ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರು ಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಕಾಂಗ್ರೆಸ್ ಮೂರನೇ ಪಟ್ಟಿ ಶಿವಮೊಗ್ಗದಲ್ಲಿ ಆಕ್ರೋಶದ ಬೆಂಕಿಯನ್ನೆ ಸೃಷ್ಟಿಸಿದೆ.  ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಹಾಗು ಶಿಕಾರಿಪುರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಬಂಡಾಯದ ಕಾವು ಜೋರಾಗಿದೆ.

Malenadu Today Shivamogga

ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರು ಹೈಡ್ರಾಮಾ

ಶಿವಮೊಗ್ಗ ನಗರ ಕ್ಷೇತ್ರಕ್ಕೆ ಹೆಚ್ ಸಿ ಯೋಗೇಶ್ ರವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದ್ದಂತೆ. ಟಿಕೆಟ್ ಆಕಂಕ್ಷಿಯಾಗಿದ್ದ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್​ ಸುಂದರೇಶ್ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Malenadu Today Shivamogga

ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಜಿಲ್ಲಾಧ್ಯಕ್ಷರ ಬೆಂಬಲಿಗರು ಕಾಂಗ್ರೆಸ್​ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು, ಅಲ್ಲದೆ, ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು. ಅಲ್ಲದೆ ಕಚೇರಿಗೆ ಸುಂದರೇಶ್ ಬರುತ್ತಲೇ ಅವರ ಕಾರನ್ನ ಸುತ್ತುವರೆದು ಪ್ರತಿಭಟನೆ ನಡೆಸಿದರು.ಇಷ್ಟೆಲ್ಲಾ ಕೆಲಸ ಮಾಡಿದರೂ ಟಿಕೆಟ್ ನೀಡದಿರುವುದಕ್ಕೆ ಆಕ್ರೋಶ ಹೊರಹಾಕಿದರು. ಸುಂದರೇಶ್ ತಮ್ಮ ಅಭಿಮಾನಿಗಳನ್ನು ಸಮಾಧಾನ ಪಡಿಸಲು ಹರಸಾಹಸ ಪಡಬೇಕಾಗಿ ಬಂತು

Malenadu Today Shivamogga

ಕೆ.ಬಿ.ಪ್ರಸನ್ನಕುಮಾರ್ ಮನೆ ಬಳಿ ಅಭಿಮಾನಿಗಳ ಆಕ್ರೋಶ

ಇನ್ನೂ ಅತ್ತ ಟಿಕೆಟ್ ಆಕಾಂಕ್ಷಿ ಯಾಗಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್​ರವರ ಮನೆಯ ಬಳಿ ಜಮಾಯಿಸಿದ ಅಭಿಮಾನಿಗಳು ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ ಹೊರಹಾಕಿದರು. ಟೈಯರ್​ಗೆ ಬೆಂಕಿ ಹಚ್ಚಿ ಕೆ.ಬಿ ಪ್ರಸನ್ನಕುಮಾರ್​ ಕುಮಾರ್​ರವರು ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿದರು. ಒನ್ಸ್​ ಮೋರ್​ ಕೆಬಿಪಿ ಎಂದು ಘೋಷಣೆ ಕೂಗಿದರು. 

Malenadu Today Shivamogga

ಶಿವಮೊಗ್ಗ ಗ್ರಾಮಾಂತರದದಲ್ಲಿ ನಾರಾಯಣ ಸ್ವಾಮಿ ಬಂಡಾಯ

ಅತ್ತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀನಿವಾಸ್ ಕರಿಯಣ್ಣರಿಗೆ ಟಿಕೆಟ್ ನೀಡಿದ ಬೆನ್ನಲ್ಲೆ ಆಕಾಂಕ್ಷಿ ಅಭ್ಯರ್ಥಿಗಳು ಬಂಡಾಯ ಬಾವುಟ ಹಾರಿಸುತ್ತಿದ್ದಾರೆ.. ಟಿಕೆಟ್ ಆಕಾಂಕ್ಷಿಯಾಗಿದ್ದ, ನಾರಾಯಣಸ್ವಾಮಿ   ಗ್ರಾಮಾಂತರ ಕ್ಷೇತ್ರದಲ್ಲಿ  ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿದೆ ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀನಿವಾಸ್‌ ಕರಿಯಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದಿದ್ಧಾರೆ. ಇದೇ ವೇಳೇ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದೇ ಗುರುವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದಿದ್ದಾರೆ. 

Malenadu Today Shivamogga

ರವಿಕುಮಾರ್ ಬಡಾಯ 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ರವಿಕುಮಾರ್ ಹಾಗೂ ಪಲ್ಲವಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೂ ಸಹ ಟಿಕೆಟ್ ಮಿಸ್ ಆಗಿರೋದು ಅಸಮಾಧಾನ ಮೂಡಿಸಿದೆ. ರವಿಕುಮಾರ್​ ಈ ಸಂಬಂಧ ತಮ್ಮ ಸಮುದಾಯದ ಜೊತೆ ಚರ್ಚೆ ನಡೆಸಿದ್ದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಹಿತೈಷಿಗಳ ಸಭೆಯ ನಂತರ ಮುಂದಿನ ತೀರ್ಮಾನ ಕೈಗೊಳ್ಳುವ ಇರಾದೆಯಲ್ಲಿದ್ದಾರೆ. 

ಶಿಕಾರಿಪುರದಲ್ಲಿಯು ಬಂಡಾಯ

ಶಿಕಾರಿಪುರ ಕ್ಷೇತ್ರದಲ್ಲಿ ಗೋಣಿ ಮಹಂತೇಶ್ ಗೆ ಟಿಕೆಟ್ ಸಿಕ್ಕಿರುವುದರಿಂದ ಅಲ್ಲಿ ಆಕಾಂಕ್ಷಿಯಾಗಿದ್ದ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧಿಸಲು ಅಣಿಯಾಗಿದ್ದಾರೆ. ಇಂದು ಬೆಂಬಲಿಗರ ಸಭೆ ಕರೆದಿದ್ದುರ, ನಾಗರಾಜ್ ಗೌಡ ಬಹುತೇಕವಾಗಿ ಚುನಾವಣೆಗೆ ಸ್ಪರ್ದಿಸುವುದು ಖಚಿತವಾಗಿದೆ

.

ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  

Leave a Comment