ಆನೆ ತೂಕದ ಪೈಪ್ ಬಂಡಲ್ಗಳನ್ನು ಕದ್ದಿದ್ದ ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಭಯಂಕರ !
Details of the case that took place at Sagar Rural Police Station in Shimoga district ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ನಡೆದ ಪ್ರಕರಣದ ವಿವರ

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS
Sagara | ಶಿವಮೊಗ್ಗ ಜಿಲ್ಲೆಯಲ್ಲಿ ಎಂತೆಂತಹ ಕಳ್ಳರಿದ್ದಾರೆ ಎಂದರೆ, ಇತ್ತೀಚೆಗೆ ಶಿವಮೊಗ್ಗ-ತಾಳಗುಪ್ಪ ರೈಲ್ವೆ ಮಾರ್ಗದಲ್ಲಿ ಅಳವಡಿಸಲಾಗುತ್ತಿದ್ದ ವಿದ್ಯುತ್ ಲೈನ್ಗೆ ಬಳಸಿದ್ದ ತಾಮ್ರವನ್ನೆ ಕದಿದ್ದರು. ಕೆಲವೇ ದಿನಗಳಲ್ಲಿ ಆ ಆರೋಪಿಗಳ ಬಂಧನವಾಗಿತ್ತು. ಇದೀಗ ಅಂತಹುದ್ದೆ ಒಂದು ಪ್ರಕರಣ ಸಾಗರ ತಾಲ್ಲೂಕಿನಲ್ಲಿ ವರದಿಯಾಗಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕಾಮಗಾರಿಗೆ ಸಂಗ್ರಹಿಸಿಟ್ಟಿದ್ದ ಪೈಪುಗಳ ಬಂಡಲ್‌ಗಳನ್ನೆ ಕಳವು ಮಾಡಿದ ಸಂಬಂಧ ಸಾಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮದ ಕೇಡಲಸರ ಸಂಸ್ಕೃತ ಶಾಲಾ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದ 1 ಲಕ್ಷದ 15 ಸಾವಿರ ರೂಪಾಯಿ ಬೆಲೆ ಸಾವಿರ ಮೀಟರ್ ಉದ್ದದ ಐದು ಬಂಡಲ್ಗಳನ್ನ ಕಳ್ಳರು ಕದ್ದಿದ್ದರು.
ವಿಶೇಷ ಅಂದರೆ ಅಷ್ಟೊಂದು ದೊಡ್ಡ ಬಾರದ ಬಂಡಲ್ನ್ನ ಸರಕುವಾಹನದಲ್ಲಿಯೇ ಸಾಗಿಸಿದ್ದ ಆರೋಪಿಗಳು ಆನಂತರ ಕಣ್ಮರೆಯಾಗಿದ್ದರು. ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ವಾಹನದ ಬೆನ್ನು ಬಿದ್ದು, ಆರೋಪಿಗಳ ಮೂಲವನ್ನ ಪತ್ತೆ ಮಾಡಿದ್ದಾರೆ. ಸದ್ಯ ಓರ್ವ ಆರೋಪಿ ರಾಜ್ ಎಂಬಾತ ಸೆರೆಯಾಗಿದ್ದಾನೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.
READ : ಕಾಲೇಜಿಗೆ ರೆಡಿಯಾಗಿ ಹೊರಟಿದ್ದ ವಿದ್ಯಾರ್ಥಿಗೆ ಪಿಜಿಯಿಂದ ಹೊರಬರುತ್ತಲೆ ಕಾದಿತ್ತು ಶಾಕ್!
ಪೊಲೀಸ್ ಉಪಧೀಕ್ಷಕರಾದ ಗೋಪಾಲ ಟಿ.ನಾಯ್ಕ್ ಅವರ ನೇತೃತ್ವದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ಎಸ್.ಎನ್ ಹಾಗೂ ಪಿ.ಎಸ್.ಐ ನಾರಾಯಣ ಮಧುಗಿರಿ ಪೊಲೀಸ್ ಸಿಬ್ಬಂಧಿಗಳಾದ ಸನಾವುಲ್ಲಾ,ಷೇಖ್‌ಪೈರೋಜ್ ಅಹಮದ್,ರವಿಕುಮಾರ್ ಇವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬೇದಿಸಿದೆ.
ಪ್ರಕರಣದ ಆರೋಪಿ ವೇಗರಾಜ್ @ ರಾಜ್, 40 ವರ್ಷ, ಹೊಸೂರು, ಸಾಗರ ತಾಲ್ಲೂಕ್ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,15,000/- ರೂಗಳ ಪೈಪ್ ಬಂಡಲ್ ಗಳು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 1,50,000/- ರೂಗಳ ಟಾಟಾ ಸೂಪರ್ ಏಸ್ ಮಿಂಟ್ ವಾಹನ ಸೇರಿ ಒಟ್ಟು ರೂ 2,65,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ