ಬಿಜೆಪಿ ಪಕ್ಷಾಂತರ/ ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

Former minister KS Eshwarappa writes open letter

ಬಿಜೆಪಿ ಪಕ್ಷಾಂತರ/  ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಚುನಾವಣಾ ರಾಜಕೀಯ ನಿವೃತ್ತಿಯ ನಂತರ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಇವತ್ತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದು ಬಹಿರಂಗವಾಗಿ ಬರೆದಿರುವ ಎರಡು ಪುಟದ ಪತ್ರವನ್ನು ಮಾಧ್ಯಮಗಳಿಗೆ ನೀಡಿದರು. 

ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ

ಬಿಜೆಪಿಯಲ್ಲಿ ಅಸಮಾಧಾನಗೊಂಡು ಪಕ್ಷಾಂತರಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರಿಗೆ ಈಶ್ವರಪ್ಪನವರು ಪತ್ರ ಬರೆದಿದ್ದು ಪತ್ರದಲ್ಲಿರುವ ವಿವರ ಇಲ್ಲಿದೆ ಓದಿ. 

ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ರವರಿಗೆ ಬಹಿರಂಗ ಪತ್ರ

ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ನನ್ನ ಆತ್ಮೀಯ ನಮಸ್ಕಾರಗಳು, ಸುಮಾರು 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೇಸ್ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ. 

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ ದಿ.ಶಿವಪ್ಪ ಶೆಟ್ಟರು, ಭಾರತೀಯ ಜನತಾ ಪಕ್ಷದ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರದೇ ಪ್ರಭಾವದಲ್ಲಿ ಬೆಳೆದ ತಾವು ಸಹ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು. ಕಾಂಗ್ರೇಸ್ ಪಕ್ಷದ ದೇಶ ವಿರೋಧಿ ಧೋರಣೆಗಳನ್ನು ಸದಾ ಖಂಡಿಸುತ್ತಾ ಬಂದವರು. 

Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರೂಹೇಳಿದ್ದೇನು?

ಭಾರತೀಯ ಜನತಾ ಪಕ್ಷದ ಮೂಲಕ ಅನೇಕ ಬಾರಿ ಶಾಸಕರಾಗಿ  ಚುನಾಯಿತರಾಗಿದ್ದು ಮಾತ್ರವಲ್ಲದೇ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಎತ್ತರಕ್ಕೆ ಬೆಳೆದವರು. ಪ್ರಸಕ್ತ ಸಂಧರ್ಭದಲ್ಲಿ ತಾಯಿಯಂತೆ ಕಾಪಾಡಿದ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಅಸಮಾಧಾನಗೊಂಡಿರುವ ತಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ. 

ಆದರೆ, ಪಕ್ಷವನ್ನು ಬಿಟ್ಟು ನಂಬಿದ ಎಲ್ಲಾ ಆದರ್ಶಗಳನ್ನು ತೊರೆದು ನಮ್ಮ ಪಕ್ಷದ ಚಿಂತನೆಗೆ ವಿರುದ್ಧವಾದ ಕಾಂಗ್ರೇಸ್‌ ಪಕ್ಷಕ್ಕೆ ತಾವು ಸೇರಲು ಬಯಸಿರುವುದು ಮಾತ್ರ ಅತ್ಯಂತ ದುರದೃಷ್ಟಕರ.

ಮುಂದೆ ಒಂದು ದಿನ ತಾವು ಕಾಂಗ್ರೇಸ್ ಪಕ್ಷದಿಂದ ಗೆದ್ದು ಬಂದ ಸಂದರ್ಭದಲ್ಲಿ ಸದನದಲ್ಲಿ ಗೋ ಹತ್ಯೆ ಪರ – ವಿರೋಧದ ಚರ್ಚೆ ನಡೆದರೆ ತಾವು ಗೋ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ? ಉಗ್ರ PFI ಸಂಘಟನೆ ಕುರಿತಾದ ಪರ-ವಿರೋಧದ ಚರ್ಚೆಯಲ್ಲಿ PFI ನಿರ್ಬಂಧ ತೆರವು ಮಾಡಲು ತಾವು ಸಮ್ಮತ್ತಿಸಲು ಸಾಧ್ಯವೇ? ಹುಬ್ಬಳ್ಳಿಯ ಈದ್ಧಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತ ಪಡಿಸಿದ ಕಾಂಗ್ರೇಸ್ ಪಕ್ಷದ ವಿರುದ್ಧ ತಮ್ಮಉಗ್ರ ಹೋರಾಟ ನನಗಿನ್ನೂ ಮನಸ್ಸಿನಲ್ಲಿ ಹಸಿರಾಗಿದೆ. 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವ ರೂ! ನಿಜನಾ

ಈಗ ತಾವು ಅದೇ ಪಕ್ಷವನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ? ನಾವು ನಂಬಿ ಪ್ರತಿಪಾದಿಸುತ್ತಾ ಬಂದಿರುವ ಎಲ್ಲಾ ತತ್ವ, ಆದರ್ಶಗಳ ವಿರುದ್ಧ ಕೆಲಸ ಮಾಡುವ ಕಾಂಗ್ರೇಸ್ ಪಕ್ಷದೊಂದಿಗೆ ಕೆಲಸ ಮಾಡುವುದು ಹೇಗೆ ಸಾಧ್ಯ? ಈ ಕುರಿತು ಒಮ್ಮೆ ಯೋಚಿಸಿ ಎಂದು ಕೋರುತ್ತೇನೆ.

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

ಕೇವಲ ಈ ಬಾರಿಯ ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಪಕ್ಷ ತೊರೆಯುವ ಮಹತ್ವದ ನಿರ್ಧಾರ ಮಾಡುವ ಮುನ್ನ ಪಕ್ಷ ತಮಗೆ ಈ ಹಿಂದೆ ನೀಡಿದ ಸ್ಥಾನಮಾನಗಳ ಕುರಿತು ಒಮ್ಮೆ ಅವಲೋಕಿಸಬೇಕೆಂದು ಕೋರುತ್ತೇನೆ.

ಯಾವುದೇ ವ್ಯಕ್ತಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾದರೆ ಅದು ಆತ ನಂಬಿರುವ ಪಕ್ಷದ ತತ್ವ ಸಿದ್ಧಾಂತಗಳು ಹಾಗು ಪಕ್ಷಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಕಾರ್ಯಕರ್ತರ ಬೆಂಬಲದಿಂದ ಮಾತ್ರ ಎಂಬುದನ್ನು ತಾವು ಮರೆಯಬಾರದು. ತಮ್ಮ ಈ ಪಕ್ಷ ವಿರೋಧಿ ನಿಲುವಿನಿಂದ ಅನೇಕ ಹಿರಿಯ ನಾಯಕರಿಗೆ, ಪಕ್ಷವನ್ನು ಪ್ರೀತಿಸುವ ಅಸಂಖ್ಯಾತ ಕಾರ್ಯಕರ್ತರ ಮನಸ್ಸಿಗೆ ಅಪಾರವಾದ ನೋವಾಗಿದೆ, ದುಡುಕಿನ ನಿರ್ಧಾರ ಮಾಡದೇ ಒಮ್ಮೆ ಈ ಕುರಿತು ಸಮಗ್ರವಾಗಿ ಯೋಚಿಸಿ, ಕಾಲ ಇನ್ನೂ ಮಿಂಚಿಲ್ಲ,

ವಂದನೆಗಳೊಂದಿಗೆ.

 ಕೆ.ಎಸ್​.ಈಶ್ವರಪ್ಪ

ಇದನ್ನು ಸಹ ಓದಿ

Read /Shikaripura/ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!? 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವ ರೂ! ನಿಜನಾ

Read / ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರೂಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ? 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರೂಹೇಳಿದ್ದೇನು?

Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ  ಸ್ವಾರಸ್ಯ!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News   #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda