ಆನಂದಪುರ ಲಾಂಗ್‌ ಕೇಸ್‌ | ಮಾದಕ ವಸ್ತು ಸೇವನೆ ದೃಢ? | ಗಾಂಜಾ ಅಮಲಲ್ಲೆ ನಡೆಯಿತಾ ಕೃತ್ಯ?

A medical examination has confirmed that the accused in the case, which took place in Anandpura pete, had consumed drugs

ಆನಂದಪುರ ಲಾಂಗ್‌ ಕೇಸ್‌ | ಮಾದಕ ವಸ್ತು ಸೇವನೆ ದೃಢ? | ಗಾಂಜಾ ಅಮಲಲ್ಲೆ ನಡೆಯಿತಾ ಕೃತ್ಯ?
Anandpura pete

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೇಟೆಯಲ್ಲಿ ಲಾಂಗ್‌ ಹಿಡಿದು ಓಡಾಡಿದ ಆರೋಪಿಗಳನ್ನ ಆನಂದಪುರ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಆರೋಪಿಗಳು ಮಾದಕವಸ್ತು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. 

ಮೊನ್ನೆ ಭಾನುವಾರ ಆನಂದಪುರ ಪೇಟೆಯಲ್ಲಿ ಯುವಕನೊಬ್ಬ ಲಾಂಗ್ ಹಿಡಿದು ವಾಹನಗಳತ್ತ ಬೀಸುತ್ತಾ ಓಡಾಡಿದ್ದ. ಆತನನ್ನು ಉಪಾಯದಿಂದ ಹಿಡಿದು ಮಾರಕಾಸ್ತ್ರ ಕಿತ್ತುಕೊಂಡ ಸ್ಥಳೀಯರು ಆ ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ಆತನನ್ನು ಸ್ಟೇಷನ್‌ಗೆ ಒಪ್ಪಿಸಿದ್ದರು. ಈ ಬಳಿಕ  ಪೊಲೀಸರು ನಾಲ್ವರನ್ನು ಬಂಧಿಸಿದ್ದರು. 

ಆನಂದಪುರ ಹತ್ತಿರ ಯಡೇಹಳ್ಳಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ನಾಲ್ವರು ಯುವಕರು ನಂತರ ಪೇಟೆಗೆ ಬಂದು ಅಂಗಡಿಯೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದರು. ಆ ಬಳಿಕ ನಾಲ್ವರ ಪೈಕಿ ಓರ್ವ ಯುವಕ ಲಾಂಗ್‌ ಹಿಡಿದು ಅಟ್ಟಹಾಸ ಮೆರೆಯಲು ಮುಂದಾಗಿದ್ದ. ಸ್ಥಳೀಯರಿಂದ ಘಟನೆ ಸಣ್ಣಮಟ್ಟಕ್ಕೆ ತಿಳಿಯಾಗಿತ್ತು. 

ಪ್ರಕರಣ ದಾಖಲಿಸಿದ್ದ ಪೊಲೀಸರು ಮೂವರು ಯುವಕರನ್ನ ಕಾಡೊಂದರಲ್ಲಿ ಹಿಡಿದು ತಂದು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದರು. ಇದೀಗ ಆರೋಪಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ರಾಜ್ಯ ಮಟ್ಟದ ಪತ್ರಿಕೆಯೊಂದು ವರದಿ ಮಾಡಿದೆ.  

 

A group of four youths created a disturbance at a shop in Anandapura pete, Shivamogga district. One of them was brandishing a machete, causing panic among the locals. The police arrested the four youths and medical tests confirmed that they had consumed marijuana.