ಅಮೆಜಾನ್ ಫ್ರೀಡಂ ಸೇಲ್: ಇವಿ ಹಾಗೂ ಪೆಟ್ರೋಲ್ ಬೈಕ್​ಗಳ ಮೇಲೆ ಭಾರಿ ರಿಯಾಯಿತಿ

ಹಂಚಿಕೊಳ್ಳಿ
WhatsApp Facebook X Telegram
Amazon Freedom Sale Discounts on Electric and Petrol Scooters
Amazon Freedom Sale Discounts on Electric and Petrol Scooters

Amazon Freedom Sale / ಮಲೆನಾಡು ಟುಡೆ ಸುದ್ದಿ / ಅಮೆಜಾನ್‌ನ ಫ್ರೀಡಂ ಸೇಲ್ ಈಗಾಗಲೇ ಆರಂಭವಾಗಿದೆ. ಅದರಲ್ಲಿಯು ವಿಶೇಷವಾಗಿ ಬೈಕ್​ಗಳ ಮೇಲೆ ಸ್ಪೆಷಲ್ ಡಿಸ್ಕೌಂಟ್ ನೀಡುತ್ತಿದೆ. ಈ ಬಗ್ಗೆ ಮನಿ ಕಂಟ್ರೋಲ್ ವರದಿ ಮಾಡಿದ್ದು, ವರದಿಯ ಪ್ರಕಾರ, ಚೇತಕ್, ಏಥರ್, ಹೀರೋ ಹಾಗೂ ಇಒಎಕ್ಸ್ ಬ್ರ್ಯಾಂಡ್‌ಗಳಿಂದ ಲಭ್ಯವಿರುವ ಏಳು ಪ್ರಮುಖ ಬೈಕ್​ಗಳ ಮೇಲಿನ ಆಫರ್‌ಗಳು ಗಮನ ಸೆಳೆಯುತ್ತಿವೆ.

ಮೊದಲನೆಯದಾಗಿ, ಬಜಾಜ್ ಆಟೋ ಸಂಸ್ಥೆಯ ಚೇತಕ್ C2501 ಎಲೆಕ್ಟ್ರಿಕ್ ಸ್ಕೂಟರ್ Rs 95,802 ದರದಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ಇದು ಹೈ-ಸ್ಪೀಡ್ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದರ ಜೊತೆಗೆ ಚಾರ್ಜರ್ ಸಹ ಲಭ್ಯವಿದೆ. ಗ್ಲಾಸಿ ಆಕ್ಟಿವ್ ಬ್ಲ್ಯಾಕ್ ಬಣ್ಣದ ಈ ವಾಹನವು 4.4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಎರಡನೆಯದಾಗಿ, ಚೇತಕ್ C3501 ಮಾದರಿಯು ಮೂಲ ಬೆಲೆ Rs 1,57,140 ರಿಂದ ತಗ್ಗಿ Rs 1,52,140 ಕ್ಕೆ ಲಭ್ಯವಿದೆ. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರು 5% ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದು ಬ್ರೂಕ್ಲಿನ್ ಬ್ಲ್ಯಾಕ್ ಬಣ್ಣ ಹಾಗೂ ಚೇತಕ್‌ನ ಪ್ರೀಮಿಯಂ ವೇದಿಕೆಯನ್ನು ಹೊಂದಿದ್ದು ಚಾರ್ಜರ್ ಒಳಗೊಂಡಿದೆ.

ಮೂರನೆಯದಾಗಿ, ಏಥರ್ ಸ್ಟಾಕ್ ಪ್ರೊ ವ್ಯವಸ್ಥೆಯನ್ನು ಹೊಂದಿರುವ ಏಥರ್ ರಿಜ್ಟಾ Z ಮಾದರಿಯು Rs 1,85,595 ಸೇಲ್​ಗಿದೆ. ಪ್ಯಾಂಗಾಂಗ್ ಬ್ಲೂ ಸೂಪರ್ ಮ್ಯಾಟ್ ಬಣ್ಣದ ಈ ಆವೃತ್ತಿಯು 161km ಐಡಿಸಿ ವ್ಯಾಪ್ತಿಯನ್ನು ಒದಗಿಸುವ ಭರವಸೆ ನೀಡಲಿದ್ದು, ಪ್ರಸ್ತುತ ಬುಕಿಂಗ್‌ಗೆ ಮುಕ್ತವಾಗಿದೆ.

ನಾಲ್ಕನೆಯದಾಗಿ, ಹೀರೋ ಮೋಟೋಕಾರ್ಪ್ ಸಂಸ್ಥೆಯ ಪ್ಲೆಷರ್+ 110 VX ಸ್ಕೂಟರ್ Rs 73,701 ದರದಲ್ಲಿ ದೊರೆಯುತ್ತಿದೆ. ಇದು ಎಲೆಕ್ಟ್ರಿಕ್ ಅಲ್ಲ , ಪೆಟ್ರೋಲ್ ಗಾಡಿ 110cc ಪೆಟ್ರೋಲ್ ಎಂಜಿನ್, ಡ್ರಮ್ ಬ್ರೇಕ್ ವ್ಯವಸ್ಥೆ, ಟೀಲ್ ಬ್ಲೂ ಬಣ್ಣ ಹೊಂದಿದೆ.

ಐದನೆಯದಾಗಿ, ಇಒಎಕ್ಸ್ ಒಎಲ್‌ಒ (EOX OLO) ಎಲೆಕ್ಟ್ರಿಕ್ ಸ್ಕೂಟರ್ 50% ರಷ್ಟು ರಿಯಾಯಿತಿಯ ನಂತರ Rs 38,697 ಕ್ಕೆ ಲಭ್ಯವಿದೆ. ಇದು ಲೋ-ಸ್ಪೀಡ್ ಹಾಗೂ ಆರ್‌ಟಿಒ ನೋಂದಣಿ ಅಗತ್ಯವಿಲ್ಲದ ಮಾದರಿಯಾಗಿದ್ದು 45km ನೀಡುತ್ತದೆ. ಇದರಲ್ಲಿ ತೆಗೆಯಬಹುದಾದ ಲಿಥಿಯಂ ಬ್ಯಾಟರಿ ಮತ್ತು ಪೋರ್ಟಬಲ್ ಚಾರ್ಜರ್ ಇವೆ.

ಆರನೆಯದಾಗಿ, ಇಒಎಕ್ಸ್ ಇ2 (EOX E2) ಎಲೆಕ್ಟ್ರಿಕ್ ಸ್ಕೂಟರ್ 50% ರಷ್ಟು ಡಿಸ್ಕೌಂಟ್ ಬಳಿಕ Rs 52,499 ಕ್ಕೆ ದೊರೆಯುತ್ತಿದೆ. ಇದು 60-70km ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯ ಹೊಂದಿದ್ದು, ತೆಗೆಯಬಹುದಾದ ಲಿಥಿಯಂ ಬ್ಯಾಟರಿ ಹಾಗೂ ನೋಂದಣಿ ರಹಿತ ಸೌಲಭ್ಯ ಹೊಂದಿದೆ.

ಏಳನೆಯದಾಗಿ, ಇಒಎಕ್ಸ್ ಡ್ರಿಫ್ಟರ್ (EOX Drifter) ಸ್ಕೂಟರ್ ಮೂಲ ಬೆಲೆಯಿಂದ 50% ರಷ್ಟು ರಿಯಾಯಿತಿ ಪಡೆದು Rs 61,499 ಕ್ಕೆ ಲಭ್ಯವಿದೆ. ಇದು 48V ತೆಗೆಯಬಹುದಾದ ಲಿಥಿಯಂ ಬ್ಯಾಟರಿ, 50-70km ವ್ಯಾಪ್ತಿ ಹಾಗೂ 180kg ತೂಕ ಹೊರಬಲ್ಲ ಸಾಮರ್ಥ್ಯ ಹೊಂದಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor