ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ In major parts of Shimoga, there will be no electricity for the entire day on July 19. Where? Here's the details

ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

 ಶಿವಮೊಗ್ಗ ಎಂಆರ್​ಎಸ್​ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತುರ್ತು ನಿರ್ವಹಣೆ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 19 ರ ಬೆಳಗ್ಗೆ 09-00 ರಿಂದ ಮಧ್ಯಾಹ್ನ 03-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ(Power cut) 

ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ, ಬಂಗಾರಪ್ಪ ಕಾಲೋಣಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ, ಅಮರಾವತಿ ಕ್ಯಾಂಪ್, ಬಿದರೆ ಹಾಗೂ  ಸುತ್ತಮುತ್ತಲಿನ ಗ್ರಾಮಗಳಲ್ಲಿ ಪವರ್ ಕಟ್ ಇರಲಿದೆ.

ಪೋಸ್ಟ್ ಆಫೀಸ್​ನಲ್ಲಿ SB ಅಕೌಂಟ್ ಇದೆಯಾ? ಆಧಾರ್ ಲಿಂಕ್ ಮಾಡಿಸಿದ್ದೀರಾ? ಇಲ್ಲದಿದ್ದರೇ ರದ್ದಾಗುತ್ತೆ ಈ ಸೌಲಭ್ಯ! ವಿವರ ಓದಿ!



 ಶಿವಮೊಗ್ಗ:    ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಕೇವಲ ಆಧಾರ್ ಸೀಡ್ ಆದ ಖಾತೆಗಳಿಗೆ ಮಾತ್ರ ವರ್ಗಾಯಿಸಲು ನಿರ್ಧರಿಸಿದ್ದು, ಆಧಾರ್ ಸೀಡಿಂಗ್ ಆಗದ ಖಾತೆಗಳಿಗೆ ಪಿಂಚಣಿ ಸ್ಥಗಿತಗೊಳ್ಳಲಿದೆ. 

ಈ ಹಿನ್ನಲೆಯಲ್ಲಿ ಶಿವಮೊಗ್ಗ ಅಂಚೆ ವಿಭಾಗದ ಎಲ್ಲಾ ಫಲಾನುಭವಿಗಳಿಗೆ ಸರ್ಕಾರದಿಂದ ದೊರಕುವ ಸಾಮಾಜಿಕ ಭದ್ರತೆ ಪಿಂಚಣಿ ರದ್ದಾಗದಂತೆ ಅವರ ಅಂಚೆ ಉಳಿತಾಯ ಖಾತೆಗಳಿಗೆ ಆಧಾರ್ ಸೀಡ್  ಮಾಡುವಂತಹ ಶಿಬಿರಗಳನ್ನು ಪ್ರತಿ ಅಂಚೆ ಕಚೇರಿಯಲ್ಲಿ ನಡೆಸುವ ಮೂಲಕ ಆರಂಭಿಸಿದೆ.

ಪಿಂಚಣಿ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಅಂಚೆ ಕಚೇರಿಯ ಖಾತೆಗಳಿಗೆ ಜಮವಾದ ಹಣವನ್ನು ನಿಮ್ಮ  ಮನೆ ಬಾಗಿಲಲ್ಲಿ ಕೊಡುವ ವ್ಯವಸ್ಥೆ ಅತಿ ಶೀಘ್ರದಲ್ಲಿ ಜಾರಿಗೆ ತರಲಿದ್ದು, ನಿಮ್ಮ ವ್ಯಾಪ್ತಿಗೆ ಬರುವ ಅಂಚೆ ಕಚೇರಿ ಅಥವಾ ಅಂಚೆ ಪೇದೆಯನ್ನು ಸಂಪರ್ಕಿಸಿ ನಿಮ್ಮ ಉಳಿತಾಯ ಖಾತೆ (SB) ಗಳಿಗೆ ಮತ್ತು ಖಾತೆ ಇಲ್ಲದವರು ಅಂಚೆ ಕಚೇರಿಯಲ್ಲಿ POSB ಹೊಸ ಖಾತೆಗಳನ್ನು ತೆರೆದು ಪಿಂಚಣಿಯನ್ನು ಪಡೆಯಬಹುದಾಗಿದೆ. 

ಅಂಚೆ ಕಚೇರಿಯ ಉಳಿತಾಯ ಖಾತೆಗೆ ತ್ವರಿತ ಆಧಾರ್ ಸೀಡಿಂಗ್ ಮಾಡಲು D-Cube ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಶಿವಮೊಗ್ಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

------------------

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ

ಮಳೆಗಾಲ ಬಂದರೆ, ಅನ್ನದಾತ ನೇಗಿಲ ಹಿಡಿದು ಅನ್ನದ ದುಡಿಮೆಗೆ ಅಣಿಯಾಗುತ್ತಾನೆ. ಇದು ಜಗತ್ತಿಗೆ ಕಾಣುವ ಸತ್ಯ. ಆದರೆ ಅನ್ನದಾತ ತನ್ನ ಮಣ್ಣಿಗಾಗಿ ಹೊಡೆದಾಡುವ ಪರಿಸ್ಥಿತಿಗಳು ಇತ್ತೀಚೆಗೆ ಅತಿಯಾಗುತ್ತಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿ ಕಳೆದ ಹದಿನೈದು ದಿನಗಳಲ್ಲಿ ಜಿಲ್ಲಾವ್ಯಾಪ್ತಿಯ ಪೊಲೀಸ್ ಸ್ಟೇಷನ್​ಗಳಲ್ಲಿ ಬಹುತೇಕ ಕೇಸ್​ಗಳು ಹೊಲ, ಗದ್ದೆ, ಬದು, ಬೇಲಿ, ತೋಟ, ಆಸ್ತಿ ವ್ಯಾಜ್ಯಕ್ಕಾಗಿ ಆಗಿವೆ. ಅಷ್ಟೆಅಲ್ಲದೆ ಈ ಪೈಕಿ ಬಹುತೇಕ ಕೇಸ್​ಗಳಲ್ಲು ಮಾರಣಾಂತಿಕ ಹೊಡೆದಾಟ ನಡೆದಿವೆ. ಜಾತಿ ನಿಂದನೆ ಪ್ರಕರಣಗಳು ದಾಖಲಾಗಿವೆ, ಕುಟುಂಬ ವ್ಯವಸ್ಥೆಗಳು ಛಿದ್ರಗಳು ಸಂಬಂಧಗಳಿಗೆ ಎಳ್ಳು ನೀರು ಬಿಟ್ಟಿರುವ ಸನ್ನಿವೇಶಗಳು ನಿರ್ಮಾಣವಾಗಿದೆ. ಸರಿಯಾದ ದಾಖಲು ಪತ್ರ ಇಲ್ಲದಿರೋದು, ಇನ್ನೊಬ್ಬರ ವಶದಲ್ಲಿರುವ ಜಮೀನಿಗೆ ಕಣ್ಣು ಹಾಕುವ ಕುತಂತ್ರ, ಯಾರದ್ದೋ ಜಮೀನಿನಲ್ಲಿ ಅನುಭೋಗಕ್ಕೆ ಮುಂದಾಗುವ ಹುನ್ನಾರ, ಕಾನೂನಿನ ಬಲ ಪಡೆದು, ಇನ್ಯಾರದ್ದೋ ಆಸ್ತಿಗೆ ಕೈ ಹಾಕುವ ಯತ್ನ, ಶಿವಮೊಗ್ಗದಲ್ಲಿ ಅನೇಕ ಕಾರಣಗಳಿಗೆ ಭೂಮಿಗಾಗಿ ಹೊಡೆದಾಟ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವೊಂದು ಹೊರಬಿದ್ದಿದ್ದು, ಈ ವಿಡಿಯೋದಲ್ಲಿ ಎರಡು ಕುಟುಂಬಗಳು ಕಲ್ಲು ದೊಣ್ಣೆಗಳಿಂದ ಬಡಿದಾಡಿಕೊಂಡಿವೆ. 

ಏನಿದು ಘಟನೆ?

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದ ಘಟನೆ ಇದಾಗಿದೆ. ಜಾಗ ತಮ್ಮದು ಎಂದು ಎರಡು ಕಡೆಯುವರು ಹೇಳುತ್ತಿದ್ದು, ಘಟನೆಯಲ್ಲಿ ಎರಡು ಕಡೆಯವರಿಗೂ ಗಂಭೀರ ಗಾಯಗಳಾಗಿವೆ. ಸಿಕ್ಕ ಮಾಹಿತಿ ಪ್ರಕಾರ, ಈಗಾಗಲೇ ಬಿತ್ತಿದ್ದ ಜೋಳದ ಹೊಲದಲ್ಲಿ, ಮತ್ತೊಂದು ಕುಟುಂಬದವರು ಬಂದು ಟ್ರ್ಯಾಕ್ಟರ್ ಹೊಡೆದು ಪುನಃ ಜೋಳ ಬಿತ್ತಿದ್ದಾರೆಂಬುದು ಒಂದು ಕಡೆಯ ಆರೋಪ. ಇದೇ ವಿಚಾರವಾಗಿ ಜೋಳದ ಹೊಲದಲ್ಲಿಯೆ ಹೆಂಗಸರು, ಗಂಡಸರು ಹೊಡೆದಾಡಿದ್ದಾರೆ. ವಿಡಿಯೋ ಹೊರಬಿದ್ದಿದ್ದು, ಎರಡು ಕುಟುಂಬಗಳು ಪೊಲೀಸರ ಬಳಿಯಲ್ಲಿ ನ್ಯಾಯ ಕೇಳುತ್ತಿವೆ.