ಶಿವಮೊಗ್ಗವಷ್ಟೆ ಅಲ್ಲದೆ, ಉಳಿದ ಭಾಗಗಳಲ್ಲಿಯು ಒಂದು ಕಾಮನ್ ವಹಿವಾಟು ನಡೆಯುತ್ತದೆ. ಕರೆಂಟ್ ಬಿಲ್ ಕಟ್ಟೋದು ಸಾಮಾನ್ಯವಾಗಿ ತಡವಾಗಿಯೆ ಆಗುತ್ತದೆ. ದುಡ್ಡು ಅಡ್ಜೆಸ್ಟ್ ಮಾಡುವುದರಲ್ಲಿಯು , ಲಾಸ್ಟ್ ಡೇಟ್ ಮುಗಿದು, ಲೈನ್ಮ್ಯಾನ್ ಬಂದು ಬಿಲ್ ಕಟ್ಟಿಲ್ಲ ಎಂದು ಹೇಳುವರೆಗೂ ಟೈಂ ತಗೊಂಡು, ಆನಂತರ ಕಟ್ಟುವವರು ಇರುತ್ತಾರೆ.
thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?
ಇದೇ ರೀತಿಯಲ್ಲಿ ಲೈನ್ ಮ್ಯಾನ್ ಕೈಯಲ್ಲಿ ಬಿಲ್ನ ಅಮೌಂಟ್ ಕೊಟ್ಟು, ಕಟ್ಟಿಬಿಡಪ್ಪ ಎನ್ನುವುವರು ಇದ್ದಾರೆ. ಫ್ಯೂಸ್ ಕೀಳಲು ಬರುವ ಲೈನ್ಮ್ಯಾನ್ಗಳು ಹಾಗೂ ಮೀಟರ್ ರೀಡರ್ಸ್ ಕೈಯಲ್ಲಿಯು ಕೆಲವರು ಹಣಕೊಟ್ಟು ಕಳಿಸುತ್ತಾರೆ.
ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ: ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್
ಆದರೆ ಈ ರೀತಿ ವಿದ್ಯುತ್ ಬಿಲ್‌ಗಳ ಮೊತ್ತವನ್ನು ಸಿಬ್ಬಂದಿ ಅಥವಾ ವಿದ್ಯುತ್ ನಿಲುಗಡೆಗೆ ಬರುವ ಸಿಬ್ಬಂದಿ ಕೈಗೆ ನೀಡಬಾರದು ಎಂದು ಮೆಸ್ಕಾಂ (mescom shivamogga) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಗರ ಟೌನ್ನಲ್ಲಿ ನಡೆದ ಹಲ್ಲೆ ಯತ್ನ ಕೇಸ್ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ
ಈ ಸಂಬಂಧ ಗ್ರಾಹಕರು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಉಪವಿಭಾಗ ಕಚೇರಿಗಳ ನಗದು ಕೌಂಟರ್‌ಗಳಲ್ಲಿ ಎ.ಟಿ.ಪಿ ಕೌಂಟರ್ ಗಳಲ್ಲಿ, ಮೆಸ್ಕಾಂ ಆನ್ಲೈನ್ ಸೇವೆಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಆರ್ ಟಿಜಿಎಸ್/ನೆಫ್ಟ್ , ಕರ್ನಾಟಕ ಒನ್, ನನ್ನ ಮೆಸ್ಕಾಂ ಆ್ಯಪ್, ಪೋಸ್ಟ್ ಆಫೀಸ್ ಗಳಲ್ಲಿ ಪಾವತಿಸುವಂತೆ ಮೆಸ್ಕಾಂ ತನ್ನ ಪ್ರಕರಣೆಯಲ್ಲಿ ತಿಳಿಸಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com