thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?

Amidst a police search There are reports of the presence of Santro Ravi at Thirthahalli in Shivamogga district.

thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?

ಹೌದು ಹೀಗೋಂದು ಚರ್ಚೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೇಳಿಬರುತ್ತಿದೆ.  ಕಳೆದ 5 ತಾರೀಖಿನ ನಂತರ ಸ್ಯಾಂಟ್ರೋ ರವಿ ತೀರ್ಥಹಳ್ಳಿಗೆ ಬಂದು ಹೋಗಿದ್ಧಾನೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇದಕ್ಕೂ ಮೊದಲು ಸೋಮೇಶ್ವರದಲ್ಲಿ ಹಾಗೂ ಹೆಬ್ರಿಯಲ್ಲಿ ಸ್ಯಾಂಟ್ರೋ ರವಿಯ ಚಲನವಲನದ ಬಗ್ಗೆ ಸುದ್ದಿಯಾಗಿದೆ. ತೀರ್ಥಹಳ್ಳಿಯಲ್ಲಿ ಯಾರನ್ನು ಸಂಪರ್ಕಿಸಿದ್ಧಾನೆ ಎಂಬುದರ ಬಗ್ಗೆಯು ಸಾಕಷ್ಟು ಚರ್ಚೆಗಳು ಆಗುತ್ತಿವೆ.

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:  ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್

ಈ ಚರ್ಚೆಗಳ ನಡುವೆ  ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ಮಾಜಿಸಚಿವ ಕಿಮ್ಮನೆ ರತ್ನಾಕರ್​ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಮೊದಲ ಆರೋಪಿ ಎಂದು ದೂರಿದ್ದರು ಅಲ್ಲದೆ, ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹಾಗು ಪಿಎಸ್ ಐ ಹಗರಣದಲ್ಲಿ ಆರಗಾ ಜ್ಞಾನೇಂದ್ರ ಮೊದಲ ಆರೋಪಿ.ಮುಖ್ಯಮಂತ್ರಿಗಳು ಅವರಿಂದ ರಾಜೀನಾಮೆ ಪಡೆದು ಅವರನ್ನು ಆರೋಪಿಯನ್ನಾಗಿ ಮಾಡಬೇಕು. ಸಾಕ್ಷ್ಯಾಧಾರಗಳು ಪೂರಕವಾಗಿ ಲಭ್ಯವಾಗಿರುವಾಗ ಆರಗಾ ಜ್ಞಾನೇಂದ್ರ ರಾಜಿನಾಮೆ ನೀಡಬೇಕು. 

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಟ್ರಾನ್ಸ್ ಫರ್ ವಿಚಾರದಲ್ಲಿ ಸ್ಯಾಂಟ್ರೋ ರವಿ ಹೇಳಿದಂತೆ ಆರಗಾ ಜ್ಞಾನೇಂದ್ರ ವರ್ಗಾವಣೆ ಮಾಡಿದ್ದಾರೆ.ದುಡ್ಡಿನ ವ್ಯವಹಾರ ದೊಡ್ಡದಾಗಿ ನಡೆದಿದೆ.ಸ್ಯಾಂಟ್ರೋ ರವಿಗೂ ಗೃಹ ಇಲಾಖೆಗೂ ಎನು ಸಂಬಂಧ.ಯಾವ್ಯಾವ ಅಧಿಕಾರಿಗಳನ್ನು ಎಲ್ಲಿಗೆ ಹಾಕಬೇಕು ಎನ್ನುವ ಪಟ್ಟಿ ಸ್ಯಾಂಟ್ರೋ ರವಿ ಬಳಿ ಇದೆ ಎಂದ್ರೆ ನೆಕ್ಸಸ್ ಇಲ್ಲಾ ಅಂತಾ ಹೇಗೆ ಹೇಳಲು ಸಾಧ್ಯ.ಸ್ಯಾಂಟ್ರೋ ರವಿ ಎಲ್ಲಿ ಅಡಗಿದ್ರೂ ಬಂಧಿಸಲಾಗುವುದು ಎಂದು ಹೇಳ್ತಾರೆ.

ಶಿವಮೊಗ್ಗದ ಖ್ಯಾತ ಮಕ್ಕಳ ವೈದ್ಯ. ಸರ್ಜಿ ಹಾಸ್ಟಿಟಲ್​ನ ಡಾಕ್ಟರ್​ ಸತೀಶ್​ ಇನ್ನಿಲ್ಲ

ಸ್ಯಾಂಟ್ರೋ ರವಿಯನ್ನು ಅಡಗಿಸಿಟ್ಟಿರುವುದು ಇವರೇ..ಅಧಿಕಾರದಲ್ಲಿದ್ದಾರೆ ಬದುಕಿದ್ದಾರೆ ಅಷ್ಟೆ.ನನ್ನ ಪ್ರಕಾರ ಪಿಎಸ್ಸೈ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮೊದಲು ಅರೆಸ್ಟ್ ಆಗಬೇಕಾದವರು ಆರಗಾ ಜ್ಞಾನೇಂದ್ರ.ಇವರು ಎನ್ ಕ್ರೇಜ್ ಕೊಟ್ಟಿದ್ದರಿಂದಲೇ ಸ್ಯಾಂಟ್ರೋ ರವಿ ಓಡಾಡುತ್ತಿರುವುದು. ಏನಾರ ಕೇಳಿದ್ರೆ ಕಾಂಗ್ರೇಸ್ ಸರ್ಕಾರದ ಮೇಲೆ ಗೂಬೆ ಕೂರಿಸ್ತಾರೆ. ನಮ್ಮ ಸರ್ಕಾರವಿದ್ದಾಗ, ಇವರು ವಿರೋಧ ಪಕ್ಷದಲ್ಲಿದ್ದು ಕಡುಬು ತಿನ್ನುತ್ತಿದ್ದರೇ ಎಂದು ಪ್ರಶ್ನಿಸಿದ್ದರು. 

ಸಾಗರ ಸುದ್ದಿ :  ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ

ಇದರ ಬೆನ್ನಲ್ಲೆ ತೀರ್ಥಹಳ್ಳಿಯಲ್ಲಿ ಸ್ಯಾಂಟ್ರೋ ರವಿ ಬಂದು ಹೋಗಿರುವ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುತ್ತಿಲ್ಲ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com