ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

Three KAS rank officers have been transferred to the post of Additional Deputy Commissioner, Smart City Limited and Sub-Divisional Officer in Shivamogga district.ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ಸ್ಮಾರ್ಟ್​ ಸಿಟಿ ಲಿಮಿಟೆಡ್ ಹಾಗೂ ಉಪವಿಭಾಗಾಧಿಕಾರಿ ಹುದ್ದೆಗೆ ಮೂವರು ಕೆಎಎಸ್​ ಶ್ರೇಣಿಯ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ

ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ರಾಜ್ಯಸರ್ಕಾರ ಕೆಎಎಸ್​ ಅಧಿಕಾರಿಗಳ ವರ್ಗಾವಣೆ ಕೈಗೊಂಡಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಮೂರು ಸ್ಥಾನಗಳಿಗೆ ಮೂವರು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. 17-07-23 ರಂದು ಹೊರಬಿದ್ದ ಆದೇಶದಲ್ಲಿ , ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ, ರವಿಚಂದ್ರ ನಾಯಕ್​ರವರ ಸ್ಥಾನಕ್ಕೆ, ಸ್ಥಳ ನಿರೀಕ್ಷಣೆಯಲ್ಲಿದ್ದ ಸತ್ಯನಾರಾಯಣ್ ಜಿ ಹೆಚ್​ರವರನ್ನ ವರ್ಗಾವಣೆ ಮಾಡಲಾಗಿದೆ. ಇನ್ನೂ  ಶಿವಮೊಗ್ಗ ಜಿಲ್ಲೆ  ಅಪರ ಜಿಲ್ಲಾಧಿಕಾರಿ ಸ್ಥಾನಕ್ಕೆ ಸಿದ್ದಲಿಂಗರೆಡ್ಡಿಯವರನ್ನ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ಮತ್ತೊಂದೆಡೆ ಶಿವಮೊಗ್ಗ ಸ್ಮಾರ್ಟ್​ ಸಿಟಿ ಎಂಡಿಯಾಗಿ, ರಘುನಂದನ್​ ಎ.ಎನ್​ರವರನ್ನು ವರ್ಗಾವಣೆ ಮಾಡಲಾಗಿದೆ.  


ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

ಶಿವಮೊಗ್ಗ ಎಂಆರ್​ಎಸ್​ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತುರ್ತು ನಿರ್ವಹಣೆ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 19 ರ ಬೆಳಗ್ಗೆ 09-00 ರಿಂದ ಮಧ್ಯಾಹ್ನ 03-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ(Power cut) 

ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ, ಬಂಗಾರಪ್ಪ ಕಾಲೋಣಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ, ಅಮರಾವತಿ ಕ್ಯಾಂಪ್, ಬಿದರೆ ಹಾಗೂ  ಸುತ್ತಮುತ್ತಲಿನ ಗ್ರಾಮಗಳಲ್ಲಿ ಪವರ್ ಕಟ್ ಇರಲಿದೆ.

ಪೋಸ್ಟ್ ಆಫೀಸ್​ನಲ್ಲಿ SB ಅಕೌಂಟ್ ಇದೆಯಾ? ಆಧಾರ್ ಲಿಂಕ್ ಮಾಡಿಸಿದ್ದೀರಾ? ಇಲ್ಲದಿದ್ದರೇ ರದ್ದಾಗುತ್ತೆ ಈ ಸೌಲಭ್ಯ! ವಿವರ ಓದಿ!

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ