karnataka election 2023 / ಸಿಟಿ ಮಾಲ್​ನಲ್ಲಿ ಮತ ಜಾಗೃತಿ/ ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ

Karnataka Election 2023 / Vote Awareness at City Mall / Separate Treatment Room for Gender Minorities in Meggan/ Appointment of Election Observers

karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ
karnataka election 2023 / ಸಿಟಿ ಮಾಲ್​ನಲ್ಲಿ ಮತ ಜಾಗೃತಿ/ ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ-2023 

ರಾಜಕೀಯ ಪಕ್ಷಗಳು ಮತಪ್ರಚಾರದಲ್ಲಿ ತೊಡಗಿದರೆ, ಅಧಿಕಾರಿ ವರ್ಗ, ಮತದಾನದ ಜಾಗೃತಿಯಲ್ಲಿ ವ್ಯಾಪಕ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ,  ಶಿವಮೊಗ್ಗನಗರದ ಎರಡು ಪ್ರಮುಖ ಸ್ಥಳಗಳಲ್ಲಿ ನಿನ್ನೆ ಶಿವಮೊಗ್ಗ ಮಹಾನಗರ ಪಾಲಿಕೆಯ (Shivamogga city corporation)ಸ್ವೀಪ್ ಸಮಿತಿಯ ವತಿಯಿಂದ ಮತ ಜಾಗೃತಿ ನಡೆಯಿತು.

ಕುವೆಂಪು ರಂಗಮಂದಿರದಲ್ಲಿ ಜಾಗೃತಿ

ಕುವೆಂಪು ರಂಗ ಮಂದಿರದಲ್ಲಿ  ನಿನ್ನೆ  ಬೆಳಿಗ್ಗೆ ಮತ ಜಾಗೃತಿ ಮೂಡಿಸಲಾಯಿತು. ನಂತರ ಪ್ರತಿಜ್ಞಾವಿಧಿ‌ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ  ಪಾಲಿಕೆಯ ಸ್ವೀಪ್ ಸಮಿತಿಯ ಅನುಪಮ, ರತ್ನಾಕರ್,  ರೇಣು ಮತ್ತು ಸಿಬ್ಬಂದಿಗಳು ಮುಂತಾದವರಿದ್ದರು. 

ಸಿಟಿ ಸೆಂಟರ್ ಮಾಲ್ ನಲ್ಲಿ ಜಾಗೃತಿ ಕ್ಯಾಂಪೇನ್​

ಇನ್ನು ಇತ್ತ ಶಿವಮೊಗ್ಗ ಸಿಟಿಯಲ್ಲಿರುವ ಸಿಟಿ ಸೆಂಟರ್ ಮಾಲ್ (city centre mall shivamogga ) ನಲ್ಲಿ ಮತದಾನ ಜಾಗೃತಿಯನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕರ್ತರು, ಡ್ಯಾನ್ಸ್ ಮಾಡುತ್ತಾ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು ಸ್ಟೈಲ್ ಡ್ಯಾನ್ಸ್ ಕ್ರೌವ್ ನೃತ್ಯ ತಂಡ ಡ್ಯಾನ್ಸ್​ ಕಾರ್ಯಕ್ರಮ ನಡೆಸಿದರೆ,  ಲಹರಿ ಸ್ವಸಹಾಯ ಸಂಘದ ಮಹಿಳೆಯರು ಡೊಳ್ಳು ಬಾರಿಸಿ ಜಾಗೃತಿ ಮೂಡಿಸಿದರು.  

ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ಅನುಪಮ ಸುಪ್ರಿಯಾ ಲೋಕೇಶಪ್ಪ ರತ್ನಾಕರ್ ಗೀತಾ ರೇಣು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ವಿಧಾನ ಸಭಾ ಚುನಾವಣೆ 2023/ ಚುನಾವಣಾ ವೆಚ್ಚ ವೀಕ್ಷಕರ ನೇಮಕ

ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶಿವಮೊಗ್ಗ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಿಗೆ ಈ ಕೆಳಗಿನಂತೆ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ.

ವೆಚ್ಚ ವೀಕ್ಷಕರು & ಸಂಪರ್ಕ ಸಂಖ್ಯೆ 

ಶಿವಮೊಗ್ಗ ಗ್ರಾಮಾಂತರ-111 ಮತ್ತು ಭದ್ರಾವತಿ-112 ಗೆ ಪೃಥ್ವಿಪಾಲ್ ಸಿಂಗ್ ಕಾನಾವತ್ ಮೊ.ಸಂ: 9971107165, 8197699587. ಶಿವಮೊಗ್ಗ-113 ಅಮಿತಾಬ್ ಸಾಹ್ ಮೊ.ಸಂ: 9013851480, 7676668713. ತೀರ್ಥಹಳ್ಳಿ-114 ರಮಾಕಾಂತ್ ಪ್ರಧಾನ್ ಮೊ.ಸಂ: 9438917438, 8197699324. ಶಿಕಾರಿಪುರ-115 ಭವಾನಿ ಶಂಕರ್ ಮೀನಾ ಮೊ.ಸಂ: 9051158999, 8197699742. ಸೊರಬ-116 ಮತ್ತು ಸಾಗರ-117 ನಿಧಿ ನಾಯರ್ ಮೊ.ಸಂ: 9910134435, 8197699727 ಆಗಿರುತ್ತದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ

ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೂತನವಾಗಿ ತೆರೆಯಲಾಗಿರುವ ಪ್ರತ್ಯೇಕ ಚಿಕಿತ್ಸಾ ಕೊಠಡಿಯನ್ನು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಬಿ.ವೀರಪ್ಪ ಅವರು ಇಂದು ಉದ್ಘಾಟಿಸಿದರು.

ಈ ವೇಳೆ ಅವರು ಮಾತನಾಡಿ, ನಾನು ಬೇರೆಡೆ ಲಿಂಗತ್ವ ಅಲ್ಪಸಂಖ್ಯಾತರಿಗೆಂದೇ ಪ್ರತ್ಯೇಕವಾದ ಚಿಕಿತ್ಸಾ ಮತ್ತು ತಪಾಸಣಾ ಕೊಠಡಿ ನೋಡಿಲ್ಲ. ಇದೇ ಮೊದಲ ಈ ರೀತಿಯ ಕೇಂದ್ರವಾಗಿದ್ದು ಲಿಂಗತ್ವ ಅಲ್ಪಸಂಖ್ಯಾತರು ಇದರ ಬಳಕೆ ಮಾಡಿಕೊಳ್ಳಬೇಕು. ವೈದ್ಯರೂ ಸಹ ಮುತುವರ್ಜಿ ಮತ್ತು ಕಾಳಜಿಯಿಂದ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

ಇದೇ ವೇಳೆ ಆಸ್ಪತ್ರೆಯ ಎಂಐಸಿಯು ಸೇರಿದಂತೆ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಸಮಾಲೋಚಿಸಿದರು. ರೋಗಿಗಳ ಸೂಕ್ತ ಕಾಳಜಿ ವಹಿಸುವಂತೆ ವೈದ್ಯರು/ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ,  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಇತರೆ ವೈದ್ಯರು, ಅಧಿಕಾರಿಗಳು ಇದ್ದರು.

ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News