ಲಿಂಗನಮಕ್ಕಿ ಜಲಾಶಯ | 24 ಗಂಟೆಯಲ್ಲಿ ಮೂರುವರೆ ಅಡಿ ನೀರು | ಎಷ್ಟಿದೆ ಗೊತ್ತಾ ಡ್ಯಾಂ ಲೆವಲ್‌

Linganamakki Dam water level today

ಲಿಂಗನಮಕ್ಕಿ ಜಲಾಶಯ | 24 ಗಂಟೆಯಲ್ಲಿ ಮೂರುವರೆ ಅಡಿ ನೀರು | ಎಷ್ಟಿದೆ ಗೊತ್ತಾ ಡ್ಯಾಂ ಲೆವಲ್‌
Linganamakki Dam water level today, ಲಿಂಗನಮಕ್ಕಿ ಡ್ಯಾಂ, ಜಲಾಶಯ, ಶರಾವತಿ ಜಲಾಯನ ಪ್ರದೇಶ

SHIVAMOGGA | MALENADUTODAY NEWS | Jul 5, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಮಳೆ ಹಲವೆಡೆ ಕೊಂಚ ಬಿಡುವು ನೀಡಿದೆ, ಮೋಡ ಮುಸುಕಿದ ವಾತಾವರಣ ಮಲೆನಾಡಲ್ಲಿದೆ. ಇನ್ನೂ ನಿನ್ನೆಯಾದ ಮಳೆಯ ಅಂಕಿ ಅಂಶಗಳ ಪ್ರಕಾರ, ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದರು ಅಣೆಕಟ್ಟೆಗೆ ಮೂರುವರೆ ಅಡಿಗಳಷ್ಟು ನೀರು ಸಂಗ್ರಹವಾಗಿದೆ. 

ಲಿಂಗನಮಕ್ಕಿ ಜಲಾಶಯ

ಕಳದ 24 ಗಂಟೆಗಳಲ್ಲಿ ಜಲಾಶಯಕ್ಕೆ ಮೂರುವರೆ ಅಡಿಗಳಷ್ಟು ನೀರು ಸಂಗ್ರಹವಾಗಿದ್ದು ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಜಲಾಶಯದ ನೀರಿನ ಮಟ್ಟ 1763.40 ಅಡಿ ತಲುಪಿದ್ದು ಜಲಾಶಯಕ್ಕೆ 44024 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಜಲಾಶಯದಲ್ಲಿ ಇದೆ ಸಮಯದಲ್ಲಿ 1742.65 ಅಡಿ ನೀರು ನಿಂತಿತ್ತು.  

ಮಲೆನಾಡು ಮಳೆ

24 ಗಂಟೆಗಳ ಅವಧಿಯಲ್ಲಿ ಶರಾವತಿ ಜಲಾನಯನ ಪ್ರದೇಶವಾದ ಕಾರ್ಗಲ್ನಲ್ಲಿ 41.8 ಮಿಲಿಮೀಟರ್ ಸಾವೇಹಕ್ಳುನಲ್ಲಿ 34 ಮಿಲಿ ಮೀಟರ್ ಚಕ್ರನಗರದಲ್ಲಿ 30 ಮಿಲಿಮೀಟರ್ ಹುಲಿಕಲ್ಲಿನಲ್ಲಿ 29 ಮಿಲಿ ಮೀಟರ್ ಮಾಸ್ತಿ ಕಟ್ಟೆ ಹಾಗೂ ರಿಪ್ಪನಪೇಟೆಗಳಲ್ಲಿ 28 ಮಿಲಿ ಮೀಟರ್ ಬಿದನೂರು ನಗರದಲ್ಲಿ 24 ಮಿಲಿಮೀಟರ್ ಹೊಸನಗರದಲ್ಲಿ 10 ಮಿಲಿಮೀಟರ್ ಹೊಂಬುಜದಲ್ಲಿ ಆರು ಮಿಲಿ ಮೀಟರ್ ಅರಸಾ ಳಿನಲ್ಲಿ ಐದು ಮಿಲಿಮೀಟರ್ ಮಳೆ ದಾಖಲಾಗಿದೆ 

Linganamakki Dam has seen a decrease in rainfall, but the water level has still risen by 3.5 feet in the last 24 hours, reaching 1763.40 feet. The inflow to the dam is 44024 cusecs, and the water level is higher than it was at the same time last year. Rainfall has been recorded in various parts of the Sharavati catchment area, with Kargal receiving the highest amount at 41.8 mm. Other areas like Savehaklu, Chakra Nagar, Hulikal, Mastikatte, and Rippanpet have also received significant rainfall.