ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ

In Shivamogga district, there has been an increase in cases of farmers fighting with each other for their land and filing cases. ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ತಮ್ಮ ತಮ್ಮ ಭೂಮಿಗಾಗಿ ಪರಸ್ಪರ ಹೊಡೆದಾಡಿ, ಕೇಸ್​ ದಾಖಲಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ!  ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ಮಳೆಗಾಲ ಬಂದರೆ, ಅನ್ನದಾತ ನೇಗಿಲ ಹಿಡಿದು ಅನ್ನದ ದುಡಿಮೆಗೆ ಅಣಿಯಾಗುತ್ತಾನೆ. ಇದು ಜಗತ್ತಿಗೆ ಕಾಣುವ ಸತ್ಯ. ಆದರೆ ಅನ್ನದಾತ ತನ್ನ ಮಣ್ಣಿಗಾಗಿ ಹೊಡೆದಾಡುವ ಪರಿಸ್ಥಿತಿಗಳು ಇತ್ತೀಚೆಗೆ ಅತಿಯಾಗುತ್ತಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿ ಕಳೆದ ಹದಿನೈದು ದಿನಗಳಲ್ಲಿ ಜಿಲ್ಲಾವ್ಯಾಪ್ತಿಯ ಪೊಲೀಸ್ ಸ್ಟೇಷನ್​ಗಳಲ್ಲಿ ಬಹುತೇಕ ಕೇಸ್​ಗಳು ಹೊಲ, ಗದ್ದೆ, ಬದು, ಬೇಲಿ, ತೋಟ, ಆಸ್ತಿ ವ್ಯಾಜ್ಯಕ್ಕಾಗಿ ಆಗಿವೆ. ಅಷ್ಟೆಅಲ್ಲದೆ ಈ ಪೈಕಿ ಬಹುತೇಕ ಕೇಸ್​ಗಳಲ್ಲು ಮಾರಣಾಂತಿಕ ಹೊಡೆದಾಟ ನಡೆದಿವೆ. ಜಾತಿ ನಿಂದನೆ ಪ್ರಕರಣಗಳು ದಾಖಲಾಗಿವೆ, ಕುಟುಂಬ ವ್ಯವಸ್ಥೆಗಳು ಛಿದ್ರಗಳು ಸಂಬಂಧಗಳಿಗೆ ಎಳ್ಳು ನೀರು ಬಿಟ್ಟಿರುವ ಸನ್ನಿವೇಶಗಳು ನಿರ್ಮಾಣವಾಗಿದೆ. 

ಸರಿಯಾದ ದಾಖಲು ಪತ್ರ ಇಲ್ಲದಿರೋದು, ಇನ್ನೊಬ್ಬರ ವಶದಲ್ಲಿರುವ ಜಮೀನಿಗೆ ಕಣ್ಣು ಹಾಕುವ ಕುತಂತ್ರ, ಯಾರದ್ದೋ ಜಮೀನಿನಲ್ಲಿ ಅನುಭೋಗಕ್ಕೆ ಮುಂದಾಗುವ ಹುನ್ನಾರ, ಕಾನೂನಿನ ಬಲ ಪಡೆದು, ಇನ್ಯಾರದ್ದೋ ಆಸ್ತಿಗೆ ಕೈ ಹಾಕುವ ಯತ್ನ, ಶಿವಮೊಗ್ಗದಲ್ಲಿ ಅನೇಕ ಕಾರಣಗಳಿಗೆ ಭೂಮಿಗಾಗಿ ಹೊಡೆದಾಟ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವೊಂದು ಹೊರಬಿದ್ದಿದ್ದು, ಈ ವಿಡಿಯೋದಲ್ಲಿ ಎರಡು ಕುಟುಂಬಗಳು ಕಲ್ಲು ದೊಣ್ಣೆಗಳಿಂದ ಬಡಿದಾಡಿಕೊಂಡಿವೆ. 

ಏನಿದು ಘಟನೆ?

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಸದಾಪುರದಲ್ಲಿ ನಡೆದ ಘಟನೆ ಇದಾಗಿದೆ. ಜಾಗ ತಮ್ಮದು ಎಂದು ಎರಡು ಕಡೆಯುವರು ಹೇಳುತ್ತಿದ್ದು, ಘಟನೆಯಲ್ಲಿ ಎರಡು ಕಡೆಯವರಿಗೂ ಗಂಭೀರ ಗಾಯಗಳಾಗಿವೆ. ಸಿಕ್ಕ ಮಾಹಿತಿ ಪ್ರಕಾರ, ಈಗಾಗಲೇ ಬಿತ್ತಿದ್ದ ಜೋಳದ ಹೊಲದಲ್ಲಿ, ಮತ್ತೊಂದು ಕುಟುಂಬದವರು ಬಂದು ಟ್ರ್ಯಾಕ್ಟರ್ ಹೊಡೆದು ಪುನಃ ಜೋಳ ಬಿತ್ತಿದ್ದಾರೆಂಬುದು ಒಂದು ಕಡೆಯ ಆರೋಪ. ಇದೇ ವಿಚಾರವಾಗಿ ಜೋಳದ ಹೊಲದಲ್ಲಿಯೆ ಹೆಂಗಸರು, ಗಂಡಸರು ಹೊಡೆದಾಡಿದ್ದಾರೆ. ವಿಡಿಯೋ ಹೊರಬಿದ್ದಿದ್ದು, ಎರಡು ಕುಟುಂಬಗಳು ಪೊಲೀಸರ ಬಳಿಯಲ್ಲಿ ನ್ಯಾಯ ಕೇಳುತ್ತಿವೆ.