ಸಾಗರ | ಮರ ಕತ್ತರಿಸುವಾಗ ಕೊಂಬೆಗೆ ಕಟ್ಟಿದ್ದ ಹಗ್ಗ ಕಟ್‌ | ತಲೆ ಮೇಲೆ ಹರೆ ಬಿದ್ದು ಸಾವು

A man named Ashok died in a tragic accident in Talavata village, Sagar taluk, Shivamogga district. 

ಸಾಗರ | ಮರ ಕತ್ತರಿಸುವಾಗ ಕೊಂಬೆಗೆ ಕಟ್ಟಿದ್ದ ಹಗ್ಗ ಕಟ್‌ | ತಲೆ ಮೇಲೆ ಹರೆ ಬಿದ್ದು ಸಾವು
Talavata village, Sagar taluk, Shivamogga district

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ 

ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ ತಲವಾಟ ಗ್ರಾಮದಲ್ಲಿ ಸಂಭವಿಸಿದೆ. ಮೃತರು ಹಿರೇಮನೆ ಗ್ರಾಮದ ಅಶೋಕ (58) ಎಂಬವರು.  

ಸಾಗರ ಸುದ್ದಿ

ಇವರ ನಿವಾಸದ ಹಿತ್ತಲಲ್ಲಿ ದೊಡ್ಡ ಮರವೊಂದು ಇತ್ತು. ಅದರ ಹರೆ ಕತ್ತರಿಸುವ ಕೆಲಸಕ್ಕೆ ಅಶೋಕ್‌ ಮುಂದಾಗಿದ್ದರು.  ಕೆಲಸಗಾರರು ಮರದ ಕೊಂಬೆಯೊಂದನ್ನ ಕತ್ತರಿಸುತ್ತಿದ್ದರು, ಅದು ಇನ್ನೊಂದು ಬದಿಗೆ ಬೀಳಲಿ ಎಂದು ಹಗ್ಗ ಕಟ್ಟಲಾಗಿತ್ತು. ಆದರೆ ಕತ್ತರಿಸುವ ಸಂದರ್ಭದಲ್ಲಿ ಹಗ್ಗ ತುಂಡಾಗಿ ಕೊಂಬೆ ಅಶೋಕ್‌ರವರ ತೆಲೆ ಮೇಲೆ ಬಿದ್ದಿದೆ.  ಪರಿಣಾಮ ಅಶೋಕ್‌  ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಮಾರ್ಗ ಮಧ್ಯೆದಲ್ಲಿ ಅಶೋಕ್‌ ಸಾವನ್ನಪ್ಪಿದ್ದಾರೆ.  A man named Ashok died in a tragic accident in Talavata village, Sagar taluk, Shivamogga district.