ಕಾಡುಪ್ರಾಣಿಯಿಂದ ಎದುರಾಯ್ತು ಕಂಟಕ| ಬೈಕ್ನಲ್ಲಿ ಹೋಗುವ ವೇಳೆ ಭೀಕರ ಘಟನೆ| ಪತಿ ಸಾವು-ಪತ್ನಿ ಸೀರಿಯಸ್
Here is the details of the incident that took place in Shikaripura taluk of Shimoga district ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದ ಘಟನೆಯ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS
shikaripura |ಕಾಡುಪ್ರಾಣಿಯೊಂದು ದಾರಿಗೆ ಅಡ್ಡಬಂದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಯರೆಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವರು ಸಾವನ್ನಪ್ಪಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿಕಾರಿಪುರದ ಇಟ್ಟಿಗೆಹಳ್ಳಿ ಮೂಲದ ಗಣೇಶ್ ಮೃತರು, ಇನ್ನೂ ಘಟನೆಯಲ್ಲಿ ಇವರ ಪತ್ನಿ ರಂಜಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತ್ನಿ ರಂಜಿರನ್ನು ಅವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಿಡಲು ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ.
READ : ಕಾಲೇಜಿಗೆ ರೆಡಿಯಾಗಿ ಹೊರಟಿದ್ದ ವಿದ್ಯಾರ್ಥಿಗೆ ಪಿಜಿಯಿಂದ ಹೊರಬರುತ್ತಲೆ ಕಾದಿತ್ತು ಶಾಕ್!
ಇಲ್ಲಿನ ಯರೆಕಟ್ಟೆ ಬಳಿಯಲ್ಲಿ ಇರುವ ಬೂತಪ್ಪನ ಕಟ್ಟೆಯ ಹತ್ತಿರ ವನ್ಯಜೀವಿಯೊಂದು ಅಡ್ಡಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಮುಂದಾದ ಗಣೇಶ್ ತಮ್ಮ ಬೈಕ್ನ್ನ ರಸ್ತೆ ಬದಿಯ ಕಟ್ಟೆಗೆ ಡಿಕ್ಕಿ ಹೊಡೆಸಿದ್ದಾರೆ.
ಪರಿಣಾಮ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಗಣೇಶ್ ತೀವ್ರ ಪೆಟ್ಟಿನಿಂದ ಸಾವನ್ನಪ್ಪಿದ್ದಾರೆ. ರಂಜಿತಾ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.