ಇವತ್ತಿನಿಂದ ಮೂರು ದಿನ ಶಿವಮೊಗ್ಗದಲ್ಲಿ ಇರಲಿದ್ದಾರೆ ಸಚಿವ ಮಧು ಬಂಗಾರಪ್ಪ ! ಕಾರ್ಯಕ್ರಮದ ಪಟ್ಟಿ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Shivamogga Madhu Bangarappa Slams BJP
Shivamogga Madhu Bangarappa Slams BJP

Minister S Madhu Bangarappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಡಿ.ಕೆ ಶಿವಕುಮಾರ್ ಸಂಪುದಲ್ಲಿ ಮಂತ್ರಿಯಾದ ಬಳಿಕ ಇದೆ ಮೊದಲ ಭಾರಿಗೆ ಸಚಿವ ಎಸ್. ಮಧು ಬಂಗಾರಪ್ಪ ಶಿವಮೊಗ್ಗಕ್ಕೆ ಆಗಮಿಸ್ತಿದ್ದಾರೆ. ಇವತ್ತು ಶಿವಮೊಗ್ಗಕ್ಕೆ ಬರಲಿರುವ ಅವರು ಆಗಸ್ಟ್ 09 ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತಾಗಿ ವಾರ್ತಾಇಲಾಖೆ ನೀಡಿರುವ ಮಾಹಿತಿ ಹೀಗಿದೆ.

ಸಚಿವ ಮಧು ಬಂಗಾರಪ್ಪ ತಮ್ಮ ಪ್ರವಾಸದ ಅವಧಿಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಇವತ್ತು ಬೆಳಿಗ್ಗೆ 10 ಗಂಟೆಗೆ ಸೊರಬ ತಾಲ್ಲೂಕಿನ ಬಂಗಾರಧಾಮಕ್ಕೆ ಭೇಟಿ ನೀಡುವ ಅವರು, ಬಳಿಕ ಸೊರಬದ ರಂಗಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.30 ಕ್ಕೆ ಸೊರಬ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕ್ಷೇತ್ರ ವ್ಯಾಪ್ತಿಯ ಹಾನಿಗೊಳಗಾದ ಪ್ರದೇಶಗಳನ್ನು ಖುದ್ದು ವೀಕ್ಷಿಸಲಿದ್ದಾರೆ.

ಆಗಸ್ಟ್ 08 ರ ಪ್ರವಾಸದ ವಿವರ

  • ಆಗಸ್ಟ್ 08 ರಂದು ಬೆಳಿಗ್ಗೆ 10 ಗಂಟೆಗೆ ಶಿಕಾರಿಪುರದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಸ್ಯೆಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
  • ಮಧ್ಯಾಹ್ನ 12.30 ಕ್ಕೆ ಶಿವಮೊಗ್ಗ ನಗರಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ.
  • ಮಧ್ಯಾಹ್ನ 2.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ತಾಲ್ಲೂಕು ವ್ಯಾಪ್ತಿಯ ಪ್ರಕೃತಿ ವಿಕೋಪದ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಆಗಸ್ಟ್ 09 ರಂದು ಸಚಿವರ ಪ್ರವಾಸ

ಆಗಸ್ಟ್ 09 ರಂದು ಬೆಳಿಗ್ಗೆ 9.30 ಕ್ಕೆ ತೀರ್ಥಹಳ್ಳಿ ತಾಲ್ಲೂಕಿನ ಇಂದಿರಾನಗರದಲ್ಲಿ ಇತ್ತೀಚೆಗೆ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಮನೆಗಳಿಗೆ ತೆರಳಿ ಅಹವಾಲು ಆಲಿಸಲಿದ್ದಾರೆ. ಬೆಳಿಗ್ಗೆ 10.30 ಕ್ಕೆ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾನಿಯ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor