soraba election/ ಸೊರಬದಲ್ಲಿ ಬಿಜೆಪಿ -ನಮೋ ವೇದಿಕೆ ಫೈಟ್? ಸಂಧಾನನಾ? ಸ್ಪರ್ಧೆನಾ? ಅಭ್ಯರ್ಥಿಯಾರು?

Soraba election/ BJP-Namo vedike fight in Soraba?Will NaMo candidate contest against Kumar Bangarappa?/ shivamogga live updates news/ malnad news

soraba election/  ಸೊರಬದಲ್ಲಿ ಬಿಜೆಪಿ -ನಮೋ ವೇದಿಕೆ ಫೈಟ್? ಸಂಧಾನನಾ? ಸ್ಪರ್ಧೆನಾ? ಅಭ್ಯರ್ಥಿಯಾರು?
soraba election/ ಸೊರಬದಲ್ಲಿ ಬಿಜೆಪಿ -ನಮೋ ವೇದಿಕೆ ಫೈಟ್? ಸಂಧಾನನಾ? ಸ್ಪರ್ಧೆನಾ? ಅಭ್ಯರ್ಥಿಯಾರು?

MALENADUTODAY.COM/ SHIVAMOGGA / KARNATAKA WEB NEWS  

ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳು ಈ ಸಲ ತನ್ನದೇ ಕಾರಣಕ್ಕೆ ವಿಶೇಷ ಮತ್ತು ಕುತೂಹಲ ಮೂಡಿಸಿವೆ. ಶಿವಮೊಗ್ಗ ನಗರ ಕ್ಷೇತ್ರ (shivamogga city constituency) ಅಭ್ಯರ್ಥಿಗಳು ಯಾರು ಎನ್ನುವುದಕ್ಕೆ ರಾಜ್ಯದ ಗಮನ ಸೆಳೆದರೆ, ಸಾಗರ ಕ್ಷೇತ್ರ ಕಾಗೋಡು ತಿಮ್ಮಪ್ಪರ ಪುತ್ರಿಯ ಬಂಡಾಯದ ವಿಚಾರಕ್ಕೆ ಸುದ್ದಿಯಾಗಿದೆ. ತೀರ್ಥಹಳ್ಳಿಯ ಒಳಜಗಳ ಇದೀಗ ಕ್ಲೈಮ್ಯಾಕ್ಸ್​ ಕಂಡಿದೆ. ಶಿವಮೊಗ್ಗ ಗ್ರಾಮಾಂತರ ಹೊಸ ಅಚ್ಚರಿಗೆ ಕಾಯುತ್ತಿದೆ. ಅತ್ತ ಭದ್ರಾವತಿ ಸಾಮಾನ್ಯ ಕಾರ್ಯಕರ್ತನ ಎಂಟ್ರಿ ಕಂಡಿದ್ದರೆ ಶಿಕಾರಿಪುರ ಕ್ಷೇತ್ರ ಬಿವೈ ವಿಜಯೇಂದ್ರರಿಂದ(by vijayendra) ರಂಗು ಪಡೆದಿದೆ. 

ಸೊರಬದಲ್ಲಿ ನಮೋ ಅಚ್ಚರಿ

ಹೌದು, ಸದ್ಯ ಸೊರಬ ಕ್ಷೇತ್ರವೇ ವಿಶೇಷ ಕುತೂಹಲ ಕೆರಳಿಸುತ್ತಿದೆ. ಇದಕ್ಕೆ ಕಾರಣ ಇಲ್ಲಿ ಬಿಜೆಪಿ ಮತ್ತು ನಮೋ ಅಭಿಮಾನಿಗಳ ನಡುವೆ ಪೈಪೋಟಿ ಬಿದ್ದಿದೆ. ಅಷ್ಟೆಅಲ್ಲದೆ, ತಮ್ಮ ವಿರೋಧದ ನಡುವೆಯು ಬಿಜೆಪಿ ಟಿಕೆಟ್ ಕುಮಾರ್ ಬಂಗಾರಪ್ಪರಿಗೆ ನೀಡಿದ್ದನ್ನ ನಮೋ ವೇದಿಕೆಗೆ ಸಹಿಸಲಾಗುತ್ತಿಲ್ಲ. 

ನಮೋ ವೇದಿಕೆ ಎಂಬ ಮೂಲ ಬಿಜೆಪಿಗರು ಹಾಗೂ ಹಾಲಿ ಶಾಸಕ ಕುಮಾರ್ ಬಂಗಾರಪ್ಪರ ವಿರೋಧಿಗಳು ಮತ್ತು ಅವರಿಂದ ಅಸಮಾಧಾನಕ್ಕೊಳಗಾದವರ ತಂಡ, ಬಂಗಾರಪ್ಪರ ಹಿರಿಮಗನ ವಿರುದ್ಧ ಬಹಿರಂಗ ಸಮರವೇ ಸಾರಿತ್ತು. ಶಕ್ತಿಪ್ರದರ್ಶನ ಮಾಡಿ ತಮ್ಮ ವಿಚಾರ ಎಷ್ಟು ಗಂಭೀರ ಎಂಬುದನ್ನ ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿತ್ತು. 

ಹಾಗಿದ್ದೂ ಬಿಜೆಪಿ ಹೈಕಮಾಂಡ್ ನಮೋ ಹೆಸರಿನ ವೇದಿಕೆಗೆ ಕಿಮ್ಮತ್ತು ನೀಡದೇ ಕುಮಾರ್ ಬಂಗಾರಪ್ಪರಿಗೆ ಟಿಕೆಟ್ ಕೊಟ್ಟಿದೆ. ಅತ್ತ ಸಾಗರ ಶಾಸಕ ಹರತಾಳು ಹಾಲಪ್ಪ ರಿಗೂ ಇದೇ ನಮೋ ವೇದಿಕೆ ವಿರೋಧ ವ್ಯಕ್ತಪಡಿಸಿದ್ದರೂ ಸಹ ಸೊರಬದಲ್ಲಿ ಕಾಣುವಷ್ಟರ ಮಟ್ಟಿಗೆ ಅಸಮಾಧಾನ ಸಾಗರದಲ್ಲಿ ತೋರುತ್ತಿಲ್ಲ. 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

ಸೊರಬದಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದರೂ ತಮ್ಮದೆ ಒಂದು ಬಣವನ್ನು ಕಟ್ಟಿಕೊಂಡು ಅವರಿಗೆ ಕಿಮ್ಮತ್ತು ನೀಡುತ್ತಿದ್ದಾರೆ ಎಂಬುದು ಒಂದು ಕಡೆಯ ಆರೋಪವಾದರೆ, ಕೆಲಸ ಮಾಡಲು ಹಾಗೂ ಪಕ್ಷ ಗೆಲ್ಲಿಸಲು ನಾವು ಬೇಕು. ಆದರೆ ಅಧಿಕಾರ ನಡೆಸಲು ಮೂಲ ಬಿಜೆಪಿಗರು ಬೇಕೆ ಎಂಬುದು ಮತ್ತೊಂದು ಕಡೆ ನಿಲುವು. ಈ ವಿಭಿನ್ನ ಮನಸ್ಥಿತಿಯಿಂದಲೇ ಸೊರಬ ಬಿಜೆಪಿ ಎರಡು ಭಾಗವಾಗಿದೆ. 

ಸದ್ಯ ಟಿಕೆಟ್ ಪಡೆದು ಕುಮಾರ್ ಬಂಗಾರಪ್ಪನವರ ಕೈ ತುಸು ಮೇಲಾಗಿದೆಯಾದರೂ, ಪ್ರತಿದಿಕ್ಕಿನಲ್ಲಿ ಆಕ್ರೋಶವೂ ಅಷ್ಟೆ ತೀವ್ರಗೊಂಡಿದೆ. 

Read / ಎಕ್ಮೋ ಸಪೋರ್ಟ್​ನೊಂದಿಗೆ ಡಾ.ವಿನಯ್​ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ  

ಇದಕ್ಕೆ ಸಾಕ್ಷಿ ಎಂಬಂತೆ ಸುದ್ದಿಗೋಷ್ಟಿ ನಡೆಸಿದ ನಮೋ ವೇದಿಕೆ ಸದಸ್ಯರು ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಘೋಷಿಸಿದೆ. ಕ್ಷೇತ್ರದಲ್ಲಿ ಯಾವುದೇ ಪಕ್ಷದೊಂದಿಗೆ ರಾಜೀ ಇಲ್ಲದೇ ಸ್ಪರ್ಧೆಗೆ ಸಿದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ನಮೋ ವೇದಿಕೆಯು ತಗೆದುಕೊಂಡ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ಇನ್ನೆರಡು ದಿನದಲ್ಲಿ ಒಮ್ಮತಾಭಿಪ್ರಾಯದೊಂದಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಘೋಷಿಸಿದ್ದಾರೆ..

ಹೆಚ್​.ಎಸ್​ ಮಂಜಪ್ಪ ಗೈರು

ಈ ಮಧ್ಯೆ ನಮೋ ವೇದಿಕೆಯ ಸುದ್ದಿಗೋಷ್ಟಿಯಲ್ಲಿ ಅದರ ಸ್ಥಾಪನೆಗೆ ಕಾರಣವಾದ ಹೆಚ್​.ಎಸ್​. ಮಂಜಪ್ಪನವರು ಗೈರಾಗಿದ್ದಾರು. ಅಲ್ಲದೆ ಇವರನ್ನ ಸಮಾಧಾನ ಪಡಿಸುವ ಪ್ರಯತ್ನಕ್ಕೆ ಕುಮಾರ್​ ಬಂಗಾರಪ್ಪನವರು ಮುಂದಾಗಿದ್ದು, ಆ ನಿಟ್ಟಿನಲ್ಲಿ ಹಿರಿಯರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರ ಪ್ರತಿಫಲವಾಗಿಯೇ ನಮೋ ವೇದಿಕೆ ಸುದ್ದಿಗೋಷ್ಟಿಯಲ್ಲಿ ಮಂಜಪ್ಪನವರು ಕಾಣಿಸಿಕೊಳ್ಳಲಿಲ್ಲ ಎಂಬ ಮಾತುಗಳಿವೆ.

ಡಾ.ಹೆಚ್​.ಇ.ಜ್ಞಾನೇಶ್​ಗೆ ಟಿಕೆಟ್ ಕೊಡಿಸುವ ಪ್ರಯತ್ನ  ಮೂಲ ಬಿಜೆಪಿಯಲ್ಲಿ ನಡೆದಿತ್ತು. ಅಲ್ಲದೆ ಬಿಜೆಪಿ ಸಂಘಪರಿವಾರದ ಮಾತುಕತೆಗಳಲ್ಲಿ ಡಾಕ್ಟರ್ ಹೆಸರು ಓಡಾಡಿತ್ತು. ಆದರೆ ಅಂತಿಮವಾಗಿ ಕುಮಾರ್ ಬಂಗಾರಪ್ಪ ಟಿಕೆಟ್ ಪಡೆದಿದ್ದಾರೆ. ಇದು ಮೂಲ ಬಿಜೆಪಿಗರಿಗೆ ಇಷ್ಟವಾದಂತಿಲ್ಲ. ಪರಿಣಾಮ ಎಂಬಂತೆ ನಮೋ ವೇದಿಕೆ ಅಭ್ಯರ್ಥಿ ಹಾಕಿಯೇ ಸಿದ್ಧವೆನ್ನುತ್ತಿದೆ. ಇದೇ ವೇಳೆ ಭಿನ್ನಮತ ಶಮನಕ್ಕೂ ಪ್ರಯತ್ನ ನಡೆಯುತ್ತಿದೆ. 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ?

ಮೂಲಗಳ ಪ್ರಕಾರ, ಇದೇ ಮಂಗಳವಾರ ನಮೋ ವೇದಿಕೆಯಿಂದ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಯಾವುದೇ ಒಳಮಾತುಕತೆಗಳು ಯಶಸ್ವಿಯಾಗದಿದ್ದರೇ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಖಚಿತಗೊಳ್ಳಲಿದೆ. ಸಂಭಾವ್ಯ ಅಭ್ಯರ್ಥಿಗಳು ಯಾರು ಎಂದು ನೋಡುವುದಾದರೆ, ಪಾಣಿ ರಾಜಪ್ಪ, ರಾಜು ತಲ್ಲೂರು, ದಿನಕರ್​ ಬಾವೆ ಹಾಗೂ ಅಂತಿಮವಾಗಿ ಡಾ.ಜ್ಞಾನೇಶ್​ರ ಹೆಸರು ಸಹ ಕೇಳಿಬರುತ್ತಿದೆ. ಆದರೆ ಈ ಪೈಕಿ ನಮೋವೇದಿಕೆ ಯಾರನ್ನ ಚುನಾಯಿಸಿ ಕಣಕ್ಕಿಳಿಸುತ್ತದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

ಸಹೋದರರ ಸವಾಲ್

ಇನ್ನೂ ಅಂದಾಜು 70 ಸಾವಿರದಷ್ಟು ಈಡಿಗ ಮತಗಳು, ಅಂದಾಜು 40 ಸಾವಿರದಷ್ಟು ಲಿಂಗಾಯತ ಮತಗಳು ಹಾಗೂ ಅಂದಾಜು 20 ಸಾವಿರದಷ್ಟು ಎಸ್​ಸಿ ಹಾಗೂ ಮುಸ್ಲಿಮ್​ ಮತಗಳಿರುವ ಸೊರಬದಲ್ಲಿ ಬಂಗಾರಪ್ಪನವರ ಇಬ್ಬರ ಪುತ್ರರ ನಡುವೆ ಒಲವು ಯಾರ ಕಡೆ ಇದೆ ಎಂಬುದರ ಮೇಲೆ ಚುನಾವಣೆ ನಿರ್ಧರಿತವಾಗಲಿದೆ. ಮೂರನೇ ಪ್ರಬಲ ಅಭ್ಯರ್ಥಿಯು ಸಹ ಇಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜೆಡಿಎಸ್​ ಬಾಸೂರು ಚಂದ್ರೆಗೌಡರನ್ನ ಕಣಕ್ಕಿಳಿಸಿದೆ. ಇನ್ನೊಂದೆಡೆ ನಮೋ ವೇದಿಕೆಯಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ,  ಪೈಪೋಟಿ ಕೂಡ ಬಿರುಸಲಾಗಲಿದೆ. 

ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News