ತುಂಗಾ, ಭದ್ರಾ ಜಲಾಶಯಗಳ ನೀರಿನ ಮಟ್ಟ | ಭದ್ರಾ ಡ್ಯಾಂಗೆ ಐದು ಟಿಎಂಸಿ ನೀರು ಹರಿವು | ರೈತರಿಗೆ ಖುಷಿ ವಿಚಾರ

Reservoir levels of Bhadra reservoir, tunga reservoir, tungabhadra

ತುಂಗಾ, ಭದ್ರಾ ಜಲಾಶಯಗಳ ನೀರಿನ ಮಟ್ಟ | ಭದ್ರಾ ಡ್ಯಾಂಗೆ ಐದು ಟಿಎಂಸಿ ನೀರು ಹರಿವು | ರೈತರಿಗೆ ಖುಷಿ ವಿಚಾರ

SHIVAMOGGA | MALENADUTODAY NEWS | Jul 3, 2024  ಮಲೆನಾಡು ಟುಡೆ    

ಶಿವಮೊಗ್ಗ ಮಳೆ ಪ್ರಮಾಣ ತುಸು ಕಡಿಮೆಯಾದಂತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಯಥಾಸ್ಥಿತಿಯಲ್ಲಿದೆ ಭದ್ರಾ ಜಲಾಶಯಕ್ಕೆ ಮೊನ್ನೆ ದಿನ ಅಂದರೆ 2 ನೇ ತಾರೀಖಿನ ಬೆಳಗಿನ ಅಂಕಿ ಅಂಶದ ಪ್ರಕಾರ, 5243 ಕ್ಯೂಸೆಕ್ಸ್‌ ನೀರು ಹರಿದು ಬಂದಿತ್ತು. ಜಲಾಶಯದ ನೀರಿನ ಮಟ್ಟ 639.26  ಮೀಟರ್‌ನಷ್ಟಿತ್ತು. ಕಳೆದ ವರ್ಷ ಈ ಪ್ರಮಾಣ 642.76 ರಷ್ಟಿತ್ತು. 

ಭದ್ರಾ ಜಲಾಶಯದ ನೀರಿನ ಮಟ್ಟ

ನಿನ್ನೆ ದಿನ ಅಂದರೆ ಇವತ್ತು ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭದ್ರಾಜಲಾಶಯಕ್ಕೆ  5324 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದೆ. ಜಲಾಶಯದ  ನೀರಿ ಮಟ್ಟ 639.52 ರಷ್ಟಿದೆ. ಇನ್ನೂ ಕಳೇದ ಜೂನ್‌ ಒಂದರಿಂದ ಇಲ್ಲಿಯವರೆಗೂ ಜಲಾಶಯಕ್ಕೆ  ಬರೋಬ್ಬರಿ 5.22 ಟಿಎಂಸಿ ನೀರು ಹರಿದು ಬಂದಿದ್ದು, ಜುಲೈ ತಿಂಗಳ ಮಳೆಯು ಆಶಾ ಭಾವನೆ ಮೂಡಿಸುತ್ತಿದೆ. 

ತುಂಗಾ ಜಲಾಶಯ ಗಾಜನೂರು

ಇನ್ನೂ ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜೊತೆಗೆ ಕೂಡಿ ಹರಿಯುವ ತುಂಗಾ ನದಿಯ ಗಾಜನೂರು ಡ್ಯಾಂನಲ್ಲಿ ಭರಪೂರ ನೀರು ಸಂಗ್ರಹವಾಗಿದೆ. ತುಂಗಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ತನ್ನ ಗರಿಷ್ಟ ಮಟ್ಟ ತಲುಲಿದ್ದು ಕಳೆದ ವರ್ಷಕ್ಕಿಂತ ಎರಡು ಅಡಿ ಹೆಚ್ಚುವರಿ ನೀರು ಸಂಗ್ರಹವಾಗಿದೆ. 12925 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದ್ದು,  ಅಷ್ಟೆ ಪ್ರಮಾಣದ ಹೊರಕ್ಕೆ ಬಿಡಲಾಗುತ್ತಿದೆ.  

Shivamogga is experiencing slightly reduced rainfall. Reservoir levels are stable, with Bhadra reservoir receiving 5243 cusecs on July 2nd and 5324 cusecs on July 3rd. The water level on July 3rd was 639.52 meters, compared to 642.76 meters last year. Since June 1st, 5.22 TMC of water has flowed into the reservoir.

The Tunga reservoir, which flows into the Tungabhadra reservoir, is also full. Rainfall in the Tunga catchment area has filled the dam to its maximum level, two feet higher than last year. The inflow and outflow at the dam are currently 12925 cusecs.



malenadutoday