ಚಿನ್ನ, ಬೆಳ್ಳಿ, ದುಡು ಕದ್ದು ಮನೆಗೆ ಬೆಂಕಿ ಹಾಕಿದ್ದ ಕೇಸ್‌ ಕ್ಲೀಯರ್!‌ ಓರ್ವ ಮಹಿಳೆ ಸೇರಿ ಇಬ್ಬರು ಅರೆಸ್ಟ್!‌ ಡಿಟೇಲ್ಸ್‌ ಇಂಟರ್‌ಸ್ಟಿಂಗ್‌ ಆಗಿದೆ

The case of stealing gold, silver and money and setting house on fire has been cleared. Two persons, including a woman, have been arrested. The details are intersting

ಚಿನ್ನ, ಬೆಳ್ಳಿ, ದುಡು ಕದ್ದು ಮನೆಗೆ ಬೆಂಕಿ ಹಾಕಿದ್ದ ಕೇಸ್‌ ಕ್ಲೀಯರ್!‌  ಓರ್ವ ಮಹಿಳೆ ಸೇರಿ ಇಬ್ಬರು ಅರೆಸ್ಟ್!‌ ಡಿಟೇಲ್ಸ್‌ ಇಂಟರ್‌ಸ್ಟಿಂಗ್‌ ಆಗಿದೆ
Kote Police Station

shivamogga Mar 25, 2024 ಶಿವಮೊಗ್ಗದಲ್ಲಿ ಕುತೂಹಲ ಮೂಡಿಸಿದ್ದ ಪ್ರಕರಣದಲ್ಲಿ ಕೋಟೆ ಪೊಲೀಸರು ಕೇಸ್‌ ಭೇದಿಸಿದ್ದಾರೆ. ಅಲ್ಲದೆ  ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನ ಬಂಧಿಸಿದ್ದಾರೆ.. 

ಕಳೆದ 17-03-2024 ರಂದು ಕೋಟೆ ಪೊಲೀಸ್ ಸ್ಟೇಷನ್‌ ವ್ಯಾಪ್ತಿಯ ವಿದ್ಯಾನಗರದಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಊರಿಗೆ ಹೋಗಿದ್ದವರು ಮಾಹಿತಿ ತಿಳಿದು ಮನೆಗೆ ಬಂದು ನೋಡುವಾಗ ಮನೆಯೊಳಗೆ ಬೆಂಕಿ ಬಿದ್ದು ವಸ್ತುಗಳು ಸುಟ್ಟುಹೋಗಿರುವುದು ಗೊತ್ತಾಗಿತ್ತು. ಬಳಿಕ ಪರಿಶೀಲನೆ ವೇಳೆ  ಮನೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿ ನಂತರ ಮನೆಗೆ ಬೆಂಕಿ ಹಾಕಿ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ 454, 457, 380, 436 ಐ.ಪಿ.ಸಿ  ಕೇಸ್‌ ದಾಖಲಾಗಿತ್ತು. 

ಈ ಕೇಸ್‌ ದಾಖಲಿಸಿಕೊಂಡು ವಾರದಲ್ಲಿ ಆರೋಪಿಗಳನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಗುರುಬಸವರಾಜ ಹೆಚ್, ಪಿಐ ಕೋಟೆ ಪೊಲೀಸ್ ಠಾಣೆ ರವರ ನೇತೃತ್ವದ ಶಿವಕುಮಾರ್ ಡಿ, ಪಿಎಸ್ಐ, ಕೂಡಲ,ಪಿಎಸ್ಐ  ಎಎಸ್ಐ ಶ್ರೀಹರ್ಷ, ಎ.ಎಸ್.ಐ ಅಮೃತಬಾಯಿ, ಹಾಗೂ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಸಿಪಿಸಿ ಗೊರವರ ಅಂಜಿನಪ್ಪ, ಕಿಶೋರ, ಜಯಶ್ರೀ ತಂಡ ಆರೋಪಿಗಳನ್ನ ಬಂಧಿಸಿದ್ದಾರೆ. 

ಪೊಲೀಸ್‌ ಪ್ರಕಟಣೆಯಲ್ಲಿರುವಂತೆ  ಪ್ರಕರಣದಲ್ಲಿ  ದಿನಾಂಕಃ 20-03-2024 ರಂದು ಪ್ರಕರಣದ ಆರೋಪಿತರಾದ 1) ಆನಂದ.ಎ, 23 ವರ್ಷ ಸಾಯಿ ಇಂಟರ್ನ್ಯಾಷಿನಲ್ ಹೊಟೇಲ್ ಹತ್ತಿರ, , ಮತ್ತು  2) ಸಂಗೀತಾ.ಸಿ.ಎಸ್, 32 ವರ್ಶಿವಮೊಗ್ಗಷ, ಅಶೋಕ ರಸ್ತೆ. ಗಾಂಧಿಬಜಾರ್, ಶಿವಮೊಗ್ಗ,  ರವರನ್ನು ದಸ್ತಗಿರಿ ಮಾಡಿದೆ.

ಅಲ್ಲದೆ  ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ 1,75,500/-ನಗದು ಹಣ, ಅಂದಾಜು ಮೌಲ್ಯ 1,49,450/- ರೂಗಳ ಒಟ್ಟು 2 ಕೆಜಿ 135 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಅಂದಾಜು ಮೌಲ್ಯ 1,26,000/- ರೂಗಳ ಒಟ್ಟು 19 ಗ್ರಾಂ ಬಂಗಾರದ ಒಡವೆಗಳು, ಅಂದಾಜು ಮೌಲ್ಯ 10,000/- ರೂಗಳ ಪ್ಲಂಬಿಂಗ್ ವಸ್ತುಗಳು ಮತ್ತು ಅಂದಾಜು ಮೌಲ್ಯ 1,15,000/- ರೂಗಳ ಕೃತ್ಯಕ್ಕೆ ಉಪಯೋಗಿಸಿದ  02 ಬೈಕ್ ಗಳು, ಅಂದಾಜು ಮೌಲ್ಯ 93,000/- ರೂಗಳ 02 ಮೊಬೈಲ್ ಗಳು ಸೇರಿ ಒಟ್ಟು 6,59,950/- ರೂ ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.