ಭದ್ರಾವತಿಯಲ್ಲಿ ನಿರ್ಮಾಣವಾಯ್ತು ಪುನೀತ್ ಹಾಗೂ ಡಾ.ರಾಜ್ ಕಂಚಿನ ಪ್ರತಿಮೆಗಳ ದೇಗುಲ, ಲೋಕಾರ್ಪಣೆ ಯಾವಾಗ ಗೊತ್ತಾ..?  

ಭದ್ರಾವತಿ: ಸ್ಯಾಂಡಲ್‌ವುಡ್‌ನ ನಟ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷಗಳು ಕಳೆದಿದ್ದರೂ, ಅವರ ಮೇಲಿರುವ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ರಸ್ತೆ, ಹೋಟೆಲ್ ಹಾಗೂ ಉದ್ಯಮಗಳಿಗೆ ಅವರ ಹೆಸರಿಟ್ಟು ಗೌರವಿಸಲಾಗುತ್ತಿದೆ. ಇದೀಗ ಭದ್ರಾವತಿಯಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆಗಳಿರುವ ದೇಗುಲವೊಂದು ನಿರ್ಮಾಣಗೊಂಡಿದೆ.

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ

ಭದ್ರಾವತಿ ನಗರದ ರೈಲು ನಿಲ್ದಾಣದ ಸಮೀಪವಿರುವ ಚಾಮೇಗೌಡ ಬಡಾವಣೆಯಲ್ಲಿ ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘವು ಈ  ದೇಗುಲವನ್ನು ನಿರ್ಮಿಸಿದೆ. ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ತಲೆ ಎತ್ತಿದ್ದು, ಇದರೊಳಗೆ ಡಾ. ರಾಜ್ ಹಾಗೂ ಅಪ್ಪು ಅವರ ತಲಾ ಮೂರು ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. 

Puneeth Rajkumar Bronze Statue Temple Inauguration
Puneeth Rajkumar Bronze Statue Temple Inauguration

ಈ ದೇಗುಲ ಹಾಗೂ ಪ್ರತಿಮೆಗಳ ಲೋಕಾರ್ಪಣೆ ಕಾರ್ಯಕ್ರಮವು ಜನವರಿ 22ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ದೇಗುಲವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಂಗವಾಗಿ ಅಂದು ಸಂಜೆ 7 ಗಂಟೆಗೆ ಬೆಂಗಳೂರಿನ ಪ್ರಖ್ಯಾತ ‘ರಾಜ್ ಮೆಲೋಡಿ ಮೇಕರ್ಸ್’ ತಂಡದಿಂದ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಡಾ. ರಾಜ್ ಕುಟುಂಬದ ಮಧುರ ಗೀತೆಗಳ ಮೂಲಕ ಅಭಿಮಾನಿಗಳು ನೆಚ್ಚಿನ ನಟರಿಗೆ ನಮನ ಸಲ್ಲಿಸಲಿದ್ದಾರೆ.

Puneeth Rajkumar Bronze Statue Temple Inauguration

shivamogga car decor sun control house
shivamogga car decor sun control house
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು