ಮತ ಎಣಿಕೆ ರಿಸಲ್ಟ್​ ನಾಳೆ ಆನ್​ಲೈನ್​ ನಲ್ಲಿಯು ನೋಡಬಹುದಾ? / ನಾಳೆ ಯಾವೆಲ್ಲಾ ದಾರಿ ಬಂದ್? ಪರ್ಯಾಯ ಮಾರ್ಗ ಯಾವುದು? ವಿವರ ಓದಿ

, The counting of votes will be held at Sahyadri Arts College tomorrow and the district administration has suggested alternative routes for motorists, ನಾಳೇ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಜಿಲ್ಲಾಡಳಿತ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನ ಸೂಚಿಸಿದೆ.

ಮತ ಎಣಿಕೆ  ರಿಸಲ್ಟ್​ ನಾಳೆ ಆನ್​ಲೈನ್​ ನಲ್ಲಿಯು ನೋಡಬಹುದಾ? / ನಾಳೆ ಯಾವೆಲ್ಲಾ ದಾರಿ ಬಂದ್? ಪರ್ಯಾಯ ಮಾರ್ಗ ಯಾವುದು? ವಿವರ ಓದಿ

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗ  ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023 ರ ಸಂಬಂಧ ದಿನಾಂಕ: 13-05-2023 ರಂದು ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿರುವುದರಿಂದ, ಸಾರ್ವಜನಿಕರಿಗೆ ಸುಗಮ ಸಂಚಾರದ ಹಿತ ದೃಷ್ಠಿಯಿಂದ ದಿನಾಂಕ: 13-05-2023 ರಂದು ವಾಹನಗಳ ಸಂಚಾರಕ್ಕೆ ಈ ಕೆಳಕಂಡಂತೆ ಮಾರ್ಗ ಬದಲಾವಣೆ  ಮಾಡಲಾಗಿದೆ. 



1. ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿಷೇದಿಸಲಾಗಿದೆ. 

2. ಎಂ.ಆರ್.ಎಸ್ ಸರ್ಕಲ್ ನಿಂದ ಬಿ.ಹೆಚ್ ರಸ್ತೆ, ವಿದ್ಯಾನಗರ, ಮತ್ತೂರು ಕ್ರಾಸ್ ನ ವರೆಗೆ ಸಾರ್ವಜನಿಕರ ವಾಹನಗಳು ಓಡಾಡದಂತೆ ನಿಷೇದಿಸಿದೆ.

3. ಬೆಂಗಳೂರು, ಭದ್ರಾವತಿ, ಎನ್.ಆರ್ ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ಸುಗಳು ಹಾಗೂ ಕಾರು ದ್ವಿಚಕ್ರ, ತ್ರಿಚಕ್ರ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

4. ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್ಸುಗಳು ಬಿ.ಹೆಚ್ ರಸ್ತೆ ಮಾರ್ಗವಾಗಿ ಬಸ್ಟಾಂಡ್ ಗೆ ಹೋಗುವುದು.

5. ಹೊನ್ನಾಳಿ ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನಗಳು, ಎಲ್ಲಾ ಬಸ್ ಗಳನ್ನು ವಿನೋಬನಗರ 100 ಅಡಿ ರಸ್ತೆ ಮಾರ್ಗವಾಗಿ ಹೋಗುವುದು.

6. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್ ಗಳು ಎ.ಎ ಸರ್ಕಲ್,  ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಕೆಇಬಿ ಸರ್ಕಲ್ ಮುಖಾಂತರವಾಗಿ ಹೋಗುವುದು.

7. ಕೆಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣ ದಿಂದ ಬೆಂಗಳೂರು ಭದ್ರಾವತಿ ಎನ್.ಆರ್ ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಎಂ.ಆರ್.ಎಸ್ ಸರ್ಕಲ್ ಕಡೆಗೆ ಹೋಗುವುದು.

8. ಏಜೆಂಟರು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳ ವಾಹನಗಳನ್ನು ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು, ವಜ್ರ ಮಹೋತ್ಸವ ಕಟ್ಟಡದ ಎದುರು ಮತ್ತು  ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.

9. ಸಾರ್ವಜನಿಕರ ಕಾರುಗಳು ಮತ್ತು ದ್ವಿ ಚಕ್ರ ವಾಹನಗಳನ್ನು ಮಾತ್ರ ಎಂ.ಆರ್.ಎಸ್ ನಿಂದ ಎನ್.ಆರ್ ಪುರ ರಸ್ತೆಯ ಎಡಭಾಗದಲ್ಲಿ ಪಾರ್ಕಿಂಗ್ ಮಾಡುವುದು. 

10. ಸಾರ್ವಜನಿಕರ ಎಲ್ಲಾ ತರದ ವಾಹನಗಳನ್ನು ಎಂ.ಆರ್.ಎಸ್. ಸರ್ಕಲ್ ನ ಹತ್ತಿರವಿರುವ ಕೆ.ಇ.ಬಿ ಸಮುದಾಯ ಭವನದ ಹಿಂಭಾಗ ಮತ್ತು ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ ಹತ್ತಿರ ಪಾರ್ಕಿಂಗ್ ಮಾಡುವುದು.

ಮತಗಟ್ಟೆಗಳಲ್ಲಿ ಈ ವಸ್ತುಗಳಿಗೆ ನಿಷಿದ್ಧ

 

ಮತ ಎಣಿಕಾ ಕೇಂದ್ರದ ಒಳಗಡೆ ಮೊಬೈಲ್ ಫೋನ್‌, ಡಿಜಿಟಲ್‌ ವಾಚ್‌ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮತ ಎಣಿಕಾ ಕೇಂದ್ರಕ್ಕೆ  ಬರುವ ಚುನಾವಣಾ ಏಜೆಂಟರ್ ಗಳು ಮತ್ತು ಇತರೆ ವ್ಯಕ್ತಿಗಳು  ಮೊಬೈಲ್ ಫೋನ್, ಡಿಜಿಟಲ್‌ ವಾಚ್‌  ಮತ್ತು ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಯಾವುದೇ ಕಾರಣಕ್ಕೂ ತರುವಂತಿರುವುದಿಲ್ಲ.



ಆನ್​ಲೈನ್​ನಲ್ಲಿಯೇ ನೋಡಬಹುದಾ ಕೌಂಟಿಂಗ್ 

ಹೌದು, ಆನ್​ಲೈನ್​ನಲ್ಲಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಲೈವ್ ಆಗಿ ವೀಕ್ಷಿಸಬಹುದು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವೇ ಆನ್​ ಲೈನ್​ನಲ್ಲಿ ಸ್ಪಷ್ಟ ಮಾಹಿತಿಯನ್ನ ನೀಡುತ್ತಿದೆ. ಇದಕ್ಕಾಗಿ https://results.eci.gov.in/ ಗೆ ಲಾಗಿನ್ ಆದರೆ ಸಾಕು.. 


ನಾಳೆ ಮತ ಎಣಿಕೆ/ ಎಲೆಲ್ಲಿ 144 ಸೆಕ್ಷನ್​?/ ಎಷ್ಟು ಸುತ್ತು ನಡೆಯುತ್ತೆ ಕೌಂಟಿಂಗ್/ ಯಾವ ರೀತಿ ನಡೆಯುತ್ತೆ ! ವಿವರ ಇಲ್ಲಿದೆ

ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಮುಕ್ತಾಯಗೊಂಡು ನಾಳೆ ಮತ ಎಣಿಕೆ ನಡೆಯಲಿದೆ. ಆನಂತರ ಸರ್ಕಾರ ಅತಂತ್ರದ್ದೋ? ಬಹುಮತದ್ದೋ ನಿರ್ಧಾರವಾಗಲಿದೆ. ಭವಿಷ್ಯದ ಸರ್ಕಾರದ ಸಮಾಲೋಚನೆಗಳ ನಡುವೆ ಅಧಿಕಾರ ವರ್ಗ ತನ್ನ ಕೆಲಸವನ್ನು ಮುಂದುವರಿಸಿದ್ದು, ಮತ ಎಣಿಕೆಗಾಗಿ ಸಿದ್ಧತೆ ಮಾಡಿಕೊಂಡಿದೆ. 

ಸಹ್ಯಾದ್ರಿ ಕಾಲೇಜಿನಲ್ಲಿ ಸಕಲ ಸಿದ್ಧತೆ 

ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೇ 13ರಂದು ಶನಿವಾರ ಬೆಳಿಗ್ಗೆ 8ಗಂಟೆಯಿಂದ ಪ್ರಾರಂಭವಾಗಲಿದೆ. ಈ ನಿಟ್ಟಿಲ್ಲಿ, ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದ್ದಾರೆ.

ಹೇಗಿರುತ್ತೆ ಪ್ರಕ್ರಿಯೆ?

ಅಂಚೆ ಮತ ಎಣಿಕೆಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರವಾರು ಹೆಚ್ಚುವರಿಯಾಗಿ 6 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 

ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರು ಶನಿವಾರ ಬೆಳಿಗ್ಗೆ 7ಗಂಟೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಲು ಸೂಚನೆ ನೀಡಲಾಗಿದೆ. 

ಬೆಳಿಗ್ಗೆ 7ಗಂಟೆಗೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳು ಮತ್ತು ಸಹಾಯಕ ಚುನಾವಣಾಧಿಕಾರಿಯ ಟ್ಯಾಬುಲೇಷನ್ ಟೇಬಲ್ ಇರುತ್ತದೆ.

ಮತ ಎಣಿಕೆ ಸ್ಥಳದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರಿಗೆ ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುವುದು.

8 ಗಂಟೆಗೆ ಮತ ಎಣಿಕೆ ಆರಂಭ

ಅಂಚೆ ಮತಪತ್ರಗಳ ಎಣಿಕೆ ಮತ್ತು ಕಂಟ್ರೋಲ್ ಯುನಿಟ್ ಮೂಲಕ ಮತ ಎಣಿಕೆಯನ್ನು ಬೆಳಿಗ್ಗೆ 8 ಗಂಟೆಗೆ ಆರಂಭಿಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ತರಬೇತಿ ನೀಡಲಾಗಿದೆ. 

ಇವಿಎಂ ಮತ ಎಣಿಕೆ ಪೂರ್ಣಗೊಂಡ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಿ ಎಣಿಕೆ ಮಾಡಲಾಗುವುದು. 

ಮತ ಎಣಿಕೆ ಹಾಲ್‌ನಲ್ಲಿ ಮೊಬೈಲ್ ಮತ್ತಿತರ ಎಲೆಕ್ಟಾನಿಕ್ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಮತ ಎಣಿಕೆ ಆವರಣದ ಸುತ್ತ ಸೆಕ್ಷನ್ 144 ಜಾರಿಗಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ ಎಣಿಕೆ ಸುತ್ತು ವಿವರ: 

ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ 247 ಮತಗಟ್ಟೆಗಳಿದ್ದು 18 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಇದೇ ರೀತಿ ಭದ್ರಾವತಿ 253 ಮತಗಟ್ಟೆ 19 ಸುತ್ತು, ಶಿವಮೊಗ್ಗ 284 ಮತಗಟ್ಟೆ 21 ಸುತ್ತು, ತೀರ್ಥಹಳ್ಳಿ 258 ಮತಗಟ್ಟೆ 19 ಸುತ್ತು, ಶಿಕಾರಿಪುರ 234 ಮತಗಟ್ಟೆ 17 ಸುತ್ತು, ಸೊರಬ 239 ಮತಗಟ್ಟೆ 18 ಸುತ್ತು ಹಾಗೂ ಸಾಗರದಲ್ಲಿ 267 ಮತಗಟ್ಟೆಗಳಿದ್ದು, 20 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ  

ಜಿಲ್ಲಾಧಿಕಾರಿ ಅಭಿನಂದನೆ: 

ಜಿಲ್ಲೆಯಲ್ಲಿ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 1782 ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, 8100 ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ ಎಲ್ಲಾ ಮತದಾರರಿಗೆ ಹಾಗೂ ಸುಗಮವಾಗಿ ಮತದಾನ ಆಯೋಜಿಸಲು ಸಹಕರಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.



ಚೋರಡಿ ಅಪಘಾತ/  ಮತ್ತೊರ್ವ ಗಾಯಾಳು ಸಾವು!/ ಮೆಗ್ಗಾನ್​ಗೆ ಜೆಡಿಎಸ್ ಮುಖಂಡರ ಭೇಟಿ

ಶಿವಮೊಗ್ಗ/ ನಿನ್ನೆ ಚೋರಡಿಯಲ್ಲಿ  ಸಂಭವಿಸಿದ ಭೀಕರ ಅಪಘಾತದ ಘಟನೆಯಲ್ಲಿ ಸಾವನ್ನಪ್ಪಿರುವ ಸಂಖ್ಯೆ ಮೂರಕ್ಕೆ ಏರಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಇವತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ಧಾರೆ. 

ಚೋರಡಿ ಅಪಘಾತ/ಅಮ್ಮಾ ರಾಘಣ್ಣ ಮಾತಾಡ್ತಿದ್ದೀನಿ! / ದೇವರಾದ ಮೆಗ್ಗಾನ್ ಸಿಬ್ಬಂದಿ/ ಜೀವಕ್ಕೆ ಜೀವ ಕೊಟ್ಟ ಶಿವಮೊಗ್ಗ ಜನ! ಕುಮದ್ವತಿ ಸೇತುವೆ  ಮೇಲೆ ನಡೆದ ಘಟನೆಯ ಪೂರ್ತಿ ಚಿತ್ರಣ 



ನಿನ್ನೆ ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇವತ್ತು ಶಿಕಾರಿಪುರ ತಾಲೂಕಿನ ಜೋಗಿಹಳ್ಳಿ ಗ್ರಾಮದ ಮಹೇಶ್ (45 ವರ್ಷ) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಸಾರ್ವಜನಿಕರ ಗಮನಕ್ಕೆ/ ಮೇ 15 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ಪವರ್ ಕಟ್ 



ಶಿವಮೊಗ್ಗ ಸಂತೆಕಡೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಭದ್ರಾ 1 ಮತ್ತು 2 ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೆ 15 ರಂದು ಇಡೀ ದಿನ ವಿದ್ಯುತ್ ವ್ಯತ್ಯಯವಾಗಲಿದೆ. 

ಯಾವ್ಯಾವ ಭಾಗದಲ್ಲಿ ವಿದ್ಯುತ್ ಇರೋದಿಲ್ಲ

ಮೇ-15 ರ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆವರೆಗೆ ಸಂತೆಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು, ಕಾಕನಹಸೂಡಿ, ಲಿಂಗಾಪುರ, ಸಿದ್ದಮ್ಮಾಜಿ ಹೊಸೂರು  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಚೋರಡಿಯಲ್ಲಿ ಅಪಘಾತ/ ಮೆಗ್ಗಾನ್​ ಆಸ್ಪತ್ರೆಗೆ ಬಿವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ದೌಡು/ಸಾವು ನೋವಿನ ಬಗ್ಗೆ ಎಸ್​ಪಿ ಮಿಥುನ್ ಕುಮಾರ್  ಕೊಟ್ಟ ನಿಖರ ಮಾಹಿತಿ ಇಲ್ಲಿದೆ 



ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ! ಡಿಪ್ಲೋಮೋ ಕೋರ್ಸ್​ಗಳಿಗೆ ಅರ್ಜಿ ಆಹ್ವಾನ 

ಶಿವಮೊಗ್ಗ/  2023-24 ನೇ ಸಾಲಿನಲ್ಲಿ ಶಿರಾಳಕೊಪ್ಪದ ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್  ಸಂಸ್ಥೆಯಲ್ಲಿರುವ ಪ್ರಥಮ ಡಿಪ್ಲೋಮೊ ಕೋರ್ಸ್‍ಗಳಿಗೆ ಮೇರೆಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

 ಎಸ್‍ಎಸ್‍ಎಲ್‍ಸಿ  ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಮೀಸಲಾತಿ ಬಯಸುವ ಅಭ್ಯರ್ಥಿಗಳು ತಮ್ಮ  ಮೀಸಲಾತಿಯ ಪೂರಕ ದಾಖಲಾತಿಗಳೊಂದಿಗೆ ಮೇ -31 ರೊಳಗಾಗಿ ಸಂಸ್ಥೆಗೆ ನೇರವಾಗಿ ಸಲ್ಲಿಸಿ ಪ್ರವೇಶವನ್ನು ಪಡೆಯುವಂತೆ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು  ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9480057999/9481066050/8867419851 ಗಳನ್ನು ಸಂಪರ್ಕಿಸುವುದು

-----------------------

ಚೋರಡಿಯಲ್ಲಿ ಭೀಕರ ಅಪಘಾತ/ ಇಷ್ಟಕ್ಕೂ ಹೇಗಾಯ್ತು ಆಕ್ಸಿಡೆಂಟ್ ? ಪ್ರತ್ಯಕ್ಷದರ್ಶಿ ಹೇಳಿದ್ದೇನು

ಶಿವಮೊಗ್ಗ/  ಕಾಣೆಯಾದವರ ಬಗ್ಗೆ ವಿವರ; ಮಾಹಿತಿ ನೀಡಲು ಮನವಿ

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲುಸಾಲೆ ಮಳವಳ್ಳಿ ಗ್ರಾಮ ವಾಸಿ ಸದಾನಂದ ಎಂ.ಎಂ. ಎಂಬುವವರ ಪತ್ನಿ ಗೀತಾ (30 ವರ್ಷ) ಎಂಬ ಮಹಿಳೆಯು ಕಾಣೆಯಾಗಿದ್ಧಾರೆ. 

ತಮ್ಮ 11 ವರ್ಷದ ಮಗಳು ಪ್ರಿಯಾಂಕ ಹಾಗೂ 9 ವರ್ಷದ ಮಗ ಪ್ರಸಾದ್ ಇವರುಗಳನ್ನು ಕರೆದುಕೊಂಡು ದಿ: 11/04/2023 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. 

ಚೋರಡಿ ಅಪಘಾತ/ಅಮ್ಮಾ ರಾಘಣ್ಣ ಮಾತಾಡ್ತಿದ್ದೀನಿ! / ದೇವರಾದ ಮೆಗ್ಗಾನ್ ಸಿಬ್ಬಂದಿ/ ಜೀವಕ್ಕೆ ಜೀವ ಕೊಟ್ಟ ಶಿವಮೊಗ್ಗ ಜನ! ಕುಮದ್ವತಿ ಸೇತುವೆ  ಮೇಲೆ ನಡೆದ ಘಟನೆಯ ಪೂರ್ತಿ ಚಿತ್ರಣ 

ಈಕೆಯ ಚಹರೆ ದುಂಡುಮುಖ, ಸಾಧಾರಣ ಮೈಕಟ್ಟು, 5 ಅಡಿ ಎತ್ತರ, ಎಡಕೆನ್ನೆಯ ಮೇಲೆ ಹಳೆ ಗಾಯದ ಗುರುತು ಇರುತ್ತದೆ.  ಕೆಂಪು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. 

ಈ ತಾಯಿ ಮಕ್ಕಳ ಸುಳಿವು ದೊರತಲ್ಲಿ ಕೂಡಲೇ ಹೊಸನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.  (ಫೋಟೋಗಳನ್ನು ಲಗತ್ತಿಸಿದೆ)

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Malenadutoday.com Social media