ಶಿವಮೊಗ್ಗದ ಖ್ಯಾತ ಮಕ್ಕಳ ವೈದ್ಯ. ಸರ್ಜಿ ಹಾಸ್ಟಿಟಲ್​ನ ಡಾಕ್ಟರ್​ ಸತೀಶ್​ ಇನ್ನಿಲ್ಲ

Malenadu Today

ಗೋವಾ ಪ್ರವಾಸದ ವೇಳೆ ಅಸ್ವಸ್ಥರಾಗಿದ್ದ ಶಿವಮೊಗ್ಗದ ಖ್ಯಾತ ಮಕ್ಕಳ ತೀವ್ರ ನಿಗಾ ಘಟಕದ ತಜ್ಞ ಡಾಕ್ಟರ್ ಸತೀಶ್​ ರವರು ಸಾವನ್ನಪ್ಪಿದ್ದಾರೆ. ಇವತ್ತು ಬೆಳಗ್ಗೆ  ಅವರು ಸರ್ಜಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (sarji hospital) ಸಾವನ್ನಪ್ಪಿದ್ದಾರೆ. 

ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ​ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ?

ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸ್ತಿದ್ದ ಸತೀಶ್​ರವರು, ಗೋವಾಕ್ಕೆ ತೆರಳಿದ್ದ ವೇಳೆ ಬ್ರೈನ್​ ಹೆಮರೇಜ್​ಗೆ ಗುರಿಯಾಗಿದ್ದರು. ತಕ್ಷಣ ಅವರನ್ನು ಅಲ್ಲಿಂದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು  ಪತ್ನಿ ಡಾ.ಚೇತನಾ, ಪುತ್ರ ಹಾಗೂ ಪುತ್ರಿ ಅಪಾರ ಬಂಧು ಬಳಗ, ಸ್ನೇಹಬಳಗವನ್ನು ಅಗಲಿದ್ದಾರೆ.

ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿಯಲ್ಲಿ ಕಾಣಿಸಿಕೊಂಡ ಬೆಂಕಿ

ಮೂಲತಃ ದಾವಣಗೆರೆ ಜಿಲ್ಲೆಯ ತ್ಯಾವಣಗಿ ಗ್ರಾಮದವರಾದ ಸತೀಶ್​ರವರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯಗಳಿದ್ದವು.  ಸದ್ಯ ಅವರ ಅಂತಿಮ ದರ್ಶನಕ್ಕೆ ಗೋಪಾಳದ ರಂಗನಾಥ ಬಡಾವಣೆಯಲ್ಲಿರುವ ಅವರ ನಿವಾಸ ಸೌಪರ್ಣಿಕಾ ನಿಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. 

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮೃತರ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ 9 ರಿಂದ 9.30 ರವರೆಗೆ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದರ್ಶನಕ್ಕೆ ಅವಕಾಶವಿದೆ. ಬಳಿಕ ಸ್ವಗ್ರಾಮವಾದ ದಾವಣಗೆರೆ ಜಿಲ್ಲೆಯ ತ್ಯಾವಣಗಿಗೆ  ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ ಅಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

Share This Article