ಶಿವಮೊಗ್ಗ: ಚಿತ್ರದುರ್ಗದ 70 ವರ್ಷದ ವೃದ್ದೆಯನ್ನು ಕಂಡು ಪೊಲೀಸರಿಗೆ ಪೋನ್​​ ಮಾಡಿದ ಸ್ಥಳೀಯರು, ಆಮೇಲೆ ಏನಾಯ್ತು ?

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

Shivamogga Police ಶಿವಮೊಗ್ಗ : ನಗರದ ಹೊರವಲಯದ ಗಾಡಿಕೊಪ್ಪ ಗ್ರಾಮದ ಬಳಿಯ ಪುರುದಾಳ್ ರಿಂಗ್ ರಸ್ತೆಯಲ್ಲಿ ಅನಾಥವಾಗಿ ಓಡಾಡುತ್ತಿದ್ದ 70 ವರ್ಷದ ವೃದ್ಧೆಯೊಬ್ಬರನ್ನು ಪತ್ತೆಹಚ್ಚಿದ ತುಂಗಾನಗರ ಪೊಲೀಸ್ ಠಾಣೆಯ 112 ಸಿಬ್ಬಂದಿ, ಅವರ ವಾರಸುದಾರರನ್ನು ಹುಡುಕಿ ಮಗಳಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಶಿವಮೊಗ್ಗ: ನಾಗರಪಂಚಮಿಯಲ್ಲಿ ಈತನಿಗೆ ಹಾಲೆರೆಯಲು ನಮಗೆ ಇಷ್ಟವಿಲ್ಲ: ಎಸ್​ ಎನ್​ ಚನ್ನಬಸಪ್ಪ ಹೀಗಂದಿದ್ಯಾಕೆ? 

ಗಾಡಿಕೊಪ್ಪ ರಿಂಗ್ ರೋಡ್‌ನಲ್ಲಿ ವಯೋವೃದ್ಧೆಯೊಬ್ಬರು ಒಂಟಿಯಾಗಿ ಅಸಹಾಯಕರಾಗಿ ನಿಂತಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಇಆರ್‌ವಿ ಸಿಬ್ಬಂದಿಯಾದ ತುಂಗಾನಗರ ಠಾಣೆಯ ಎಎಸ್‌ಐ ಚಂದ್ರನಾಯ್ಕ ಹಾಗೂ ಎಹೆಚ್‌ಸಿ ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ವಿಚಾರಿಸಿದ್ದಾರೆ. ಈ ವೇಳೆ ವೃದ್ಧೆಯು ತಾನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವಳು ಎಂದು ತಿಳಿಸಿ, ಮಗಳ ಹೆಸರನ್ನು ಮಾತ್ರ ಹೇಳಿದ್ದಾರೆ. ಆದರೆ, ಮಾನಸಿಕ ಗೊಂದಲದಲ್ಲಿದ್ದ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ಅವರಿಂದ ಸಾಧ್ಯವಾಗಲಿಲ್ಲ.

ಕೂಡಲೇ ಅಧಿಕಾರಿಗಳು ವೃದ್ಧೆಯ ಭಾವಚಿತ್ರವನ್ನು ಹೊಳಲ್ಕೆರೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ರವಾನಿಸಿ, ಆಧಾರ ತಪಾಸಣೆ ನಡೆಸುವಂತೆ ಕೋರಿದರು. ಸತತ ಪ್ರಯತ್ನದ ನಂತರ ಹೊಳಲ್ಕೆರೆಯಲ್ಲಿ ವೃದ್ಧೆಯ ಕುಟುಂಬ ಹಾಗೂ ಮಗಳ ವಿಳಾಸ ಪತ್ತೆಯಾಯಿತು. ತಕ್ಷಣವೇ ಇಆರ್‌ವಿ-112 ವಾಹನದಲ್ಲೇ ಮಹಿಳೆಯನ್ನು ಕರೆದೊಯ್ದ ಶಿವಮೊಗ್ಗ ಪೊಲೀಸರು, ಹೊಳಲ್ಕೆರೆಯಲ್ಲಿದ್ದ ಅವರ ಮಗಳ ಬಳಿ ಸುರಕ್ಷಿತವಾಗಿ ತಲುಪಿಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor