ಆಗುಂಬೆ ಘಾಟಿ ಸುರಂಗ ಮಾರ್ಗ | ಮತ್ತೊಂದು ದೊಡ್ಡ ಬೆಳವಣಿಗೆ | ಕೇಂದ್ರ ಸಚಿವರ ಜೊತೆ MP ರಾಘವೇಂದ್ರ

Agumbe Ghat tunnel | Another Big Groth | MP Raghavendra with Union Minister

ಆಗುಂಬೆ ಘಾಟಿ ಸುರಂಗ ಮಾರ್ಗ | ಮತ್ತೊಂದು ದೊಡ್ಡ ಬೆಳವಣಿಗೆ  | ಕೇಂದ್ರ ಸಚಿವರ ಜೊತೆ MP ರಾಘವೇಂದ್ರ
Agumbe Ghat tunnel

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ 

ಇತ್ತೀಚೆಗಷ್ಟೆ ಶಿರಾಡಿ ಘಾಟಿಯ ಸುರಂಗ ಮಾರ್ಗದ ಬಗ್ಗೆ ಕೇಂದ್ರ ಸಚಿವರನ್ನ ತಂಡವೊಂದು ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿತ್ತು. ಇದೀಗ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿಯವರನ್ನು ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿ ಆಗುಂಬೆ ಘಾಟಿ ಸುರಂಗ ಮಾರ್ಗದ ವಿಚಾರವಾಗಿ ಮಾತನಾಡಿದ್ದಾರೆ. 

ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಆಗುಂಬೆಘಾಟಿಯಲ್ಲಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಮಾಡುವ ವಿಚಾರವಾಗಿ ರಾಘವೇಂದ್ರರವರು ನಿತಿನ್‌ ಗಡ್ಕರಿಯವರ ಜೊತೆಗೆ ಸಮಾಲೋಚನೆ ನಡೆಸಿದರು. ಈ ಯೋಜನೆಯ ಬಗ್ಗೆ ಈಗಾಗಲೇ ಮಲೆನಾಡು ಟುಡೆ ವರದಿ ಮಾಡಿತ್ತು. ಅದರ ಲಿಂಕ್‌ ಇಲ್ಲಿದೆ ನೋಡಿ

BREAKING NEWS | ಆಗುಂಬೆ ಸುರಂಗ ಮಾರ್ಗ | ದೊಡ್ಡ ಸುದ್ದಿ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಇನ್ನೂ ಸಚಿವರ ಜೊತೆ ಸಮಾಲೋಚನೆ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ ರವರು 

ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರಿ ಸೇತುವೆ ನಿರ್ಮಾಣ, 

ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ, 

ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ, 

ರಾ. ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ)  ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯ ಕುರಿತಾಗಿ ಚರ್ಚಿಸಿದರು.