ಶಿವಮೊಗ್ಗದಲ್ಲಿ ಮಳೆ ಇದ್ಯಾ! 24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ? ಡ್ಯಾಂನಲ್ಲಿ ಎಷ್ಟಿದೆ

ಶಿವಮೊಗ್ಗ ಜಿಲ್ಲೆ ವಿವಿಧ ತಾಲ್ಲೂಕುಗಳಲ್ಲಾದ ಮಳೆಯ ಪ್ರಮಾಣದ ವಿವರ Details of rainfall in various taluks of Shimoga district

ಶಿವಮೊಗ್ಗದಲ್ಲಿ ಮಳೆ ಇದ್ಯಾ! 24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?  ಡ್ಯಾಂನಲ್ಲಿ ಎಷ್ಟಿದೆ

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಇವತ್ತು ಮಳೆ ಮಡುಗಟ್ಟಿದೆ..ಬೆಳಗ್ಗೆಯಿಂದಲೂ ವ್ಯಾಪಕ ಮಳೆಯಾಗುತ್ತಿದೆ. ಇನ್ನೂ ಕಳೆದ 24 ಗಂಟೆಯಲ್ಲಿಯು ಉತ್ತಮ ಮಳೆಯಾಗಿದೆ. 

 

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 220.50 ಮಿಮಿ ಮಳೆಯಾಗಿದ್ದು, ಸರಾಸರಿ 31.50 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  310.84 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 6.30 ಮಿಮಿ., ಭದ್ರಾವತಿ 5.30 ಮಿಮಿ., ತೀರ್ಥಹಳ್ಳಿ 56.50 ಮಿಮಿ., ಸಾಗರ 47.90 ಮಿಮಿ., ಶಿಕಾರಿಪುರ 12.40 ಮಿಮಿ., ಸೊರಬ 30.30 ಮಿಮಿ. ಹಾಗೂ ಹೊಸನಗರ 61.80 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ  

ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1758.95 (ಇಂದಿನ ಮಟ್ಟ), 20792.00 (ಒಳಹರಿವು), 1733.90 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1796.50.  

ಭದ್ರಾ: 186 (ಗರಿಷ್ಠ), 141.70 (ಇಂದಿನ ಮಟ್ಟ), 1518.00 (ಒಳಹರಿವು), 164.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 182.15.   

ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 14038.00 (ಒಳಹರಿವು), 14038.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 574.88 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 4144 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 583.18 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.88 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1367 (ಒಳಹರಿವು), 762.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 561.50 (ಎಂಎಸ್‍ಎಲ್‍ಗಳಲ್ಲಿ).. 

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 569.60 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1979.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 576.84 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 576.86 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 885.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 581.78 (ಎಂಎಸ್‍ಎಲ್‍ಗಳಲ್ಲಿ).  

 


ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಶಿವಮೊಗ್ಗ /  ನಗರದ ಐಬಿ ಸರ್ಕಲ್​ ಬಳಿಯಲ್ಲಿ ನಿನ್ನೆ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಕುವೆಂಪು ರೋಡ್ ಕಡೆಯಿಂದ ಬರುತ್ತಿದ್ದ ಟಾಟಾ ಸಫಾರಿ ವಾಹನವೊಂದು, ಸರ್ಕಲ್​ನಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ನುಜ್ಜುಗುಜ್ಜಾಗಿದೆ. ಅಲ್ಲದೆ ಸರ್ಕಲ್​ ಬಳಿಯಲ್ಲಿರುವ ಡಿವೈಡರ್​ಗಳಿಗೆ ಹಾನಿಯಾಗಿದೆ. 

ವೈದ್ಯರೊಬ್ಬರಿಗೆ ಗಾಯ

ಇನ್ನೂ ಕಾರನ್ನು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಚಲಾಯಿಸುತ್ತಿದ್ದರು ಎಂಬ ಮಾಹಿತಿಯಿದ್ದು, ಅವರಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಟೋ ವಾಹನವನ್ನು ಕರೆಸಿಕೊಂಡು ಆಕ್ಸಿಡೆಂಟ್ ಆದ ಟಾಫ ಸಫಾರಿಯಿಂದ ಸ್ಟೇಷನ್​ಗೆ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಸದ್ಯ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸ್ತಿದ್ಧಾರೆ. 

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?