ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ?

Shimoga BJP ticket witnessing an exciting twist! Two aspirants for JD(S) ticket Will JP Nadda come?

ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ?

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

Shivamogga/ ಶಿವಮೊಗ್ಗ ನಗರ ಕ್ಷೇತ್ರ (Shivamogga assembly constituency) ದ ಬಿಜೆಪಿ ಟಿಕೆಟ್? ಬರ್ತಿದೆ…ಬರ್ತಿದೆ..ಬರ್ತಿದೆ…ಬರ್ತಿಲ್ಲ…ಬರ್ತಿಲ್ಲ ಎನ್ನುವ ಟ್ರೊಲ್​ವೊಂದು ಹರಿದಾಡುವಷ್ಟರ ಮಟ್ಟಿಗೆ ಶಿವಮೊಗ್ಗ ಸಿಟಿ ಕ್ಷೇತ್ರ ಕುತೂಹಲ ಮೂಡಿಸಿದೆ. 

ಬರೋಬ್ಬರಿ 222 ಕ್ಷೇತ್ರಗಳಿಗೂ ಅಳೆದು ಮೊಗೆದು ಟಿಕೆಟ್ ಕೊಟ್ಟಿರುವ ಬಿಜೆಪಿಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿ ನಿಕ್ಕಿ ಮಾಡಲು ಸಾಧ್ಯವಾಗಲಿಲ್ಲವೇ ? ಈ ಪ್ರಶ್ನೆಗೆ ಬಿಜೆಪಿ ಮೂಲಗಳಲ್ಲಿ ಬೇರೆಯದ್ದೆ ವಿಚಾರ ಕೇಳಿಬರುತ್ತಿದೆ. 

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!

ಸಂಜೆ ಆರು ಗಂಟೆಯ ಒಳಗೆ ಫೈನಲ್​

ಶಿವಮೊಗ್ಗ ಬಿಜೆಪಿ ಟಿಕೆಟ್ ಯಾರಿಗೆ ಈ ಪ್ರಶ್ನೆ ಸ್ವತಃ ಬಿಜೆಪಿ ಕಚೇರಿಯಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅವರಿಗಂತೆ ಇವರಿಗಂತೆ ಎಂಬ ಸಮಾಲೋಚನೆಗಳು ಜೋರಾಗಿ ನಡೆಯುತ್ತಿದೆ. ಆದರೆ ಇವರಿಗೆ ಫೈನಲ್ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತಾಗುತ್ತಿಲ್ಲ. ಮೊನ್ನೆ ಚನ್ನಬಸಪ್ಪ , ನಿನ್ನೆ ಕೆ.ಇ.ಕಾಂತೇಶ್​ ಇವತ್ತು ಮತ್ತೆ ಕೆ.ಎಸ್​.ಈಶ್ವರಪ್ಪನವರ ಹೆಸರುಗಳು ಬಿಜೆಪಿಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

ಇತ್ತ ಬಿಎಸ್​ ಯಡಿಯೂರಪ್ಪನವರ ಬಣದಲ್ಲಿ ಜ್ಯೋತಿ ಪ್ರಕಾಶ್,Dr. Dhananjaya Sarji A - Pediatrician, Shimoga - Lybrate ಮತ್ತು ದತ್ತಾತ್ರಿಯವರ ಹೆಸರುಗಳು ಓಡಾಡುತ್ತಿದೆ. ಕೆ.ಎಸ್​ . ಈಶ್ವರಪ್ಪನವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದರೂ ಸಹ, ಬದಲಾದ ಬಿಜೆಪಿಯ ರಾಜಕೀಯ ಸನ್ನಿವೇಶದಲ್ಲಿ ಅವರ ನಿರ್ಧಾರವನ್ನು ಹೈಕಮಾಂಡೇ ಬದಲಾಯಿಸಿದರೂ ಅಚ್ಚರಿಯಿಲ್ಲ.

Read / karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ?

ಅಚ್ಚರಿಯ ಕ್ಯಾಂಡಿಡೇಟ್ ಆಯ್ಕೆ!

ಇನ್ನೊಂದೆಡೆ ಶಿವಮೊಗ್ಗ ಬಿಜೆಪಿ ಮುಖಂಡರಿಗೆ ಬಿಜೆಪಿ ಹೈಕಮಾಂಡ್​ ನ ನಿಲುವು ಏನು? ಯಾರನ್ನ ಅಭ್ಯರ್ಥಿಯನ್ನಾಗಿಸುತ್ತೆ ಎಂಬುದು ಸ್ಪಷ್ಟವಾಗಿಲ್ಲ. ಇರುವವರೆನ್ನೆಲ್ಲಾ ಬಿಟ್ಟು ಭವಿಷ್ಯದ ರಾಜಕಾರಣ ಹೀರೋವನ್ನು ಶಿವಮೊಗ್ಗದಿಂದ ಆಯ್ಕೆ ಮಾಡಿಸುತ್ತಾರಾ? ಹೀಗೊಂದು ಅನುಮಾನ ಕೂಡ ಸ್ಥಳೀಯ ಮುಖಂಡರನ್ನು ಕಾಡುತ್ತಿದೆ.

ಚಿಕ್ಕದೊಂದು ಸುಳಿವನ್ನು ಸಹ ಹೈಕಮಾಂಡ್ ಬಿಟ್ಟುಕೊಡುತ್ತಿಲ್ಲ ಎಂಬುದು ಶಿವಮೊಗ್ಗ ಬಿಜೆಪಿ ಮುಖಂಡರಲ್ಲಿ ಅಚ್ಚರಿಯ ಆಯ್ಕೆಯ ಅವಕಾಶದ ಮಂಥನಕ್ಕೆ ದಾರಿಮಾಡಿಕೊಟ್ಟಿದೆ. 

ಶಿವಮೊಗ್ಗ ಬರುತ್ತಾರಾ ಜೆಪಿ ನಡ್ಡಾ!

ಸದ್ಯ  ಲಭ್ಯವಿರುವ ಮೂಲಗಳ ಪ್ರಕಾರ, ಇವತ್ತು ಸಂಜೆಯ ಹೊತ್ತಿಗೆ ಬಿಜೆಪಿಯ ಟಿಕೆಟ್ ಯಾರಿಗೆ ಎನ್ನುವುದು ನಿಕ್ಕಿಯಾಗುವ ಸಾಧ್ಯತೆ ಇದೆ. ಅಲ್ಲದೆ ಹುಬ್ಬಳ್ಳಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾ ಶಿವಮೊಗ್ಗಕ್ಕೂ ಬರುತ್ತಾರೆ ಎಂಬ ಸುದ್ದಿಗಳು ಬಿಜೆಪಿವಲಯದಲ್ಲಿ ಕೇಳಿಬಂದಿತ್ತು. ಆದರೆ ಕೊನೆಕ್ಷಣದಲ್ಲಿ ಈ ಕಾರ್ಯಕ್ರಮ ಕ್ಯಾನ್ಸಲ್​ ಆಗಿದೆ ಎಂಬ ಉತ್ತರ ಲಭ್ಯವಾಗುತ್ತಿದೆ.  

ಆಯನೂರು ಮಂಜುನಾಥ್ ನಡೆ ಯಾರ ಕಡೆ

ಎದುರಾಳಿಗಳನ್ನು ನೋಡಿಕೊಂಡು ಶಿವಮೊಗ್ಗ ನಗರದಲ್ಲಿ ಮುಖ್ಯ ಆಕಾಂಕ್ಷಿಗಳ ಕಣಕ್ಕಿಳಿಯಲು ತಿರ್ಮಾನಿಸಿದ್ದಾರೆ. ಆದರೆ ಎದುರಾಳಿ ಯಾರು ಎಂಬುದೇ ತೀರ್ಮಾನವಾಗುತ್ತಿಲ್ಲ.

ಇದೇ ರೀತಿಯಲ್ಲಿ ಎದುರಾಳಿ ಯಾರು ಎಂದು ಕಾದು ನೋಡುತ್ತಿರುವ ಆಯನೂರು ಮಂಜುನಾಥ್​ ರವರು ಕೂಡ ಇವತ್ತು ಸಂಜೆಯೊಳಗೆ ತಮ್ಮ ತೀರ್ಮಾನ ತಿಳಿಸುವ ಸಾಧ್ಯತೆ ಇದೆ. ಸದ್ಯ ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿರುವ ಅವರು, ತಮ್ಮ ಸ್ಪರ್ಧೆ ಪಕ್ಷೇತರವೇ? ಅಥವಾ ಜೆಡಿಎಸ್​ನಿಂದಲೇ ಎಂಬುದನ್ನ ಫೈನಲ್​ ಮಾಡಬೇಕಿದೆ. 

Read / karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ?

ಕೆಬಿ ಪ್ರಸನ್ನಕುಮಾರ್ ಸ್ಪರ್ಧೆ ಮಾಡುತ್ತಾರಾ? 

ಕಾದು ನೋಡುವ ಕಾರ್ಯದಲ್ಲಿ ಕಾಂಗ್ರೆಸ್​ ಉಳಿದ ಪಕ್ಷಗಳಿಗಿಂತಲೂ ಬೇಗ ತೀರ್ಮಾನ ತೆಗೆದುಕೊಂಡಿದೆ. ಆದರೆ ಹೆಚ್​ಸಿ ಯೋಗೇಶ್​ರನ್ನ ಅಭ್ಯರ್ಥಿಯನ್ನಾಗಿಸಿರುವ ಕಾಂಗ್ರೆಸ್​ನಲ್ಲಿ ಅಸಮಾಧಾನ ಬುಗ್ಗೆ ಟೈಯರ್​ ಬೆಂಕಿಯಾಗಿ ಹೊರಕ್ಕೆ ಬರುತ್ತಿದೆ. ಇದಕ್ಕೆ ಪೂರಕವಾಗಿ ಮಾಜಿ ಎಂಎಲ್​ಎ ಕೆಬಿ ಪ್ರಸನ್ನಕುಮಾರ್ ಕೂಡ  ಅನುಕೂಲಕರ ವಾತಾವರಣ ಸೃಷ್ಟಿಯಾದರೇ ಸ್ಪರ್ಧಿಸುವ ಇರಾದೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತದೆ ಬಲ್ಲ ಮೂಲಗಳ ಪ್ರಕಾರ, ಜೆಡಿಎಸ್​ ನಿಂದ ಅವಕಾಶ ಸಿಕ್ಕರೆ ಕೆಬಿಪಿ ಸ್ಪರ್ಧೆ ಮಾಡುತ್ತಾರೆ. ಇದಕ್ಕಾಗಿ ಚರ್ಚೆಗಳು ನಡೆಯುತ್ತಿವೆ ಎಂಬ ವರದಿಗಳು ಲಭ್ಯವಾಗುತ್ತಿದೆ. 

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

ಜೆಡಿಎಸ್​ನಿಂದ ನಡೆಯುತ್ತಿದೆ ಮಾತುಕಥೆ

ಕಾಂಗ್ರೆಸ್​ ಟಿಕೆಟ್ ಘೋಷಣೆಯಾದ್ದರಿಂದ ಬಿಜೆಪಿ ಬಂಡಾಯ ಹಾಗು ಕಾಂಗ್ರೆಸ್ ಬಂಡಾಯಕ್ಕೆ ಜೆಡಿಎಸ್​ ಒಂದೇ ವೇದಿಕೆ ಎಂಬಂತಾಗಿದೆ. ಅತ್ತ ಆಪ್ ಪಕ್ಷದ ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ್ದು, ಅಲ್ಲಿಯು ವೇದಿಕೆ ಖಾಲಿಯಿಲ್ಲ. ಸದ್ಯ ಜೆಡಿಎಸ್​ನಲ್ಲಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ಅತ್ತ ಕಡೆ ತಮ್ಮ ನಡೆಯನ್ನ ಆಯನೂರು ಮಂಜುನಾಥ್​  ಕೂಡ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!

ಚಿಕ್ಕಮಗಳೂರಿನ ನಾಯಕರೊಬ್ಬರ ಮೂಲಕ ತತ್ಸಂಬಂಧ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಯ ನಡುವೆಯು ಶಿವಮೊಗ್ಗ ನಗರದಲ್ಲಿ  ಇವರುಗಳು ಚುನಾವಣೆ ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಬಿಜೆಪಿ ಟಿಕೆಟ್ ಘೋಷಣೆಯ ಕ್ಷಣಗಣನೆಯಲ್ಲಿ ಇನ್ನೆಷ್ಟು ಅಚ್ಚರಿಗಳು ಸಂಭವಿಸಬಹುದು ಎಂಬುದು ನಿರೀಕ್ಷೆ ಸಿಗದ ಉತ್ತರ. 

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

ಇದನ್ನು ಸಹ ಓದಿ

Read /ಬಿಜೆಪಿ ಪಕ್ಷಾಂತರ/  ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ 

Read /BREAKIN NEWS/  ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!? 

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

Read / BREAKING NEWS /  ಭಾರತೀಯ ಜನತಾ ಪಕ್ಷದ ಮೂರನೇ ಪಟ್ಟಿ ರಿಲೀಸ್​! ಶಿವಮೊಗ್ಗ ನಗರ ಕ್ಷೇತ್ರದ  ಕಥೆ ಇನ್ನಷ್ಟು ನಿಗೂಢ 

Read / karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ? 

Read / ಬಿಜೆಪಿಗೆ ಹೋಗುವುದಕ್ಕೆ ತಂದೆ ಜೊತೆ ಮೊದಲೇ ಮಾತಾಗಿತ್ತಾ!?

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda