ಮೈಸೂರು-ತಾಳಗುಪ್ಪ ಟ್ರೈನ್‌ ಡಿಕ್ಕಿಯಾಗಿ ಹಿರಿಯ ವಯಸ್ಸಿನ ವ್ಯಕ್ತಿ ಸಾವು

man died in a train accident near Madhavi Talkies railway station in Shivamogga.

ಮೈಸೂರು-ತಾಳಗುಪ್ಪ ಟ್ರೈನ್‌ ಡಿಕ್ಕಿಯಾಗಿ ಹಿರಿಯ ವಯಸ್ಸಿನ ವ್ಯಕ್ತಿ ಸಾವು
Madhavi Talkies railway station in Shivamogga

SHIVAMOGGA | MALENADUTODAY NEWS | Jun 2, 2024  ಮಲೆನಾಡು ಟುಡೆʼ

ಶಿವಮೊಗ್ಗದ ಮಾದವೀ ಟಾಕೀಸ್‌ ಬಳಿ ರೈಲ್ವೆ ನಿಲ್ದಾಣದ ಸಮೀಪ ಓರ್ವ ವ್ಯಕ್ತಿಯು ಟ್ರೈನ್‌ ಡಿಕ್ಕಿಯಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೈಸೂರು ತಾಳಗುಪ್ಪ ಟ್ರೈನ್‌ ಡಿಕ್ಕಿಯಾಗಿ ವ್ಯಕ್ತಿಯು ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. 

ಏನಿದು ಘಟನೆ 

ಶಿವಮೊಗ್ಗದ ವಿದ್ಯಾನಗರ ಗುರುಪುರ ನಿವಾಸಿ ಎಸ್‌ ರುದ್ರಪ್ಪ ಎಂಬವರು ಸೌದೆ ಒಟ್ಟು ಮಾಡಲು ಮಾದವಿ ಟಾಕೀಸ್‌ ರೈಲ್ವೆ ನಿಲ್ದಾಣದ ಸಮೀಪ ಬಂದಿದ್ದರು ಎನ್ನಲಾಗಿದೆ ಮೇಲ್ಸೇತುವೆ ಸಮೀಪ ಟ್ರ್ಯಾಕ್‌ ಬಳಿ ಓಡಾಡುತ್ತಿದ್ದ ಅವರಿಗೆ ಮೈಸೂರಿನಿಂದ ಬರುತ್ತಿದ್ದ ತಾಳಗುಪ್ಪ ಟ್ರೈನ್‌ ಡಿಕ್ಕಿಯಾಗಿದೆ ಎನ್ನಲಾಗಿದೆ. ಅವರಿಗೆ ಕಿವಿ ಸಮಸ್ಯೆಯಿದ್ದ ಕಾರಣ ಟ್ರೈನ್‌ ಬರುವುದು ಗೊತ್ತಾಗದೇ ಹೋಗಿರಬಹುದು, ಈ ವೇಳೆ ಅವರ ಮುಖಕ್ಕೆ ಟ್ರೈನ್‌ ಡಿಕ್ಕಿಯಾಗಿ ಒಂದು ಕಡೆಯಲ್ಲಿ ಬಿದ್ದಿದ್ದಾರೆ ಎಂದು ಸ್ಥಳೀಯರು ಊಹಿಸುತ್ತಿದ್ದಾರೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮನಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ. 

A man died in a train accident near Madhavi Talkies railway station in Shivamogga. The deceased, identified as S Rudrappa, was a resident of Vidyanagar Gurupura in Shivamogga. He was reportedly near the railway tracks when he was hit by a train coming from Mysore. Locals speculate that he may not have heard the train due to a hearing problem. The police arrived at the scene and are investigating the matter.