ರಿ 11ರ ಬದಲಿಗೆ ರಾತ್ರಿ 11.30ಕ್ಕೆ ಬಿಡುತ್ತಿರುವುದರಿಂದ, ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ತೊಂದರೆ ಆಗುತ್ತಿದೆ. ಪ್ರಯುಕ್ತ ಸಂಬಂಧಿಸಿದ ಅಧಿಕಾರಿಗಳಿಗೆ ನಿಗದಿತ ಸಮಯವಾದ ರಾತ್ರಿ 11 ಗಂಟೆಗೆ ಶಿವಮೊಗ್ಗ ಬಿಡುವಂತೆ ನಿರ್ದೇಶನ ನೀಡಬೇಕು ಎಂದಿದ್ದಾರೆ.

ಜನ ಶತಾಬ್ದಿ ಎಕ್ಸ್‌ಪ್ರೆಸ್ 

12089/90 ಬೆಂಗಳೂರು-ಶಿವಮೊಗ್ಗ ನಡುವಿನ ಜನ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು 16227/ 16228 ತಾಳಗುಪ್ಪ- ಮೈಸೂರು ನಡುವಿನ ಎಕ್ಸ್‌ಪ್ರೆಸ್ ರೈಲುಗಳ ಸಾಮಾನ್ಯ ಕೋಚ್‌ಗಳು ಹಾಗೂ ಎ.ಸಿ. ಕೋಚ್‌ಗಳು ತುಂಬಾ ಹಳೆಯದಾಗಿವೆ. ನಿರ್ವಹಣೆಯೂ ಸಾಕಾಗುತ್ತಿಲ್ಲ. ಈ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರು ಕೋಚ್‌ಗಳ ಅವ್ಯವಸ್ಥೆಗಳ ಬಗ್ಗೆ ಸಾಕಷ್ಟು ದೂರುಗಳನ್ನು ನೀಡುತ್ತಿರುವುದರಿಂದ, ಈ ರೈಲುಗಳನ್ನು ಹೊಸ LHB ಕೋಚ್‌ಗಳ ಅಳವಡಿಕೆಯೊಂದಿಗೆ ಸೇವೆ ನೀಡಲು ಸಂಬಂಧಿಸಿದವರಿಗೆ ಸೂಚಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.