SHIVAMOGGA | ಸಂಗಮ್ ಟೈಲರ್ ಮಾಲೀಕರಿಗೆ ದಾರಿಯಲ್ಲಿ ಸಿಕ್ತು ದುಬಾರಿ ಬಂಗಾರದ ಸರ | ಆಮೇಲೆ ನಡೆಯಿತು ಈ ಘಟನೆ
shivamogga kote police station case Gold chain
SHIVAMOGGA | MALENADUTODAY NEWS | Jun 29, 2024 ಮಲೆನಾಡು ಟುಡೆ
ದಾರಿಯಲ್ಲಿ ಬೀಳಿಸಿಕೊಂಡು ಹೋಗಿದ್ದ ಚಿನ್ನದ ಸರವನ್ನು ಪೊಲೀಸರಿಗೆ ತಂದು ಮುಟ್ಟಿಸಿ ಅದರ ವಾರಸ್ಸುದಾರರಿಗೆ ವಾಪಸ್ ತಲುಪಿಸಿದ ಘಟನೆಯೊಂದರ ಬಗ್ಗೆ ಶಿವಮೊಗ್ಗ ಪೊಲೀಸರು ವರದಿ ಮಾಡಿದ್ದಾರೆ.
shivamogga kote police station
ದಿನಾಂಕಃ 29-06-2024 ರಂದು ಸಂಜೆ ಶಿವಮೊಗ್ಗ ಟೌನ್ ಬುದ್ಧ ನಗರದ ವಾಸಿ ರಂಜಿತ ಮತ್ತು ಅವರ ತಾಯಿ ರಾಜೇಶ್ವರಿ ರವರು ಬಿ. ಹೆಚ್ ರಸ್ತೆಯ ಸಂಗಮ್ ಟೈಲರ್ ಎದುರು ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ರಾಜೇಶ್ವರಿ ಅವರು ಧರಿಸಿದ್ದ 32 ಗ್ರಾಂ ತೂಕದ ಬಂಗಾರದ ಸರ ಅಲ್ಲಿಯೇ ಬಿದ್ದು ಹೋಗಿತ್ತು. ಅದೃಷ್ಟಕ್ಕೆ ಅದನ್ನ ಸಂಗಮ್ ಟೈಲರ್ ನವರು ಗಮನಿಸಿದ್ದರು. ದಾರಿಯಲ್ಲಿ ಬಿದ್ದ ಸರವನ್ನ ಸಂಗಮ್ ಟೈಲರ್ ನ ಮಾಲೀಕರಾದ ಕುಮಾರ್ ಎತ್ತಿಟ್ಟುಕೊಂಡು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದಾರೆ.
ಕೋಟೆ ಪೊಲೀಸ್ ಠಾಣೆ
ಆನಂತರ ಕೋಟೆ ಪೊಲೀಸ್ ಠಾಣೆ ಸಿಬ್ಬಂಧಿ ಸರದ ಮಾಲೀಕರನ್ನ ಪತ್ತೆ ಮಾಡಿ ಮಾಲೀಕರಾದ ರಾಜೇಶ್ವರಿ ರವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೆ ಸಂಗಮ್ ಟೈಲರ್ ಮಾಲೀಕರಿಗೆ ಧನ್ಯವಾದ ತಿಳಿಸಿದ್ದಾರೆ.