karnatakaelection/ ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ?

Karnatakaelection/ Do you know who filed the nomination today in Shimoga?

karnatakaelection/  ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ?
karnatakaelection/ ಶಿವಮೊಗ್ಗದಲ್ಲಿ ಇವತ್ತು ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ! ಜನಸಾಗರ ಶಾಕ್ ಕೊಟ್ಟಿದ್ದು ಯಾರಿಗೆ?

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಶಿವಮೊಗ್ಗ ಜಿಲ್ಲೆಯ ಏಳು ವಿದಾನಸಭಾ ಕ್ಷೇತ್ರಗಳಲ್ಲೂ ಚುನಾವಣೆ ರಂಗುಪಡೆದುಕೊಂಡಿದೆ. ಪಕ್ಷದಿಂದ ಟಿಕೇಟ್ ಪಡೆದ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ಸಡಗರ ಸಂಭ್ರಮದಿಂದ ಚುನಾವಣೆ ಕಛೇರಿಗೆ ಆಗಮಿಸುತ್ತಿದ್ದಾರೆ.  ಇಂದು ಘಟಾನುಘಟಿ ಅಭ್ಯರ್ಥಿಗಳೇ ನಾಮಪತ್ರ ಸಲ್ಲಿಸಿದ್ದಾರೆ. 

ಸೊರಬದಲ್ಲಿ ಸಹೋದರರ ಶಕ್ತಿ ಪ್ರದರ್ಶನ

ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ರಂಗು ಇವತ್ತು ವಿಶೇಷ ಕಳೆಯನ್ನು ಪಡೆದುಕೊಂಡಿತು.ನಾಮಪತ್ರ ಸಲ್ಲಿಕೆಯ ಭರಾಟೆ ಜಿಲ್ಲೆಯಲ್ಲಿ ಜೋರಾಗಿದ್ದು, ಸೊರಬ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಮಧು ಬಂಗಾರಪ್ಪ ಮತ್ತು ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಇಂದು ನಾಮಪತ್ರ ಸಲ್ಲಿಸಿದರು.,ಸಹೋದರರು ಇಬ್ಬರು ಬದಲಾದ ಸಮಯದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. 

ನಂತರ ಮೆರವಣಿಗೆ ಮೂಲಕ ಚುನಾವಣಾ ಕಛೇರಿ ಬಂದು ಉಮೇದುವಾರಿಕೆ ಸಲ್ಲಿಸಿದರು. ಕುಮಾರ್ ಬಂಗಾರಪ್ಪ ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದು, ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ಹಾಡುಗಳಿಗೆ ಕಾರ್ಯಕರ್ತರು ಸ್ಟೆಪ್ ಹಾಕಿದ್ರು. ನಂತರ ತಾಲೂಕು ಕಛೇರಿಯಲ್ಲಿ ಕುಮಾರ್ ಬಂಗಾರಪ್ಪ ನಾಮಪತ್ರ ಸಲ್ಲಿಸಿದರು. ಮಧು ಬಂಗಾರಪ್ಪರ ಮೆರವಣಿಗೆಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಟಗರ್ ಬಂತು ಟಗರು ಹಾಡಿಗೆ ಕಾರ್ಯಕರ್ತರು ಹೆಜ್ಜೆ ಹಾಕಿದ್ರು. ಮಧು ಬಂಗಾರಪ್ಪರಿಗೆ ಸಹೋದರಿ ಗೀತಾ ಶಿವರಾಜ್ ಕುಮಾರ್, ಸುಜಾತ ರವರು ಸಾಥ್ ನೀಡಿದ್ರು. ಮೆರವಣಿಗೆಯಲ್ಲಿ ಸಾಗಿಬಂದ ನಂತರ ಮದು ಬಂಗಾರಪ್ಪ ನಾಮಪತ್ರ ಸಲ್ಲಿಸಿದರು. ಸೊರಬದಲ್ಲಿ ಸಹೋದರರ ಶಕ್ತಿ ಪ್ರದರ್ಶನಕ್ಕೆ ಕಾರ್ಯಕರ್ತರೇ ಸಾಕ್ಷಿಯಾಗಿದ್ರು.

ಅಚ್ಚರಿ ಬೆಳವಣಿಗೆಯಲ್ಲಿ ನಾಮಪತ್ರ ಸಲ್ಲಿಸಿದ ಬಿ.ವೈ ವಿಜಯೇಂದ್ರ

ಇನ್ನು ಏಪ್ರಿಲ್ 19 ರಂದು ನಾಮಪತ್ರ ಸಲ್ಲಿಸಲು ಅಣಿಯಾಗಿದ್ದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ತಮ್ಮ ಕುಟುಂಬದ ಸದಸ್ಯರೊಂದಿಗೆ ತಾಲೂಕು ಕಛೇರಿಗೆ ಆಗಮಿಸಿದ ವಿಜಯೇಂದ್ರ ನಾಮಪತ್ರ ಸಲ್ಲಿಸಿದರು. ಇಂದು ಮಹೂರ್ತ ಒಳ್ಳೆಯದಿದ್ದ ಕಾರಣಕ್ಕೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ರು.19 ರಂದು ಬೆಳಿಗ್ಗೆ 9 ಗಂಟೆಗೆ ಹುಚ್ಚರಾಯ ಸ್ವಾಮಿದೇವಸ್ಥಾನದಿಂದ ಮೆವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು ತಂದೆ ಬಿ.ಎಸ್ ಯಡಿಯೂರಪ್ಪನವರು ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಗುಲ್ಬರ್ಗ ಸಂಸದ ಜಾದವ್, ಶಿವಮೊಗ್ಗ ಸಂಸದ ಬಿ.ವೈರಾಘವೇಂದ್ರ ರುದ್ರೆಗೌಡರು ಕೆ.ಎಸ್ ಈಶ್ವರಪ್ಪನವರು ಸೇರಿದಂತೆ ನೇಕ ಮುಖಂಡರು ಆಗಮಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದ್ರು.

ಸಾಗರದಲ್ಲಿ ಬೇಳೂರು ನಾಮಪತ್ರ ಸಲ್ಲಿಕೆ

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಬೇಳೂರು ಗೋಪಾಲಕೃಷ್ಣ ಇಂದು ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಲ್ಲಿಕಾರ್ಜುನ ಹಕ್ರೆ, ಕಲಗೋಡು ರತ್ನಾಕರ್  ಉಪಸ್ಥಿತರಿದ್ದರು.

ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ್ರು ನೀಡಿದ್ರು ಠಕ್ಕರ್

ಇನ್ನು ಶಿಕಾರಿಪುರ ಕ್ಷೇತ್ರದ ಕಾಂಗ್ರೇಸ್ ಪ್ರಭಲ ಟಿಕೇಟ್ ಆಕಾಂಕ್ಷಿಯಾಗಿದ್ದ, ನಾಗರಾಜ್ ಗೌಡ ಇಂದು ನಾಮಪತ್ರ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿ ಬಳಗ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಕಾಂಗ್ರೇಸ್ ನ ಮುಖಂಡರುಗಳು ಕೂಡ ನಾಗರಾಜ್ ಗೌಡರಿಗೆ ಸಾಥ್ ನೀಡಿದ್ದು ಅಚ್ಚರಿಯ ಬೆಳವಣಿಗೆಯಾಗಿತ್ತು. ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೇಸ್ ಗೆ ಠಕ್ಕರ್ ನೀಡಿದೆ.

ಎಲ್ಲಾ ನಾಮಪತ್ರ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.ತೀರ್ಥಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜರಾಂ ಇಂದು ನಾಮಪತ್ರ ಸಲ್ಲಿಸಿದರು,.ಶಿವಮೊಗ್ಗ ನಗರದಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ನೇತ್ರಾವತಿ ನಾಮಪತ್ರ ಸಲ್ಲಿಸಿದರು, ನಾಳೆ ನಾಮಪತ್ರ ಸಲ್ಲಿಕೆಯ ಭರಾಟೆ ಇನ್ನು ಜೋರಾಗಿ ನಡೆಯಲಿದೆ.ತೀರ್ಥಹಳ್ಳಿಯಲ್ಲಿ ಆರಗಾ ಜ್ಞಾನೇಂದ್ರ ಭದ್ರಾವತಿಯಲ್ಲಿ ಶಾರದ ಅಪ್ಪಾಜಿಗೌಡ, ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನು ಸಹ ಓದಿ

Read /Shikaripura/ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!? 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವ ರೂ! ನಿಜನಾ

Read / ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರೂಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ? 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರೂಹೇಳಿದ್ದೇನು?

Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ  ಸ್ವಾರಸ್ಯ!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  

#karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda