ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಡಿ ಅಧಿಕಾರಿಗಳು ಭೇಟಿಕೊಟ್ಟು ಆಯ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸ್ತಿದ್ಧಾರೆ.
ಎಲ್ಲೆಲ್ಲಿ ಪರಿಶೀಲನೆ
- ಪಟ್ಟಣದ ಸೊಪ್ಪುಗುಡ್ಡೆಯ ಶಾರಿಕ್ ಅಜ್ಜಿಯ ಮನೆಗೆ ಈಡಿ ಅಧಿಕಾರಿಗಳ ತಂಡ ಭೇಟಿಕೊಟ್ಟಿದೆ.
- ಇನ್ನೊಂದೆಡೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕಾಂಗ್ರೆಸ್ ಕಚೇರಿಗೆ ಈಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.
ಕಿಮ್ಮನೆ ಕಚೇರಿಗೆ ಭೇಟಿಕೊಡಲು ಕಾರಣವೇನು?
ಶಾರೀಖ್ನ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿಯನ್ನ ತೆರೆಯಲಾಗಿತ್ತು. ಈ ಸಂಬಂಧ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಈ ಅಗ್ರಿಮೆಂಟ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ರವರ ಸಂಬಂಧಿ ಹೆಸರಲ್ಲಿ ಮಾಡಿಕೊಳ್ಳಲಾಗಿತ್ತು. ಸದ್ಯ ಶಾರೀಖ್ಗೆ ಸೇರಿದ ಹಣಮೂಲ ಮತ್ತು ಆಸ್ತಿ ಮೂಲದ ವಿಚಾರವಾಗಿ ತೀರ್ಥಹಳ್ಳಿಗೆ ಭೇಟಿಕೊಟ್ಟಿರುವ ಇಡಿ ಅಧಿಕಾರಿಗಳು, ಕಾಂಗ್ರೆಸ್ ಕಚೇರಿಯಲ್ಲಿಯು ದಾಖಲಾತಿಯ ಪರಿಶೀಲನೆ ನಡೆಸಿದ್ದಾರೆ.
ಇದೇ ವಿಚಾರವಾಗಿ ಶಾರೀಖ್ನ ಅಜ್ಜಿಯನ್ನು ಸಹ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ತತ್ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ್ದು, ಕಾನೂನು ಬದ್ಧವಾಗಿರುವ ರೆಕಾರ್ಡ್ಗಳನ್ನು ಪರಿಶೀಲಿಸಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com