ನಿನ್ನೆಯಿಂದಲೂ ನಟ ಕಿಚ್ಚ ಸುದೀಪ್ (kiccha sudeep politics)ರಾಜಕೀಯಕ್ಕೆ ಬರುತ್ತಾರೆ. ಈ ಸಂಬಂಧ ಅವರನ್ನು ಪಕ್ಷ ಸೇರಿ ಸ್ಪರ್ದೆಗಿಳಿಯುವಂತೆ ಆಹ್ವಾನಿಸಲಾಗಿದೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ.
ಸಾಗರ ಸುದ್ದಿ : ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ
ಕಿಚ್ಚಸುದೀಪ್ ಅವರನ್ನು ಕಾಂಗ್ರೆಸ್ ಗೆ ಕರೆತಂದು ಕಣಕ್ಕಿಳಿಸುವ ಪ್ರಯತ್ನಗಳು ನಡೆದಿದ್ದು, ರಾಹುಲ್ ಗಾಂಧಿಯ ಆಪ್ತ ಮೂಲಗಳು ಕಿಚ್ಚ ಸುದೀಪ್ರ ಮನೆಗೆ ಹೋಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ನಿನ್ನೆ ಎಲ್ಲಾ ಮಿಡಿಯಾಗಳಲ್ಲಿಯು ಟಾಂ…ಟಾಂ ಆಗಿದ್ದವು. ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಯಾವುದೇ ಪ್ರತಿಕ್ರಿಯೆ ಇದುವರೆಗೂ ಕೊಟ್ಟಿಲ್ಲ. ಅದರ ಹೊರತಾಗಿಯು ಸುದೀಪ್ರ ಕ್ಷೇತ್ರ ಆಯ್ಕೆಯವರೆಗೂ ಸುದ್ದಿ ವಿಸ್ತಾರಗೊಂಡಿದೆ.
ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿಯಲ್ಲಿ ಕಾಣಿಸಿಕೊಂಡ ಬೆಂಕಿ
ಶಿವಮೊಗ್ಗ & ಚಿತ್ರದುರ್ಗ
ಸುದೀಪ್ ಅವರನ್ನು ಕರೆತರುವ ಪ್ರಯತ್ನವನ್ನು ಖ್ಯಾತ ಚಿತ್ರನಟಿ ರಮ್ಯಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲಕ ಪ್ರಯತ್ನ ನಡೆಯುತ್ತಿದೆ ಎಂಬುದು ಪ್ರಮುಖ ಸುದ್ದಿಯಾಗಿದೆ. ಇನ್ನೂ ಸುದೀಪ್ರವರು ಬಯಸಿದರೇ ಶಿವಮೊಗ್ಗ ಅಥವಾ ಚಿತ್ರದುರ್ಗ ಕ್ಷೇತ್ರಗಳಲ್ಲಿ ಅವರನ್ನು ಕಣಕ್ಕಿಳಿಸುವ ಯೋಚನೆ ಹಾಗೂ ಪ್ರಸ್ತಾವವು ನಡೆದಿದೆ ಎಂದು ರಾಜ್ಯ ಮಾಧ್ಯಮಗಳು ಸುದ್ದಿ ಮಾಡಿವೆ.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಕಿಚ್ಚ ಸುದೀಪ್ರನ್ನು ಪಕ್ಷಕ್ಕೆ ಸೆಳೆದರೆ ಹಿಂದುಳಿದ ಸಮುದಾಯಗಳ ಮತಗಳನ್ನ ಒಟ್ಟುಗೂಡಿಸಿ ಪಕ್ಷದತ್ತ ಸೆಳೆಯಬಹುದು ಎಂಬುದು ಕಾಂಗ್ರೆಸ್ನಲ್ಲಿನ ಲೆಕ್ಕಾಚಾರ ಎನ್ನಲಾಗ್ತಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
ಯಾವುದಕ್ಕೂ ಕಿಚ್ಚ ಸುದೀಪ್ ಈ ಬಗ್ಗೆ ಮೌನ ಮುರಿದು, ತಮ್ಮ ಬಗೆಗಿನ ಎಲೆಕ್ಷನ್ ಸುದ್ದಿ ಸತ್ಯ ವರದಿಯೋ? ವದಂತಿಯೋ? ಎಂಬುದನ್ನ ಸ್ಪಷ್ಟಪಡಿಸಬೇಕಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com