ಯಡೂರು ಅಬ್ಬಿಪಾಲ್ಸ್‌ ನಲ್ಲಿ ಬಳ್ಳಾರಿ ಯುವಕ ನೀರು ಪಾಲು | ಬೆಂಗಳೂರಿಗರಿಗೆ ಇದು ಎಚ್ಚರಿಕೆ?

A young man from Ballari drowned in the Abbi Falls in Shivamogga district. He was part of a group from Bengaluru that had come to see the falls

ಯಡೂರು ಅಬ್ಬಿಪಾಲ್ಸ್‌ ನಲ್ಲಿ ಬಳ್ಳಾರಿ ಯುವಕ ನೀರು ಪಾಲು | ಬೆಂಗಳೂರಿಗರಿಗೆ ಇದು ಎಚ್ಚರಿಕೆ?
Abbi Falls in Shivamogga district

SHIVAMOGGA | MALENADUTODAY NEWS | Jun 24, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅಬ್ಬಿ ಫಾಲ್ಸ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇಲ್ಲಿನ ಫಾಲ್ಸ್‌ ನೋಡಲು ಬಂದಿದ್ದ ಬಳ್ಳಾರಿ ಮೂಲದ ಯುವಕನೊಬ್ಬ ನೀರುಪಾಲಾಗಿದ್ದಾನೆ.  

ಯಡೂರು ಸಮೀಪದ ಅಬ್ಬಿ ಜಲಪಾತ ನೋಡಲು ಬೆಂಗಳೂರಿನಿಂದ ತಂಡವೊಂದು ಬಂದಿತ್ತು. ಪಾಲ್ಸ್‌ ನೋಡುತ್ತಾ ಬಂಡೆಯಿಂದ ಬಂಡೆಗೆ ಹತ್ತಿ ಹೋಗುತ್ತಿದ್ದ ತಂಡದಲ್ಲಿದ್ದ ವಿನೋದ್‌ ಬಂಡೆಯೊಂದರಿಂದ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.ಈತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಎಂದು ತಿಳಿದು ಬಂದಿದೆ. 

ಅಬ್ಬಿಫಾಲ್ಸ್‌ ಮಳೆಗಾಲದಲ್ಲಿ ಅಪಾಯಕಾರಿ ಎಂಬುದು ಗೊತ್ತಿರುವ ವಿಚಾರವೇ. ಇದೇ ಕಾರಣಕ್ಕೆ ಪಾಲ್ಸ್‌ ಬಳಿಗೆ ಹೋಗದಂತೆ  ಕಂದಕ ಹೊಡೆಯಲಾಗಿದೆ. ಆದಾಗ್ಯು ಬೆಂಗಳೂರಿನಿಂದ ಬಂದ ತಡ ಕಂದಕ ದಾಟಿ ಪಾಲ್ಸ್‌ ಬಳಿಗೆ ಹೋಗಿದೆ. ಮಳೆ ಹಿನ್ನೆಲೆಯಲ್ಲಿ ಕಲ್ಲಿನ ಮೇಲೆ ಪಾಚಿ ಕಟ್ಟಿದ್ದು ಕಾಲುಜಾರುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ಬಂಡೆ ಮೇಲೆ ನಿಂತಿದ್ದ ಯುವಕನ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. 

ಸದ್ಯ ಆತನಿಗಾಗಿ ಹುಡುಕಾಟ ನಡೆಯುತ್ತಿದೆ.  ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.