Lingadahalli theft case |‌ ಪೊಲೀಸ್‌ ಠಾಣೆ ಹಿಂಭಾಗದಲ್ಲಿ ವಾಸವಿದ್ದ ಕಳ್ಳ| ಸೂಳೆಬೈಲು ತೌಸೀಫ್‌ ಸೇರಿ ಇಬ್ಬರು ಅರೆಸ್ಟ್‌

Lingadahalli theft case |‌ Chikkamagaluru police have arrested two persons from Shivamogga

Lingadahalli theft case  |‌  ಪೊಲೀಸ್‌ ಠಾಣೆ ಹಿಂಭಾಗದಲ್ಲಿ ವಾಸವಿದ್ದ ಕಳ್ಳ|  ಸೂಳೆಬೈಲು ತೌಸೀಫ್‌ ಸೇರಿ ಇಬ್ಬರು ಅರೆಸ್ಟ್‌
Lingadahalli theft case , Chikkamagaluru police , Shivamogga

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ  

ನೆರೆಯ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕುನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಇಬ್ಬರು ನಿವಾಸಿಗಳನ್ನ ಬಂಧಿಸಲಾಗಿದೆ. ಸೂಳೆಬೈಲು ನಿವಾಸಿ ತೌಸೀಫ್‌ ಉಲ್ಲಾ  ಮತ್ತು  ತುಂಗಾ ನಗರ ಪೊಲೀಸ್ ಠಾಣೆ ಹಿಂಭಾಗದ ನಿವಾಸಿ ಮಹಮ್ಮದ್ ರಿಯಾಜ್  ಬಂಧಿತರು.

ಏನಿದು ಪ್ರಕರಣ

ತರೀಕೆರೆ ತಾಲ್ಲೂಕು,  ಲಿಂಗದಹಳ್ಳಿಯಲ್ಲಿ  ಕೆಲವು ಮನೆಗಳಲ್ಲಿ ‍ಕಳ್ಳತನವಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದರು. ಕಳೆದ ಮೇ ತಿಂಗಳು  21, 22 ಮತ್ತು 23ರಂದು ಈ ಭಾಗದಲ್ಲಿ ಸರಣಿ ಕಳ್ಳತನ ನಡೆದಿದ್ದರಿಂದ ಪೊಲೀಸರು ಪ್ರಕರಣವನ್ನು ಸೀರಿಯಸ್‌ ಆಗಿ ತೆಗೆದುಕೊಂಡಿದ್ದರು.  ಲಿಂಗದಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಕುಮಾರ್ ವೈ.ಎಸ್ ಮತ್ತು ಸಿಬ್ಬಂದಿ ತಂಡ ತನಿಖೆಯಲ್ಲಿ ಯಶಸ್ಸು ಸಾಧಿಸಿದ್ದು ಶಿವಮೊಗ್ಗದ ಇಬ್ಬರನ್ನ ಬಂಧಿಸಿದೆ. ಅಲ್ಲದೆ ಆರೋಪಿಗಳಿಂದ  ₹4 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.