ಕಾಲ್​ ಮಾಡಿ ಡಿಪಾಸಿಟ್ ಕೇಳ್ತಾರೆ ಹುಷಾರ್ ಸಾರ್! ಗ್ರಾಮ ಲೆಕ್ಕಿಗನ ಹುದ್ದೆ ಹೆಸರಲ್ಲಿ ನಡೆದೋಯ್ತು ₹30 ಸಾವಿರ ಮೋಸ

A case has been registered in Doddapet police station limits for duping a man of Rs 30,000 for the post of village accountant.

ಕಾಲ್​ ಮಾಡಿ ಡಿಪಾಸಿಟ್ ಕೇಳ್ತಾರೆ  ಹುಷಾರ್ ಸಾರ್! ಗ್ರಾಮ ಲೆಕ್ಕಿಗನ ಹುದ್ದೆ ಹೆಸರಲ್ಲಿ ನಡೆದೋಯ್ತು  ₹30 ಸಾವಿರ ಮೋಸ

KARNATAKA NEWS/ ONLINE / Malenadu today/ May 5, 2023 GOOGLE NEWS

ಶಿವಮೊಗ್ಗ/  ಯಾರೇನೇ ಹೇಳಿದರೂ ಒಂದ್ಸಲ ನಾಲ್ಕು ಕಡೆ ವಿಚಾರಿಸಿ ನೋಡಿ. ಏಕೆಂದರೆ ಯಾಮಾರಿಸುವವರು ಹೆಚ್ಚಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಲೆಕ್ಕಿಗನ ಹುದ್ದೆಗೆ ಡಿಪಾಸಿಟ್ ಕಟ್ಬೇಕು ಅಂತಾ 30 ಸಾವಿರ ವಸೂಲಿ ಮಾಡಿ ಮೋಸ ಮಾಡಿದ ಘಟನೆಯೊಂದು ನಡೆದಿದೆ.

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಈ ಬಗ್ಗೆ ಕೇಸ್ ಆಗಿದೆ.  ಕಳೇದ ಮೂರನೇ ತಾರೀಖು ಘಟನೆ ಸಂಬಂಧ ದೂರುದಾಖಲಾಗಿದೆ.  ದೂರುದಾರರಿಗೆ ಕಳೆದ ಮಾರ್ಚ್​ನಲ್ಲಿ ಒಂದು ಕರೆ ಬಂದಿದೆ.

ಆ ಕಾಲ್​ನಲ್ಲಿ ಮಾತಾಡಿದ ವ್ಯಕ್ತಿಯು, ದೂರುದಾರನ ಪುತ್ರನ ಫೈಲ್​ ತಮ್ಮ ಬಳಿ ಬಂದಿದ್ಧಾಗಿ, ಅವರನ್ನ ಗ್ರಾಮ ಲೆಕ್ಕಿಗ ಹುದ್ದೆಗೆ ಆಯ್ಕೆ ಮಾಡಬೇಕಾದಲ್ಲಿ ಗ್ಯಾರಂಟಿ ನೀಡಬೇಕಾಗುತ್ತದೆ. ಗ್ಯಾರಂಟಿಗೋಸ್ಕರ, ಬ್ಯಾಂಕ್​ಗೆ 30 ಸಾವಿರ ರೂಪಾಯಿ ಹಣ ಕಟ್ಟಬೇಕು ಎಂದಿದ್ದಾರೆ. 

ಇಷ್ಟೆ ಅಲ್ಲದೆ, ನೀವು ಕಟ್ಟುವುದು ತಡವಾಗುತ್ತೆ, ಫೋನ್ ಪೇ ಮಾಡಿದರೇ, ನಾವೆ ಕಟ್ಟುತ್ತೇವೆ ಎಂದಿದ್ಧಾರೆ. ಮಗನ ಭವಿಷ್ಯವನ್ನ ನೆನೆದ ತಂದೆ  ಅವರು ಹೇಳಿದಾಗೆ, ಫೋನ್ ಪೇ ಮಾಡಿದ್ಧಾರೆ.

ಆನಂತರ  ಮತ್ತೆ ಅವರನ್ನ ಸಂಪರ್ಕಿಸಿ ಎನಾಯ್ತು ಎಂದು ವಿಚಾರಿಸಿದ್ದಾರೆ. ಆ ಸಂದರ್ಭದಲ್ಲಿಯು ಕರೆ ಸ್ವೀಕರಿಸಿದ ವ್ಯಕ್ತಿ ಮತ್ತೊಮ್ಮೆ ಹಣ ಜಮಾ ಮಾಡುವಂತೆ ಕೇಳಿದ್ದಾರೆ. ಆಗ ಡೌಟ್ ಬಂದು ದೊಡ್ಡಪೇಟೆ ಸ್ಟೇಷನ್​ನಲ್ಲಿ ದೂರು ದಾಖಲಿಸಿದ್ಧಾರೆ. 

election case / ಪತ್ರಿಕೆ ನಡುವೆ ಕರಪತ್ರಗಳನ್ನಿಟ್ಟು ಹಂಚಿದವರ ವಿರುದ್ಧ ಕೇಸ್/ ಪರ್ಮಿಟ್ ಇಲ್ಲದ ಪ್ರಚಾರಕ್ಕೂ ದಾಖಲಾಯ್ತು ಎಫ್​ಐಆರ್​!



ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 ಹತ್ತಿರವಾಗುತ್ತಿರುವಂತೆಯೇ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧದ ಪ್ರಕರಣಗಳು ಸಹ ಹೆಚ್ಚುತ್ತಿವೆ. ಚುನಾವಣೆಯಲ್ಲಿ ಮಕ್ಕಳನ್ನು ಬಳಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ದ ಜೆಡಿಎಸ್ ಅಭ್ಯರ್ಥಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರ ದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿರುದ್ಧ ಕೇಸ್ ಆಗಿತ್ತು. 

ಇದಕ್ಕೆ ಪೂರಕವಾಗಿ ಇದೀಗ ಮತ್ತೆರಡು ಕೇಸ್​ಗಳು ದಾಖಲಾಗಿವೆ.  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿಂತೆ ಜಯನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕೇಸ್​ವೊಂದು ದಾಖಲಾಗಿದೆ. 

ಮಾದರಿ ನೀತಿ ಸಂಹಿತೆ ಜಾರಿ ನೋಡಲ್ ಅಧಿಕಾರಿ  ನಾಗರಾಜ್‌ರವರ ನಿರ್ದೇಶನದ ಮೇರೆಗೆ ಆನಂದಪ್ಪ ಎಂಬವರು ಈ ಸಂಬಂಧ ಕಂಪ್ಲೆಂಟ್ ಮಾಡಿದ್ದಾರೆ.  

ಜಯನಗರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್​ 

 ಶಿವಮೊಗ್ಗ ನಗರದ ಮಹಾವೀರ ವೃತ್ತದಿಂದ ಗೋಪಿ ಸರ್ಕಲ್ ವರೆಗೆ  ಕೆ.ಎ. 14 ಸಿ 4846 ನಂಬರಿನ ಗೂಡ್ಸ್‌ ಕ್ಯಾರಿಯರ್ ನಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ -113 ದ ಜನಾತ ದಳ (ಜಾತ್ಯಾತೀತ) ಪಕ್ಷದ ವಿಧಾನಸಭಾ ಅಭ್ಯರ್ಥಿ ಆಯನೂರು ಮಂಜುನಾಥ ರವರ ಹಾಗೂ ಇತರರ ಪೋಟೋ ಮತ್ತು ಪಕ್ಷದ ಚಿಹ್ನೆ ಇರುವ ಫೆಕ್ಸ್ ಕಟೌಟ್ ಗಳನ್ನು ಹಾಕಿಕೊಂಡು ಪ್ರಚಾರ ಮಾಡಲಾಗುತ್ತಿತ್ತು. 

ಈ ಸಂಬಂಧ ಗೂಡ್ಸ್​ ವಾಹನಗಳ ಬಳಸಿಕೊಂಡು ಪ್ರಚಾರ ನಡೆಸಲು,  ಚುನಾವಣಾ ಅಧಿಕಾರಿಗಳಿಂದ  ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ದೂರಲಾಗಿದೆ. ಇದು  2023 ರ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲಂಘನೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. 

 

ಸಾಗರದಲ್ಲಿಯು ದಾಖಲಾಯ್ತು ಪ್ರಕರಣ

ಇನ್ನು ಕಳೆದ ಒಂದನೇ ತಾರೀಖು ಸಾಗರ ಟೌನ್​ ಸ್ಟೇಷನ್​ ನಲ್ಲಿ ಕೇಸ್​ ವೊಂದು ದಾಖಲಾಗಿದೆ. ಅದರ ಪ್ರಕಾರ,  ಸಂಘಟನೆಯೊಂದರ ಹೆಸರಲ್ಲಿ ಕರಪತ್ರಗಳನ್ನು ಪತ್ರಿಕೆಗಳ ನಡುವಲ್ಲಿ ಇಟ್ಟು ಹಂಚಲಾಗಿದ್ದು, ಇದರ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿದೆ. 

ಬಿ.ಜೆ.ಪಿ ಅಭ್ಯರ್ಥಿಯಾದ ಹರತಾಳು ಹಾಲಪ್ಪ ರವರ ಬಗ್ಗೆ ಅಪಪ್ರಚಾರ ಮಾಡುವಂತಹ ಬರಹವಿದ್ದ ಕರಪತ್ರದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ವಿವರಗಳು ಪತ್ತೆಯಾಗಿಲ್ಲ. ಇದನ್ನ ದುರುದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಧು ಆರೋಪಿಸಿ ದೂರು ನೀಡಲಾಗಿದ್ದು, ಈ ಸಂಬಂಧ ಎಫ್​ಐಆರ್ ದಾಖಲಾಗಿದೆ. 

ಕಾಂಗ್ರೆಸ್ ಪಕ್ಷದ ಸಭೆಗೆ ಏಕೆ ಹೋಗಿದ್ದೆ ಎಂದು ಹಲ್ಲೆ! ದಾಖಲಾಯ್ತು ಕೇಸ್ 

ಶಿಕಾರಿಪುರ/ ಶಿವಮೊಗ್ಗ/ ಜಿಲ್ಲೆ ರಾಜಕೀಯದ ಜಿದ್ದಾಜಿದ್ದಿ ಜೋರಾಗಿದೆ. ಎಲೆಕ್ಷನ್​ ಪ್ರಚಾರದಲ್ಲಿ ವೈಮನಸ್ಯಗಳು ಸಹ ಹೆಚ್ಚಾಗುತ್ತಿದೆ. 

ಇದಕ್ಕೆ ಸಾಕ್ಷಿ ಎಂಬಂತೆ, ಶಿಕಾರಿಪುರದಲ್ಲಿ ಒಂದೇ ಕುಟುಂಬದವರ ನಡುವೆ ಕಾಂಗ್ರೆಸ್​ ಪಕ್ಷದ ಸಭೆಗೆ ಹೋಗಿದ್ದ ವಿಚಾರಕ್ಕೆ ಜಗಳವಾಗಿ ಹಲ್ಲೆ ಯಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

ದಿನಾಂಕ:01-05-2023 ರಂದು  ಇಲ್ಲಿನ ಶೆಟ್ಟಿಹಳ್ಳಿ  ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಕುಮಾರ್ ಎಂಬವರು, ನವೀನ್ ಎಂಬವರ ಬಳಿಗೆ ಬಂದು ಅಂಗಡಿ ಹಾಗೂ ಮನೆ ಬಿಟ್ಟುಕೊಡುವಂತೆ ಹೇಳಿದ್ದಾರೆ. 

ಈ ವೇಳೆ ನವೀನ್ ಶುಂಠಿ ಜಮೀನು ಬಿಟ್ಟುಕೊಡುವಂತೆ ಕೇಳಿದ್ದಾರೆ. ಆಗ ಕುಮಾರ್​ ನೀನೆಕೆ ಕಾಂಗ್ರೆಸ್ ಪಕ್ಷದ ಸಭೆಗೆ ಹೋಗಿದ್ದೆ ಎಂದು ಬೈದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಇದೇ ವಿಚಾರದಡಿಯಲ್ಲಿ ಸೆಕ್ಷನ್  IPC 1860 (U/s-504,324,506)  ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.  


 

Malenadutoday.com Social media