ಕಾರು ಕದ್ದುಕೊಂಡು ತೀರ್ಥಹಳ್ಳಿಗೆ ಕಡೆಗೆ ಹೊರಟ ಕಳ್ಳ | ಬಾಳೆಬೈಲ್‌ ಬಳಿ ಕಾದಿತ್ತು ಶಾಕ್

The thief who stole the car and went towards Tirthahalli Shack waiting near Balebile, Shimoga District News, Tirthahalli Report, 112 Police, Shimoga Tirthahalli Highway

ಕಾರು ಕದ್ದುಕೊಂಡು ತೀರ್ಥಹಳ್ಳಿಗೆ ಕಡೆಗೆ ಹೊರಟ ಕಳ್ಳ | ಬಾಳೆಬೈಲ್‌ ಬಳಿ ಕಾದಿತ್ತು ಶಾಕ್
Balebile, Shimoga District News, Tirthahalli Report, 112 Police, Shimoga Tirthahalli Highway

SHIVAMOGGA | MALENADUTODAY NEWS | Apr 26, 2024     

ಕಾರನ್ನ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ಸ್ಥಳೀಯರು ಹಾಗೂ ಪೊಲೀಸರು ಸೇರಿಕೊಂಡು ಕಾರು ಹಾಗೂ ಕಳ್ಳನನ್ನ ಹಿಡಿದು ಘಟನೆಯೊಂದು ತೀರ್ಥಹಳ್ಳಿ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ನಡೆದಿದೆ. ಇಲ್ಲಿನ ಬಾಳಬೈಲು ಗ್ರಾಮದ ಯುವಕರು ಕಾರು ಹಿಡಿಯುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದಾರೆ. 

ಕಳೆದ 23.04.2024ರಂದು ಈ ಘಟನೆ ನಡೆದಿದ್ದು, ತಡವಾಗಿ ವಿಚಾರ ಗೊತ್ತಾಗಿದೆ. ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ಆ ದಿನ ಫೋನ್‌ ಕಾಲ್‌ ಬಂದಿತ್ತು. ಕಾರೊಂದನ್ನ ಕಳವು ಮಾಡಿಕೊಂಡು ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. 

ಈ ವಿಚಾರದಲ್ಲಿ ಅಲರ್ಟ್‌ ಆದ ಪೊಲೀಸರು ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಿ ಕಾರನ್ನ ಹಿಂಬಾಲಿಸಿದ್ದಾರೆ. ಆ ಬಳಿಕ ಬಾಳೆಬೈಲ್‌ ಬಳಿಯಲ್ಲಿ ಸ್ಥಳೀಯ ಯುವಕ ಸಹಾಯದಿಂದ ಕಾರನ್ನ ಅಡ್ಡಗಟ್ಟಿದ್ದಾರೆ ಪೊಲೀಸರು. ಇನ್ನೂ ಪೊಲೀಸರನ್ನ ನೋಡಿದ ಕಳ್ಳರ ಜನರು ಧರ್ಮದೇಟು ನೀಡುವ ಭಯಕ್ಕೆ ಕಾರು ಸೈಡಿಗೆ ಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.