ತಾಳಗುಪ್ಪ, ಶಿವಮೊಗ್ಗ, ತುಮಕೂರು, ಮೈಸೂರು, ಯಶವಂತಪುರ ಟ್ರೈನ್​ ಸೇರಿದಂತೆ 314 ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆ! ಪೂರ್ತಿ ವಿವರ ಕ್ಲಿಕ್ ಮಾಡಿ ಓದಿ

Change in the timings of 314 trains including Talaguppa, Shimoga, Tumkur, Mysore, Yeshwantpur train! Click to read full detailsತಾಳಗುಪ್ಪ, ಶಿವಮೊಗ್ಗ, ತುಮಕೂರು, ಮೈಸೂರು, ಯಶವಂತಪುರ ಟ್ರೈನ್​ ಸೇರಿದಂತೆ 314 ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆ! ಪೂರ್ತಿ ವಿವರ ಕ್ಲಿಕ್ ಮಾಡಿ ಓದಿ

ತಾಳಗುಪ್ಪ, ಶಿವಮೊಗ್ಗ, ತುಮಕೂರು, ಮೈಸೂರು, ಯಶವಂತಪುರ ಟ್ರೈನ್​ ಸೇರಿದಂತೆ 314 ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆ! ಪೂರ್ತಿ ವಿವರ ಕ್ಲಿಕ್ ಮಾಡಿ ಓದಿ

KARNATAKA NEWS/ ONLINE / Malenadu today/ Sep 30, 2023 SHIVAMOGGA NEWS’ 



ಒಟ್ಟು 314 ರೈಲುಗಳ ಸಮಯವನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ನೈರುತ್ಯ ರೈಲ್ವೆ ವಲಯ ಪರಿಷ್ಕರಿಸಿದೆ.  ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ವಿವಿಧ ನಿಲ್ದಾಣಗಳಲ್ಲಿನ ರೈಲುಗಳ ಆಗಮನ ಮತ್ತು ನಿರ್ಗಮನದ ನೂತನ ವೇಳಾಪಟ್ಟಿಯನ್ನು ಪರಿಷ್ಕರಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. 

ಹೊಸ ರೈಲುಗಳ ಪರಿಚಯ, ರೈಲುಗಳ ಬೋಗಿಗಳ ಹೆಚ್ಚಳ, ರೈಲುಗಳ ವಿಸ್ತರಣೆ, ನೂತನ ನಿಲುಗಡೆ, ಬೋಗಿಗಳ ಶಾಶ್ವತ ಹೆಚ್ಚಳ ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ನೈರುತ್ಯ ರೈಲ್ವೆ ವಲಯ ಪ್ರಕಟಣೆಯನ್ನ ನೀಡಿದೆ. 

ಯಾವೆಲ್ಲಾ ಟ್ರೈನ್​ ಸಂಚಾರದ ಸಮಯದಲ್ಲಿ  ಬದಲಾವಣೆ 

ತಾಳಗುಪ್ಪ -‌ ಮೈಸೂರು ಇಂಟರ್‌ಸಿಟಿ (ರೈಲು ಸಂಖ್ಯೆ 16205) ಟ್ರೈನ್​  ಇನ್ಮುಂದೆ  ಮಧ್ಯಾಹ್ನ  2.50ಕ್ಕೆ ಪ್ರಯಾಣ ಶುರು ಮಾಡಲಿದೆ. ಸಾಗರ ಜಂಬಗಾರು ಮಧ್ಯಾಹ್ನ 3.07ಕ್ಕೆ ಆಗಮಿಸಿ, ಮಧ್ಯಾಹ್ನ 3.09ಕ್ಕೆ ತೆರಳಲಿದೆ. ಆನಂದಪುರಂಗೆ ಮಧ್ಯಾಹ್ನ 3.37ಕ್ಕೆ ಆಗಮಿಸಿ, ಮಧ್ಯಾಹ್ನ 3.38ಕ್ಕೆ ಹೊರಡಲಿದೆ. ಈವರೆಗು ರಾತ್ರಿ 10.15ಕ್ಕೆ ಮೈಸೂರು ನಿಲ್ದಾಣ ತಲುಪುತ್ತಿದ್ದ ರೈಲು ಇನ್ಮುಂದೆ 10.30ಕ್ಕೆ ತಲುಪಲಿದೆ.

ತಾಳಗುಪ್ಪ – ಶಿವಮೊಗ್ಗ ಟೌನ್‌ ಪ್ಯಾಸೆಂಜರ್‌ ಸ್ಪೆಷಲ್ (ರೈಲು ಸಂಖ್ಯೆ 07349)   ಇನ್ಮುಂದೆ ಬೆಳಗ್ಗೆ 11.20ಕ್ಕೆ ಹೊರಡಲಿದೆ. ಸಾಗರ ಜಂಬಗಾರು ಬೆಳಗ್ಗೆ 11.37ಕ್ಕೆ ತಲುಪಲಿದೆ, ಅಡ್ಡೇರಿಗೆ ಬೆಳಗ್ಗೆ 11.53, ಆನಂದಪುರಂ ಮಧ್ಯಾಹ್ನ 12.10, ಕೆಂಚನಾಲ ಮಧ್ಯಾಹ್ನ 12.21, ಅರಸಾಳು ಮಧ್ಯಾಹ್ನ 12.27, ಕುಂಸಿ ಮಧ್ಯಾಹ್ನ 12.44, ಹಾರನಹಳ್ಳಿ ಮಧ್ಯಾಹ್ನ 12.52, ಕೊನಗವಳ್ಳಿ ಮಧ್ಯಾಹ್ನ 1 ಗಂಟೆ, ಶಿವಮೊಗ್ಗ ನಿಲ್ದಾಣಕ್ಕೆ ಮಧ್ಯಾಹ್ನ 1.45ಕ್ಕೆ ತಲುಪಲಿದೆ.

ಶಿವಮೊಗ್ಗ ಟೌನ್‌ – ತಾಳಗುಪ್ಪ ಪ್ಯಾಸೆಂಜರ್‌ (ರೈಲು ಸಂಖ್ಯೆ 07350)  ಇನ್ಮುಂದೆ ಮಧ್ಯಾಹ್ನ 2.35ಕ್ಕೆ ಹೊರಡಲಿದೆ. ಕೊನಗವಳ್ಳಿಗೆ ಮಧ್ಯಾಹ್ನ 2.55ಕ್ಕೆ ತಲುಪಲಿದೆ. ಹಾರನಹಳ್ಳಿ ಮಧ್ಯಾಹ್ನ 2.55ಕ್ಕೆ, ಕುಂಸಿ ಮಧ್ಯಾಹ್ನ 3.02ಕ್ಕೆ, ಅರಸಾಳು ಮಧ್ಯಾಹ್ನ 3.19ಕ್ಕೆ, ಕೆಂಚನಾಲ ಮಧ್ಯಾಹ್ನ 3.24, ಆನಂದಪುರಂ ಮಧ್ಯಾಹ್ನ 3.36ಕ್ಕೆ, ಅಡ್ಡೇರಿಗೆ ಮಧ್ಯಾಹ್ನ 3.52ಕ್ಕೆ, ಸಾಗರ ಜಂಬಗಾರು ಸಂಜೆ 4.14ಕ್ಕೆ ತಾಳಗುಪ್ಪಕ್ಕೆ ಸಂ ಜೆ 4.55ಕ್ಕೆ ತಲುಪಲಿದೆ.

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ (ರೈಲು 16228) ಕೆಂಗೇರಿಗೆ ಈವರೆಗು ಬೆಳಗ್ಗೆ 5.24ಕ್ಕೆ ತಲುಪುತ್ತಿತ್ತು. ಇನ್ಮುಂದೆ ಬೆಳಗ್ಗೆ 5.23ಕ್ಕೆ ತಲುಪಲಿದೆ. ಬಿಡದಿ ಬೆಳಗ್ಗೆ 5.39, ರಾಮನಗರಂ ಬೆಳಗ್ಗೆ 5.50, ಚನ್ನಪಟ್ಟಣ ಬೆಳಗ್ಗೆ 6.01, ಮದ್ದೂರು ಬೆಳಗ್ಗೆ 6.18, ಹಣಕೆರೆ ಬೆಳಗ್ಗೆ 6.28, ಮಂಡ್ಯ ಬೆಳಗ್ಗೆ 6.38, ಎಳಿಯೂರು ಬೆಳಗ್ಗೆ 6.47ಕ್ಕೆ ತಲುಪಲಿದೆ

ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16227) ಈವರೆಗೂ ರಾತ್ರಿ 11.21ಕ್ಕೆ ಮಲ್ಲೇಶ್ವರಂ ತಲುಪುತ್ತಿತ್ತು. ಇನ್ಮುಂದೆ ರಾತ್ರಿ 11.20ಕ್ಕೆ ತಲುಪಲಿದ್ದು ರಾತ್ರಿ 11.21ಕ್ಕೆ ಹೊರಡಲಿದೆ. ಯಶವಂತಪುರಕ್ಕೆ ರಾತ್ರಿ 11.26 ತಲುಪಲಿದ್ದು ರಾತ್ರಿ 11.28ಕ್ಕೆ ಹೊರಡಲಿದೆ. 

ಶಿವಮೊಗ್ಗ ತುಮಕೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16568) ಹೆಗ್ಗೇರಿಗೆ ಈವರೆಗೂ ಬೆಳಗ್ಗೆ 8.38ಕ್ಕೆ ತಲುಪಿ, ಬೆಳಗ್ಗೆ 8.39ಕ್ಕೆ ಹೊರಡುತ್ತಿತ್ತು. ಇನ್ಮುಂದೆ ಬೆಳಗ್ಗೆ 8.37ಕ್ಕೆ ತಲುಪಿ, ಬೆಳಗ್ಗೆ 8.38ಕ್ಕೆ ಹೊರಡಲಿದೆ.

ಶಿವಮೊಗ್ಗ ಟೌನ್‌ – ತುಮಕೂರು ಮೆಮು (ರೈಲು ಸಂಖ್ಯೆ 06514) ನಿಟ್ಟೂರಿಗೆ ಸಂಜೆ 4.39ಕ್ಕೆ ತಲುಪುತ್ತಿತ್ತು. ಇನ್ಮುಂದೆ ಸಂಜೆ 4.34ಕ್ಕೆ ತಲುಪಲಿದೆ. ಮಲ್ಲಸಂದ್ರಕ್ಕೆ ಸಂಜೆ 4.53ಕ್ಕೆ, ಹೆಗ್ಗೇರಿಗೆ ಸಂಜೆ 4.57ಕ್ಕೆ ತಲುಪಲಿದೆ.

ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16580) ತುಮಕೂರು ನಿಲ್ದಾಣಕ್ಕೆ ಸಂಜೆ 6.30ಕ್ಕೆ ತಲುಪುತ್ತಿತ್ತು. ಇನ್ಮುಂದೆ ಸಂಜೆ 6.40ಕ್ಕೆ ತಲುಪಲಿದೆ.

ಉಳಿದಂತೆ,  ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16227 / 16228) – ಅರಸಾಳು ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 2024ರ ಫೆ.23ರವರೆಗೆ ರೈಲು ಈ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಮೈಸೂರು ತಾಳುಗಪ್ಪ ಎಕ್ಸ್‌ ಪ್ರೆಸ್‌ (ರೈಲು ಸಂಖ್ಯೆ 16205 / 16206) – ಕುಂಸಿ ಮತ್ತು ಅರಸಾಳು ನಿಲ್ದಾಣಗಳಲ್ಲ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 2024ರ ಫೆ.23ರವರೆಗೆ ಇಲ್ಲಿ ರೈಲುಗಳು ನಿಲ್ಲಿಸಲಾಗುತ್ತದೆ.‌

ಹೊಸ ರೈಲುಗಳ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಗಳ ವಿವರಗಳನ್ನು ನೈರುತ್ಯ ರೈಲ್ವೆ ವಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಸಲಾಗಿದ್ದು ಎಲ್ಲಾ ಪ್ರಯಾಣಿಕರು ಗಮನಿಸಬೇಕು ಎಂದು ನೈರುತ್ಯ ರೈಲ್ವೆಯು ಮನವಿ ಮಾಡುತ್ತಿದೆ. 01.10.2023 ರಿಂದ ಜಾರಿಗೆ ಬರಲಿರುವ ಹೊಸ ವೇಳಾಪಟ್ಟಿಯ ಹೆಚ್ಚಿನ ವಿವರಗಳಿಗಾಗಿ ಪ್ರಯಾಣಿಕರು ದಯವಿಟ್ಟು ಈ ಕೆಳಗಿನ ಲಿಂಕ್‌ನ್ನು ಕ್ಲಿಕ್ ಮಾಡಿ ಅಥವಾ ಕ್ಯೂ ಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ https://swr.indianrailways.gov.in/view_section.jsp?lang=0&id=0,1,808,818,847,1880 ಅಥವಾ 139 ನಂಬರಿಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.


ಇನ್ನಷ್ಟು ಸುದ್ದಿಗಳು 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!




TAGS : shivamogga,train,shivamogga town,shivamogga train,shivamogga to bangalore intercity train,new train to shivamogga from tomorrow,shivamogga news,shivamogga press,shivamogga town - mysore,mysore - shivamogga town,shivamogga traintimings,train timings,trains,shimoga train,shivamogga-tirupati train,shivamogga-chenni train,trains to shimoga,shivamogga falls,bangalore to shimoga train,indian trains,train videos,train journey