KARNATAKA NEWS/ ONLINE / Malenadu today/ Jul 19, 2023 SHIVAMOGGA NEWS
ಪಬ್ಲಿಕ್ ಪ್ಲೇಸ್ಗಳಲ್ಲಿ ಅನುಮಾನಸ್ಪದವಾಗಿ ಓಡಾಡುವ ಅಥವಾ ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ವ್ಯಕ್ತಿಗಳ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿರುತ್ತಾರೆ. ಏಕೆಂದರೆ ಅವರ ಹಿನ್ನೆಲೆಯಲ್ಲಿಯೋ ಮುನ್ನಲೆಯಲ್ಲಿಯೋ ಅಪರಾಧದ ಸುಳಿವು ಪೊಲೀಸರಿಗೆ ಕಾಣಸಿಗುತ್ತದೆ .
ಸದ್ಯ ಶಿವಮೊಗ್ಗ ಪೊಲೀಸರಿಗೂ ಅಂತಹದ್ದೊಂದು ಸುಳಿವು ಸಿಕ್ಕಿದ್ದಷ್ಟೆ ಅಲ್ಲದೆ, ದರೋಡೆ ಕೇಸ್ನಲ್ಲಿ ಬೇಕಾಗಿದ್ದ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ.
ಏನಿದು ಪ್ರಕರಣ
ಕಳೆದ 17-07-2023 ದೊಡ್ಡಪೇಟೆ ಪೊಲೀಸ್ ಸ್ಟೇಷನ್ನ ಕಾನ್ಸ್ಟೇಬಲ್ ಗಂಗಪ್ಪ ತುಂಗಲ್, ರಾತ್ರಿ ಗಸ್ತು ತಿರುಗುತ್ತಿದ್ರು. ಈ ವೇಳೆ , ಅನುಮಾನಸ್ಪದ ವ್ಯಕ್ತಿಯೊಬ್ಬನ ಗುರುತು ಪತ್ತೆಗೆ ಮುಂದಾಗಿದ್ದಾರೆ. ಇದಕ್ಕಾಗಿ, MCCTNS (Mobile Crime Criminal Tracking Network System) ತಂತ್ರಾಂಶದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ವ್ಯಕ್ತಿಯೊಬ್ಬನ ಫಿಂಗರ್ ಪ್ರಿಂಟ್ ಪರಿಶೀಲಿಸಿದ್ಧಾರೆ. ಆಗ ಅನುಮಾನಸ್ಪದ ವ್ಯಕ್ತಿ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಎಂಬುದು ಗೊತ್ತಾಗಿದೆ. ತಕ್ಷಣವೇ ಅಲರ್ಟ್ ಆ ಪೇದೆ, ಆತನನ್ನು ಸ್ಟೇಷನ್ಗೆ ಕರೆತಂದಿದ್ದಾರೆ.
ಆನಂತರ ವ್ಯಕ್ತಿಯ ಪೂರ್ವಾಪರವನ್ನು ಪರಿಶಿಲಿಸಿದಾಗ, ಸಿಕ್ಕಿಬಿದ್ದಿದ್ದ ಆರೋಪಿ ನವೀನ್ ನಾಯ್ಕ್ ದರೋಡೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಂಬುದು ತಿಳಿದುಬಂದಿದೆ. ತಕ್ಷಣ ದೊಡ್ಡಪೇಟೆ ಪೊಲೀಸರು ಆತನನ್ನು ಬಂಧಿಸಿ 18-07-2023 ರಂದು ಕೋರ್ಟ್ಗೆ ಹಾಜರು ಪಡಿಸಿದೆ. ಇನ್ನೂ ಪೇದೆಯೊಬ್ಬರು ತೋರಿಸಿದ ಸೂಕ್ಷ್ಮತನಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ಧಾರೆ.
ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ
ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ