ಅಧಿಕಾರ ಸ್ವೀಕರಿಸಿದ ತಿಂಗಳೊಳಗೆ ಶಿವಮೊಗ್ಗಕ್ಕೆ ಕೇಂದ್ರ ಸಚಿವರ ಭೇಟಿ | ವಿಐಎಸ್‌ಎಲ್‌ಗೆ ನಾಳೆ ಹೊಸ ಬೆಳಕು?

Union Minister HD Kumaraswamy is scheduled to visit Shivamogga on Sunday, June 30, 2024, to address concerns related to the Visvesvaraya Iron and Steel Plant (VISL) in Bhadravathi

ಅಧಿಕಾರ ಸ್ವೀಕರಿಸಿದ ತಿಂಗಳೊಳಗೆ ಶಿವಮೊಗ್ಗಕ್ಕೆ ಕೇಂದ್ರ ಸಚಿವರ ಭೇಟಿ | ವಿಐಎಸ್‌ಎಲ್‌ಗೆ ನಾಳೆ ಹೊಸ ಬೆಳಕು?
Visvesvaraya Iron and Steel Plant, VISL in Bhadravathi ,Union Minister HD Kumaraswamy , visit Shivamogga

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಕೇಂದ್ರ ಸಚಿವರಾದ ಬಳಕಿ ಮಾಜಿ ಸಿಎಂ ಕುಮಾರಸ್ವಾಮಿಯವರು ವಿಐಎಸ್‌ಎಲ್‌ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ ಎಂದು ಹೇಳಲಾಗಿತ್ತು. ಅಲ್ಲದೆ ಈ ಸಂಬಂಧ ವಿಶೇಷ ಮನವಿ ಸಹ ಸಲ್ಲಿಸಲಾಗಿತ್ತು. ಮೇಲಾಗಿ ತಮ್ಮನ್ನ ಭೇಟಿಯಾದ ನಿಯೋಗದೊಂದಿಗೆ 15 ದಿನಗಳಲ್ಲಿ ವಿಐಎಸ್‌ಎಲ್‌ ವಿಚಾರದಲ್ಲಿ ಮತ್ತಷ್ಟು ಮಾಹಿತಿ ಪಡೆದು ಮಾತನಾಡುವುದಾಗಿ ಹೇಳಿದ್ದರು. ಇದೀಗ ತಮ್ಮ ಮಾತಿನಂತೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ನಾಳೆ ಶಿವಮೊಗ್ಗಕ್ಕೆ ಬರಲಿದ್ದಾರೆ. 

 

ದಿನಾಂಕ 30-06-2024 ರ ಭಾನುವಾರ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವಕ್ಕೆ (ವಿ.ಐ.ಎಸ್.ಎಲ್) ಬೇಟಿನೀಡಿ ಕಾರ್ಖನೆಯ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಮಿಕರನ್ನು ಬೇಟಿಮಾಡಲಿದ್ದಾರೆ. ಅವರ ಪ್ರಯಾಣದ ವಿವರ ಹೀಗಿದೆ. 

ನಾಳೆ ಶಿವಮೊಗ್ಗಕ್ಕೆ ಮಾಜಿ ಸಿಎಂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರು ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ ಏಳು ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 12.15 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಲಿದ್ದಾರೆ. 

ಅಲ್ಲಿಂದ 12.30 ಕ್ಕೆ ಹೊರಟು ಭದ್ರಾವತಿಗೆ 13.30 ಕ್ಕೆ ತೆರಳಲಿದ್ದಾರೆ. ಅಲ್ಲಿ ವಿಐಎಸ್‌ಎಲ್‌ ಪ್ಲಾಟ್‌ ಗೆ ಭೇಟಿಕೊಟ್ಟು, ವಿಐಎಸ್‌ಎಲ್‌ ಕಾರ್ಮಿಕರ ಜೊತೆಗೆ ಸಭೆ ನಡೆಸಲಿದ್ದಾರೆ. 

ಆ ಬಳಿಕ ಅಧಿಕಾರಿಗಳ ಜೊತೆಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಭದ್ರಾವತಿಯಿಂದ ಹೊರಟು ಏಳು ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಏಳು ಕಾಲಿಗೆ ವಿಶೇಷ ವಿಮಾನದಲ್ಲಿ ಬೆಂಗಳೂರು ಹೆಚ್‌ಎಲ್‌ ಏರ್‌ಪೋರ್ಟ್‌ಗೆ ತೆರಳಿದ್ದಾರೆ. 

Union Minister HD Kumaraswamy is scheduled to visit Shivamogga on Sunday, June 30, 2024, to address concerns related to the Visvesvaraya Iron and Steel Plant (VISL) in Bhadravathi. He will arrive at Shivamogga Airport at 12:15 PM and proceed to the VISL plant for meetings with workers and officials.